ಕರ್ನಾಟಕ

karnataka

ETV Bharat / entertainment

Dono: ಡೋನೊ ಚಿತ್ರತಂಡಕ್ಕೆ ಸೂಪರ್​ ಸ್ಟಾರ್ ಸಲ್ಮಾನ್​ ಖಾನ್​ ಶುಭ ಹಾರೈಕೆ - ಡೋನೊ ಪ್ರೀಮಿಯರ್ ಈವೆಂಟ್​

Dono Premiere Event: ಡೋನೊ ಚಿತ್ರದ ಗ್ರ್ಯಾಂಡ್ ಪ್ರೀಮಿಯರ್ ಈವೆಂಟ್​ನಲ್ಲಿ ಸೂಪರ್​ ಸ್ಟಾರ್ ಸಲ್ಮಾನ್​ ಖಾನ್​ ಭಾಗಿಯಾಗಿದ್ದರು.

Salman Khan with Dono team
ಡೋನೊ ಚಿತ್ರತಂಡದೊಂದಿಗೆ ಸಲ್ಮಾನ್​ ಖಾನ್​

By ETV Bharat Karnataka Team

Published : Oct 6, 2023, 12:16 PM IST

ಡೋನೊ ಸಿನಿಮಾ ಅಕ್ಟೋಬರ್​​ 5ರಂದು ತೆರೆಕಂಡಿದೆ. ಮುಂಬೈನಲ್ಲಿ ಗುರುವಾರದಂದು ಡೋನೊ ಚಿತ್ರದ ಗ್ರ್ಯಾಂಡ್ ಪ್ರೀಮಿಯರ್ ಈವೆಂಟ್​ ನಡೆದಿದ್ದು, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಭಾಗವಹಿಸಿದ್ದರು.

ಚಿತ್ರರಂಗಕ್ಕೆ ಹೊಸಬರ ಆಗಮನ: ಸೂರಜ್ ಬರ್ಜತ್ಯಾ ಅವರ ಪುತ್ರ ಅವ್ನೀಶ್​​ ಬರ್ಜಾತ್ಯಾ ನಿರ್ದೇಶನದಲ್ಲಿ ಡೋನೊ ಚಿತ್ರ ಮೂಡಿ ಬಂದಿದೆ. ನಟಿ ಸನ್ನಿ ಡಿಯೋಲ್ ಅವರ ಕಿರಿಯ ಪುತ್ರ ರಾಜ್​​​ವೀರ್ ಡಿಯೋಲ್ ಮತ್ತು ಪೂನಂ ಧಿಲ್ಲೋನ್ ಅವರ ಪುತ್ರಿ ಪಲೋಮಾ ಅವರ ಬಾಲಿವುಡ್ ಚೊಚ್ಚಲ ಚಿತ್ರವಿದು. ಗುರುವಾರ ರಾತ್ರಿ, ನಟ ಸಲ್ಮಾನ್ ಖಾನ್​ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಡೊನೊ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಸಲ್ಮಾನ್​ ಖಾನ್​ ಶುಭ ಹಾರೈಕೆ: ಟೈಗರ್​ ಸ್ಟಾರ್ ಸಲ್ಮಾನ್​ ಖಾನ್​​​ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಡೋನೊ ಈವೆಂಟ್​ನ ಒಂದೆರಡು ಫೋಟೋಗಳನ್ನು, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಹೊಸ ಪ್ರತಿಭೆಗಳಾದ ಅವ್ನೀಶ್​, ರಾಜ್‌ವೀರ್ ಮತ್ತು ಪಲೋಮಾ ಅವರಿಗೆ ಶುಭ ಹಾರೈಸಿದ್ದಾರೆ. ಪೋಸ್ಟ್ ಶೇರ್ ಮಾಡಿರುವ ನಟ, "ಸೂರಜ್, ಭಾಗ್ಯಶ್ರೀ ಮತ್ತು ನನಗೆ ಏನು ಸಿಕ್ಕಿದೆಯೋ ಅದು ಡೋನೊ ಚಿತ್ರದ ಮೂಲಕ ಅವ್ನೀಶ್​, ರಾಜ್‌ವೀರ್ ಮತ್ತು ಪಲೋಮಾ ಅವರಿಗೂ ಸಿಗಲಿದೆ ಎಂದು ಆಶಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.

ನಟ ಶೇರ್ ಮಾಡಿರುವ ಮೊದಲ ಫೋಟೋ, ನಿರ್ದೇಶಕ ಸೂರಜ್ ಬರ್ಜತ್ಯಾ, ಅವ್ನೀಶ್​​ ಬರ್ಜತ್ಯಾ, ಸನ್ನಿ ಡಿಯೋಲ್, ರಾಜ್‌ವೀರ್ ಡಿಯೋಲ್, ಪೂನಂ ಧಿಲ್ಲೋನ್ ಮತ್ತು ಪಲೋಮಾ ಧಿಲ್ಲೋನ್ ಅವರೊಂದಿಗೆ ಸಲ್ಮಾನ್ ಖಾನ್ ಕ್ಯಾಮರಾಗೆ ಪೋಸ್ ಕೊಡುತ್ತಿರುವ ಫೋಟೋ. ಎರಡನೇ ಪೋಸ್ಟ್​​ನಲ್ಲಿ, ಡೋನೊ ಗ್ರ್ಯಾಂಡ್ ಪ್ರೀಮಿಯರ್ ಈವೆಂಟ್‌ನಲ್ಲಿ ನಿರ್ದೇಶಕ ಸೂರಜ್ ಬರ್ಜತ್ಯಾ ಅವರೊಂದಿಗೆ ಸಲ್ಮಾನ್ ಸಂವಾದ ನಡೆಸಿರುವ ಶಾರ್ಟ್ ವಿಡಿಯೋ ಇದೆ.

ಇದನ್ನೂ ಓದಿ:'ಮನಸ್ಸಿನ ಒಳಗೊಂದು, ಹೊರಗೊಂದು ಸಾಧ್ಯವಿಲ್ಲ; ದರ್ಶನ್ ಬಳಿ ಕೇಳಲು ಎರಡ್ಮೂರು ಪ್ರಶ್ನೆಗಳಿವೆ': ಬರ್ತ್ ಡೇ ಬಾಯ್ ಧ್ರುವ ಸರ್ಜಾ!

ಗ್ರ್ಯಾಂಡ್ ಡೆಸ್ಟಿನೇಶನ್ ವೆಡ್ಡಿಂಗ್ ಹಿನ್ನೆಲೆಯಲ್ಲಿ ಡೋನೊ ಚಿತ್ರದ ಕಥೆ ನಡೆಯುತ್ತದೆ. ಚಿತ್ರದ ಕಥಾವಸ್ತು ದೇವ್ ಪಾತ್ರಧಾರಿ ಸುತ್ತ ಹೆಣೆಯಲಾಗಿದೆ. ದೇವ್​​ ಪಾತ್ರವನ್ನು ರಾಜ್‌ವೀರ್ ಡಿಯೋಲ್ ನಿರ್ವಹಿಸಿದ್ದಾರೆ. ಅವರು ತಮ್ಮ ಆತ್ಮೀಯ ಸ್ನೇಹಿತೆಯನ್ನು ಪ್ರೀತಿಸುತ್ತಾರೆ, ಆದರೆ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗೋದಿಲ್ಲ. ಪ್ರೀತಿಸಿದಾಕೆಯ ಮದುವೆ ಸ್ಥಳಕ್ಕೆ ತಲುಪುತ್ತಿದ್ದಂತೆ, ಪರಿಹಾರವನ್ನು ಹುಡುಕುತ್ತಾರೆ. ಅಲ್ಲಿ ದೇವ್,​​ ಮೇಘನಾ ಎಂಬುವವರನ್ನು ಭೇಟಿಯಾಗುತ್ತಾರೆ. ಈ ಪಾತ್ರವನ್ನು ಪಲೋಮಾ ನಿರ್ವಹಿಸಿದ್ದಾರೆ. ಅದ್ಧೂರಿಯಾಗಿ ಭಾರತೀಯ ಸಂಪ್ರದಾಯದ ಪ್ರಕಾರ ವಿವಾಹ ಆಚರಣೆ ನಡೆಯುವ ಈ ಸ್ಥಳದಲ್ಲಿ ಇಬ್ಬರು (ದೇವ್,​​ ಮೇಘನಾ) ಅಪರಿಚಿತರ ನಡುವೆ ಹೃದಯಸ್ಪರ್ಶಿ ಪ್ರಯಾಣ ಪ್ರಾರಂಭವಾಗುತ್ತದೆ. ಪ್ರಣಯ, ಸಂಬಂಧ, ಹೃದಯಕ್ಕೆ ಹತ್ತಿರವಾದ ವಿಷಯಗಳ ಸಮ್ಮಿಶ್ರಣವೇ ಡೋನೊ ಸಿನಿಮಾ ಕಥೆ.

ಇದನ್ನೂ ಓದಿ:ವಿಡಿಯೋ: ರಸ್ತೆ ಬದಿ ಹೃದಯಾಘಾತಕ್ಕೊಳಗಾದ ಅಪರಿಚಿತ: ಎದೆ ಒತ್ತಿ ಜೀವ ಉಳಿಸಿದ ನಟ ಗುರ್ಮೀತ್ ಚೌಧರಿ!

ABOUT THE AUTHOR

...view details