ಭಾರತೀಯ ಚಿತ್ರರಂಗದ ಬಹುಬೇಡಿಕೆಯ ತಾರೆ ಸಮಂತಾ ರುತ್ ಪ್ರಭು. ಇತ್ತೀಚೆಗೆ ನಟಿ ಯಾವ ಹೊಸ ಸಿನಿಮಾಗಳನ್ನೂ ಘೋಷಿಸಿಲ್ಲ. ಶೂಟಿಂಗ್ಗಳಲ್ಲಿ ಭಾಗಿಯಾಗುತ್ತಿಲ್ಲ. ತಾವು ಒಪ್ಪಿಕೊಂಡಿದ್ದ ಎರಡು ಸಿನಿಮಾ ಕೆಲಸಗಳನ್ನು ಕೂಡ ಪೂರ್ಣಗೊಳಿಸಿದ್ದಾರೆ. ಏಕೆಂದರೆ ಅವರು ಕೊಂಚ ಕಾಲ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಮಯೋಸಿಟಿಸ್ ವಿರುದ್ಧ ಹೋರಾಡುತ್ತಿರುವ ನಟಿ ಪ್ರಸ್ತುತ ಆರೋಗ್ಯ ಚೇತರಿಕೆಗೆ ಗಮನ ಕೊಟ್ಟಿದ್ದಾರೆ.
ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದು ರಿಲ್ಯಾಕ್ಸ್ ಮೂಡ್ನಲ್ಲಿರುವ ಸ್ಯಾಮ್ ಸದ್ಯ ಖಾಸಗಿ ಸಮಯವನ್ನು ಆನಂದಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ವಿದೇಶ ಪ್ರವಾಸ, ಮೂವಿ ಟೈಮ್, ಸ್ನೇಹಿತರೊಡನೆ ಮೋಜು ಮಸ್ತಿ ಎಂದು ಸಮಯ ಕಳೆಯುತ್ತಿದ್ದಾರೆ. ದಿನನಿತ್ಯ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಹೀಗಾಗಿ ನಟಿಯ ಆರೋಗ್ಯದ ಬಗ್ಗೆ ಅಭಿಮಾನಿಗಳು ಹೆಚ್ಚು ಆತಂಕಕ್ಕೆ ಒಳಗಾಗಿಲ್ಲ.
ಸಮಂತಾ ಇನ್ಸ್ಟಾಗ್ರಾಮ್ ಸ್ಟೋರಿ: ನಟಿ ಸಮಂತಾ ರುತ್ ಪ್ರಭು ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ ಎಂಬುದು ನಿಮಗೆ ತಿಳಿದೇ ಇದೆ. ಸಂದರ್ಭಕ್ಕೆ ತಕ್ಕಂತೆ ಪೋಸ್ಟ್ ಹಂಚಿಕೊಳ್ಳುತ್ತಲೇ ಇರುತ್ತಾರೆ. ಫಿಲಾಸಫಿ ಕೋಟ್ಸ್ ಇಮೇಜ್ಗಳನ್ನು ಶೇರ್ ಮಾಡುತ್ತಿರುತ್ತಾರೆ. ಆರೋಗ್ಯದ ಬಗ್ಗೆ ಗಮನ ಹರಿಸುತ್ತಿರುವ ತಾರೆ ಹೊಸ ಪ್ರೀತಿಯನ್ನು ಕಂಡುಕೊಂಡಿರುವುದಾಗಿ ಸ್ಟೋರಿ ಹಾಕಿಕೊಂಡಿದ್ದಾರೆ. "ಹೊಳೆಯುವ ನೀರಿನ ಬಗ್ಗೆ ಹೊಸ ಪ್ರೀತಿಯನ್ನು ಕಂಡುಕೊಂಡೆ. ಹೊಸ ನಿರ್ಬಂಧಗಳಿಂದ ಹೊಸ ಆವಿಷ್ಕಾರಗಳು (New found love for sparkling water. With new restrictions come new discoveries)" ಎಂದು ಬರೆದುಕೊಂಡಿದ್ದಾರೆ. ಐಸ್ ವಾಟರ್ ಫೋಟೋವನ್ನು ಹಂಚಿಕೊಂಡಿದ್ದಾರೆ.