ಮುಂಬೈ:ಸಲ್ಮಾನ್ ಖಾನ್ ಅವರ ಅಭಿಮಾನಿ ಬಾಕ್ಸರ್ ನಿಖಾತ್ ಝರೀನ್ ಅವರು ಮಂಗಳವಾರ ಸಲ್ಮಾನ್ ಅವರನ್ನು‘ಕಿಸಿ ಕಾ ಬಾಯ್ ಕಿಸಿ ಕಾ ಜಾನ್‘ ಚಿತ್ರದ ಸೆಟ್ನಲ್ಲಿ ಬೇಟಿ ಮಾಡಿ ಅವರದೇ ಹಳೆ ಹಾಡಿಗೆ ಹೆಜ್ಜೆ ಹಾಕಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹರಿಬಿಟ್ಟಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ ಮತ್ತು ಸಾವಿರಾರು ಕಮೆಂಟ್ಸ್ಗಳು ಹರಿದು ಬರುತ್ತಿದೆ.
ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನ 12ನೇ ಆವೃತ್ತಿಯಲ್ಲಿ ಭಾರತದ ನಿಖತ್ ಝರೀನ್ 5-0 ಅಂತರದ ಮೇಲುಗೈ ಸಾಧಿಸಿ ಚಿನ್ನದ ಪದಕ ಗಳಿಸುವ ಮೂಲಕ ದಾಖಲೆಯ ಪುಸ್ತಕಕ್ಕೆ ಸೇರಿದ್ದಾರೆ. ನಿಜಾಮಾಬಾದ್(ತೆಲಂಗಾಣ) ಮೂಲದ ಬಾಕ್ಸರ್ ವಿಶ್ವ ಬಾಕ್ಸಿಂಗ್ನಲ್ಲಿ ಚಿನ್ನಗಳಿಸಿದ 5ನೇಯ ಭಾರತೀಯ ಮಹಿಳೆಯಾಗಿದ್ದಾರೆ.
ಇದಕ್ಕೂ ಮೊದಲು ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್(2002, 2005, 2006, 2010, ಮತ್ತು 2018) ಸರಿತಾ ದೇವಿ(2006), ಜೆನ್ನಿ ಆರ್ಎಲ್(2006) ಮತ್ತು ಲೇಖಾ ಕೆ.ಸಿ(2006) ಬಾಕ್ಸಿಂಗ್ನಲ್ಲಿ ಚಿನ್ನದ ಪದಕ ಗಳಿಸಿದ ಮಹಿಳೆಯರು.