ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ಕಿ ಕೌಶಲ್ ಅವರ ಮುಂದಿನ ಸಿನಿಮಾ 'ಸ್ಯಾಮ್ ಬಹದ್ದೂರ್' (Sam Bahadur). ಮೇಘನಾ ಗುಲ್ಜಾರ್ ನಿರ್ದೇಶನದ ಚಿತ್ರ ಡಿಸೆಂಬರ್ 1ರಂದು ವಿಶ್ವಾದ್ಯಂತದ ಥಿಯೇಟರ್‌ಗಳಲ್ಲಿ ತೆರೆಕಾಣಲಿದೆ. ಸಾನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಟ್ರೇಲರ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಅದ್ಧೂರಿ ಕಾರ್ಯಕ್ರಮಕ್ಕಾಗಿ ಚಿತ್ರತಂಡ ನವದೆಹಲಿ ತಲುಪಿದೆ. ವಿಕ್ಕಿ ಮತ್ತು ಸಾನ್ಯಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಸ್ಟೋರಿ ಶೇರ್ ಮಾಡಿದ್ದಾರೆ.
'ಸ್ಯಾಮ್ ಬಹದ್ದೂರ್' ಟ್ರೇಲರ್ ಇಂದು ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರತಂಡ ದೆಹಲಿಗೆ ಆಗಮಿಸಿದೆ. ವಿಕ್ಕಿ ಕೌಶಲ್ ಅವರು ನಿರ್ದೇಶಕಿ ಮೇಘನಾ ಗುಲ್ಜಾರ್ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ನವದೆಹಲಿಗೆ ಆಗಮಿಸಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಮೇಘನಾ ವಿಕ್ಕಿ ಹೆಗಲ ಮೇಲೆ ಒರಗಿ ಫೋಟೋ ಕ್ಲಿಕ್ಕಿಸಿಕೊಂಡಿರುವುದನ್ನು ನೋಡಬಹುದು.
ವಿಕ್ಕಿ ಕೌಶಲ್ ಇನ್‌ಸ್ಟಾಗ್ರಾಮ್ ಸ್ಟೋರಿ ವಿಕ್ಕಿ ಮಾತ್ರವಲ್ಲದೇ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಸಾನ್ಯಾ ಮಲ್ಹೋತ್ರಾ ಸಹ ಇನ್ಸ್ಟಾ ಸ್ಟೋರಿ ಶೇರ್ ಮಾಡಿದ್ದಾರೆ. ಆಸಕ್ತಿಕರ ಕ್ಯಾಪ್ಷನ್ ಮೂಲಕ ಅಭಿಮಾನಿಗಳ ಮೊಗದಲ್ಲಿ ನಗು ತರಿಸಿದ್ದಾರೆ. ಸ್ಟೋರಿಯಲ್ಲಿ, "ದೆಹಲಿ ಆಗಯೇ ಹೈ, ಗೂಗಲ್ ಮ್ಯಾಪ್ ಪರ್ ಅಂಧ್ ವಿಶ್ವಾಸ್ ಕರ್ತೆ ಹುಯೇ (ಗೂಗಲ್ ಮ್ಯಾಪ್ ಅನ್ನು ನಂಬಿ, ದೆಹಲಿ ತಲುಪಿದೆವು)" ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ವಿಕ್ಕಿ ತಮಾಷೆಯಾಗಿ ಪ್ರತಿಕ್ರಿಯಿಸಿ, "ಸುಮ್ಮನೆ ಮೆಟ್ರೋ ಸವಾರಿ ಮಾಡಬೇಡಿ, ಸೀ ಯೂ ಲೇಟರ್, ಎಸ್!" ಎಂದು ಬರೆದಿದ್ದಾರೆ.
ಸಾನ್ಯಾ ಮಲ್ಹೋತ್ರಾ ಇನ್‌ಸ್ಟಾಗ್ರಾಮ್ ಸ್ಟೋರಿ ಇದನ್ನೂ ಓದಿ:ಮಿನುಗುವ ಉಡುಗೆಯಲ್ಲಿ ಚೆಂದುಳ್ಳಿ ಚೆಲುವೆಯರು: ಕಣ್ಮನ ಸೆಳೆದ ಸಾರಾ, ಕಿಯಾರಾ, ಕೃತಿ ಕಾಂತಿ
ಸ್ಯಾಮ್ ಬಹದ್ದೂರ್ ಟ್ರೇಲರ್ ಬಿಡುಗಡೆಯ ದಿನಾಂಕ ಘೋಷಿಸಲು ವಿಕ್ಕಿ ಕೌಶಲ್ ಅವರನ್ನೊಳಗೊಂಡ ಹೊಸ ಪೋಸ್ಟರ್ ಅನ್ನು ಅನಾವರಣಗೊಳಿಸಲಾಗಿತ್ತು. ಭಾರತದ ಮೊದಲ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಜೀವನಾಧಾರಿತ ಕಥೆಯೇ 'ಸ್ಯಾಮ್ ಬಹದ್ದೂರ್'. ಸ್ಯಾಮ್ ಮಾಣೆಕ್ ಶಾ ಪಾತ್ರದಲ್ಲಿ ನಟಿಸಿರುವ ವಿಕ್ಕಿ ಕೌಶಲ್, ಸೈನಿಕರ ನಡುವೆ ನಿಂತ ಪೋಸ್ಟರ್ ಹಂಚಿಕೊಂಡ ತಂಡ, ಟ್ರೇಲರ್ ರಿಲೀಸ್ ಡೇಟ್ ತಿಳಿಸಿತ್ತು. ವಿಕ್ಕಿ ಕೌಶಲ್ ಅವರು ಸ್ಯಾಮ್ ಮಾಣೆಕ್ ಶಾ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆಂಬುದು ಪೋಸ್ಟರ್ನಲ್ಲೇ ತಿಳಿಯುತ್ತದೆ. ನಿಷ್ಠೆ ಮತ್ತು ರಾಷ್ಟ್ರ ಸೇವೆಯನ್ನು ಸಂಕೇತಿಸುವಂತಿರುವ ಪೋಸ್ಟರ್ ಹಂಚಿಕೊಂಡ ಚಿತ್ರತಂಡ, ''ಭಾರತೀಯ ಸೇನೆಗೆ, ರಾಷ್ಟ್ರಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟ ವ್ಯಕ್ತಿಯ ಕಥೆ. ಟ್ರೇಲರ್ ನಾಳೆ ಬಿಡುಗಡೆ ಆಗಲಿದೆ'' ಎಂದು ಬರೆದುಕೊಂಡಿತ್ತು.
ಇದನ್ನೂ ಓದಿ:ಹ್ಯಾಪಿ ಬರ್ತ್ಡೇ ಕಮಲ್ ಹಾಸನ್! ಮೂರು ದಶಕಗಳ ನಂತರ ಮಣಿರತ್ನಂ 'Thug Life'ನಲ್ಲಿ ಅಭಿನಯ
1971ರ ಇಂಡೋ ಪಾಕ್ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನಾ ಮುಖ್ಯಸ್ಥರಾಗಿದ್ದ ಸ್ಯಾಮ್ ಮಾಣೆಕ್ ಶಾ ಜೀವನವನ್ನು ತೆರೆ ಮೇಲೆ ತರುವ ಪ್ರಯುತ್ನವಿದು. ಸಾನ್ಯಾ ಮಲ್ಹೋತ್ರಾ ಅವರು ವಿಕ್ಕಿ ಕೌಶಲ್ ಪತ್ನಿಯಾಗಿ ನಟಿಸಿದ್ದಾರೆ. ಫಾತಿಮಾ ಸನಾ ಶೇಖ್ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದು, ಐತಿಹಾಸಿಕ ಘಟನೆಗಳು ಚಿತ್ರದಲ್ಲಿವೆ.