ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಬಾಲಿವುಡ್ನ ಸೂಪರ್ ಸ್ಟಾರ್ಗಳು. ಇವರಿಬ್ಬರು 'ಪಠಾಣ್' ಚಿತ್ರದಲ್ಲಿ ತೆರೆ ಹಂಚಿಕೊಂಡು ಮೋಡಿ ಮಾಡಿದ್ದರು. ವಿವಾದಗಳಿಂದಲೇ ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಈವರೆಗಿನ ಎಲ್ಲಾ ದಾಖಲೆಗಳನ್ನು ಪುಡಿ ಮಾಡಿದ್ದವು. ಅವರು ಮತ್ತೆ ಜೊತೆಯಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಟೈಗರ್ 3'. ಈ ಸ್ಟಾರ್ ನಟರ ಕಾಂಬೋವನ್ನು ಮತ್ತೊಮ್ಮೆ ಬೆಳ್ಳಿ ಪರದೆಯಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಇದೀಗ ಚಿತ್ರತಂಡ ಸ್ಟಾರ್ ನಟರ ಫ್ಯಾನ್ಸ್ಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಸಲ್ಮಾನ್ ಅವರ 'ಟೈಗರ್ 3' ಬಿಡುಗಡೆಯೊಂದಿಗೆ ನಮ್ಮ ದೀಪಾವಳಿಯನ್ನು ವಿಶೇಷವಾಗಿಸಲು ಸಿದ್ಧವಾಗಿದೆ. ಇದೀಗ ಟೀಸರ್ ದಿನಾಂಕ ಮತ್ತು ಬಿಡುಗಡೆ ಕುರಿತು ಹೊಸ ಅಪ್ಡೇಟ್ ಬಂದಿದೆ. ವರದಿಗಳ ಪ್ರಕಾರ, ಟೈಗರ್ 3 ಟೀಸರ್ ಅನ್ನು ಶಾರುಖ್ ಖಾನ್ ಅವರ ಮುಂಬರುವ ಜವಾನ್ ಚಿತ್ರದ ಜೊತೆಗೆ ಜೋಡಿಸಲಾಗಿದೆ. ಸೆಪ್ಟೆಂಬರ್ 7, ಜವಾನ್ ಸಿನಿಮಾ ಬಿಡುಗಡೆಯಂದೇ ಟೈಗರ್ 3 ಟೀಸರ್ ರಿಲೀಸ್ ಆಗಲಿದೆ.
ಚಲನಚಿತ್ರೋದ್ಯಮದ ಟ್ರ್ಯಾಕರ್ ಮನೋಬಾಲಾ ವಿಜಯಬಾಲನ್ ಇತ್ತೀಚೆಗೆ ಟ್ವಿಟರ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಆಗಸ್ಟ್ 15 ರಂದು ಕ್ಯಾರೆಕ್ಟರ್ ಟೀಸರ್, ಸೆಪ್ಟೆಂಬರ್ 7 ರಂದು ಟೈಗರ್ 3 ಟೀಸರ್ (ಜವಾನ್ ಬಿಡುಗಡೆಯೊಂದಿಗೆ), ಸೆಪ್ಟೆಂಬರ್ 28 ರಂದು ಟ್ರೈಲರ್ 1, ಅಕ್ಟೋಬರ್ 6 ರಂದು ಮೊದಲ ಹಾಡು, ಅಕ್ಟೋಬರ್ 16 ರಂದು ಎರಡನೇ ಹಾಡು, ಅಕ್ಟೋಬರ್ 25 ರಂದು ಟ್ರೇಲರ್ 2, ನವೆಂಬರ್ 2 ರಂದು ಶಾರುಖ್ ಖಾನ್ ಪೋಸ್ಟರ್, ನವೆಂಬರ್ 7 ಮತ್ತು 9 ರ ನಡುವೆ ಪ್ರೋಮೋ ಮತ್ತು ನವೆಂಬರ್ 10 ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ.