ಕರ್ನಾಟಕ

karnataka

ETV Bharat / entertainment

ಟೈಗರ್​ 3 ಶೂಟಿಂಗ್​: ಭರ್ಜರಿ ಆ್ಯಕ್ಷನ್​ ಸೀನ್​ ಪೂರ್ಣ, ಸಲ್ಲು - ಶಾರುಖ್​​ ವಿಡಿಯೋ ಲೀಕ್​! - ಸಲ್ಮಾನ್ ಶಾರುಖ್ ಶೂಟಿಂಗ್

ಶೂಟಿಂಗ್​ ಸೆಟ್​ ಒಂದರಿಂದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ವಿಡಿಯೋ ಲೀಕ್ ಆಗಿದ್ದು, 'ಟೈಗರ್ 3' ಸಿನಿಮಾದ್ದು ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ.

Salman Shah Rukh in tiger 3
ಸಲ್ಮಾನ್ ಶಾರುಖ್ ಟೈಗರ್​ 3 ಶೂಟಿಂಗ್

By

Published : Jun 2, 2023, 7:13 PM IST

ಬಾಲಿವುಡ್ ಸೂಪರ್‌ ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ 'ಪಠಾಣ್‌' ಚಿತ್ರದಲ್ಲಿ ತೆರೆ ಹಂಚಿಕೊಂಡು ಮೋಡಿ ಮಾಡಿದ್ದರು. ವಿವಾದಗಳ ನಡುವೆಯೇ ತೆರೆಕಂಡ ಈ ಚಿತ್ರ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿ ಮಾಡಿದವು. ಅವರು ಮತ್ತೆ ಒಟ್ಟಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಟೈಗರ್ 3'. ಈ ಸ್ಟಾರ್​ ನಟರ ಅದ್ಭುತ ದೃಶ್ಯ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ಮಧ್ಯೆ, ಇಬ್ಬರು ನಟರು ಚಿತ್ರದ ಸೆಟ್‌ಗೆ ಹೋಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ವಿಶ್ವಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಬಾಲಿವುಡ್​ ಸೂಪರ್​ ಸ್ಟಾರ್​ಗಳಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ತಮ್ಮ ಚಿತ್ರೀಕರಣ ಮುಗಿಸಿದ ವಾರಗಳ ನಂತರ 'ಟೈಗರ್ 3' ಸೆಟ್‌ನ ಹೊಸ ವಿಡಿಯೋ ವೈರಲ್ ಆಗಿದೆ. ಕಳೆದ ತಿಂಗಳು, ಸಲ್ಮಾನ್ ಮತ್ತು ಎಸ್‌ಆರ್‌ಕೆ ತಮ್ಮ ಮುಂದಿನ ಸ್ಪೈ ಚಿತ್ರಕ್ಕಾಗಿ ಅದ್ಭುತ ಆ್ಯಕ್ಷನ್ ಸೀಕ್ವೆನ್ಸ್‌ನಲ್ಲಿ ಸಹಕರಿಸಿ ಸಖತ್​ ಸುದ್ದಿ ಮಾಡಿದ್ದರು.

ವೀಕ್ಷಕರು ಹಿಂದೆಂದೂ ನೋಡದಂತಹ ಅನುಭವವನ್ನು ನೀಡಲು ಬರೋಬ್ಬರಿ 35 ಕೋಟಿ ರೂಪಾಯಿ ಮೌಲ್ಯದ ಸೆಟ್ ಅನ್ನು ಇದಕ್ಕೆ ನಿರ್ಮಿಸಲಾಗಿತ್ತು. ಶೂಟಿಂಗ್​ ಸೆಟ್​ಗೆ ಇಷ್ಟೊಂದು ಖರ್ಚಾಗಿದೆ ಎಂದರೆ ಸಿನಿಮಾ ಹೇಗಿರಬಹುದು ಎಂಬ ಕಲ್ಪನಾ ಲೋಕದಲ್ಲಿ ಅಭಿಮಾನಿಗಳಿದ್ದಾರೆ.

ಅಭಿಮಾನಿಗಳ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋದಲ್ಲಿ, ಟೈಗರ್​​ 3 ಸೆಟ್‌ ಮಾತ್ರವಲ್ಲದೇ ಈ ಇಬ್ಬರು ಸ್ಟಾರ್ ಸೆಲೆಬ್ರಿಟಿಗಳ ನೋಟವನ್ನು ತೋರಿಸಿದೆ. ಸಲ್ಮಾನ್ ಖಾನ್​​ ಕಾರ್ಗೋ ಪ್ಯಾಂಟ್ ಮತ್ತು ಬ್ರೌನ್ ಟೀ ಶರ್ಟ್​ ಧರಿಸಿ ತನ್ನ ಫಿಟ್​ ಅಂಡ್​ ಫೈನ್​​ ಮೈಕಟ್ಟು ಪ್ರದರ್ಶಿಸಿದರೆ, ಶಾರುಖ್ ಖಾನ್​ ಬ್ಲ್ಯಾಕ್​ ಟೀ ಶರ್ಟ್ ಮತ್ತು ಕಾರ್ಗೋ ಪ್ಯಾಂಟ್‌ನಲ್ಲಿ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರು ನಟರು ಸೆಟ್‌ಗೆ ಬರುತ್ತಿರುವುದನ್ನು ಕಾಣಬಹುದು. ಶಾರುಖ್ ಅವರು 'ಪಠಾಣ್​' ಚಿತ್ರದಲ್ಲಿ ಕಾಣಿಸಿಕೊಂಡಂತೆ ಮ್ಯಾನ್ ಬನ್ ಹೇರ್ ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಪಠಾಣ್​ ಮತ್ತು ಟೈಗರ್​ 3 ಸ್ಟೋರಿಯಲ್ಲಿ ಲಿಂಕ್​ ಇರಲಿದೆ ಎಂಬ ವಿಚಾರ ಸದ್ದು ಮಾಡುತ್ತಿದೆ.

ಇದನ್ನೂ ಓದಿ:ಚೇತನ್ ಗಡಿಪಾರು ಭೀತಿ: ಕೇಂದ್ರ ಸರ್ಕಾರದ ಆದೇಶದ ಮೇಲಿನ ಮಧ್ಯಂತರ ತಡೆಯಾಜ್ಞೆ ವಿಸ್ತರಣೆ

ವರದಿಗಳ ಪ್ರಕಾರ, ಮಧ್ ದ್ವೀಪದ ಸೆಟ್‌ನಲ್ಲಿ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಶಾರೂಖ್​ ಅವರ ನೋಟವು ಪಠಾಣ್‌ ಸಿನಿಮಾ ನೆನಪಿಸುತ್ತಿದ್ದು, ಅಭಿಮಾನಿಗಳು ಚಿತ್ರದ ಬಗ್ಗೆ ತಮ್ಮ ಊಹೆಯನ್ನು ಮುಮದುವರಿಸಿದ್ದಾರೆ. ಈ ವಿಡಿಯೋಗಳಿಗೆ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಅಭಿಮಾನಿಗಳು ಸ್ಟಾರ್ ನಟರ ನೋಟದ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದರೆ, ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಈ ವಿಡಿಯೋ ಪಠಾಣ್‌ ಚಿತ್ರದ್ದೇ ಆಗಿರಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ, ಕೆಲವರು ಇದು ಅವರ ಮುಂಬರುವ ಚಿತ್ರ ಟೈಗರ್ 3ರ ಸೆಟ್‌ನಿಂದಲೇ ಇರಬಹುದೆಂದು ಹೇಳಿದ್ದಾರೆ. ಟೈಗರ್ ಚಿತ್ರದ ಮೂರನೇ ಭಾಗವನ್ನು ಮನೀಶ್ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಇದು ದೀಪಾವಳಿ ಸಂದರ್ಭ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ZHZB: 'ಸರ್ಕಾರಿಂದ ಸಿಗುವ ಮನೆ ಹೊಂದಲು ದಂಪತಿಯ ವಿಚ್ಛೇದನ ನಾಟಕ'

ABOUT THE AUTHOR

...view details