ದಬಾಂಗ್ ನಟ ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಸಾಕಷ್ಟು ಬ್ಯುಸಿ ಶೆಡ್ಯೂಲ್ ನಡುವೆ ನಟನ ಕಡೆಯಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ ಇದೆ.
ಈ ಈದ್ ಸಂದರ್ಭ ಸಲ್ಮಾನ್ ಖಾನ್ ದುಬೈನಲ್ಲಿ ತಮ್ಮ ಅಭಿಮಾನಿಗಳಿಗಾಗಿ ಸಮಯ ಮೀಸಲಿಡಲಿದ್ದಾರೆ. ಅಭಿಮಾನಿಗಳೊಂದಿಗೆ ಸಮಯ ಕಳೆಯಲಿದ್ದಾರೆ. ಈ ಬಗ್ಗೆ ಸ್ವತಃ ನಟ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಲ್ಲಿ 'ಕಿಕ್' ಏರಿಸಿದ್ದಾರೆ. ಏಪ್ರಿಲ್ 24ರಂದು ದುಬೈನ ಫ್ಲೋಟ್ ಕ್ಲಬ್‌ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಪಾರ್ಟಿ ಮಾಡುವುದಾಗಿ ಸಲ್ಮಾನ್ ತಿಳಿಸಿದ್ದಾರೆ.
ಸಲ್ಲು ಅವರ ಬಹು ನಿರೀಕ್ಷಿತ ಚಿತ್ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಬಿಡುಗಡೆಗೆ ಸಿದ್ಧವಾಗಿದೆ. ಈದ್ ಸಂದರ್ಭ (ಏಪ್ರಿಲ್ 21) ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು, ಅಭಿಮಾನಿಗಳಿಗಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. 'ನಾವು ಏಪ್ರಿಲ್ 24ರಂದು ದುಬೈನಲ್ಲಿ ಭೇಟಿಯಾಗೋಣ' ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಸಲ್ಮಾನ್ ಖಾನ್ ಹಂಚಿಕೊಂಡಿಎಉವ ಪೋಸ್ಟರ್‌ನಲ್ಲಿ ಲೈವ್ ಎಂದು ಬರೆದಿದ್ದು, ಸಾಕಷ್ಟು ಕುತೂಹಲ ಮೂಡಿದೆ. ಇದರೊಂದಿಗೆ ಸಾಮಾನ್ಯ ಟಿಕೆಟ್, ಭೇಟಿ, ಟೇಬಲ್ ಬುಕಿಂಗ್ ಎಂದು ಸಂಪರ್ಕ ಸಂಖ್ಯೆಗಳನ್ನೂ ಪೋಸ್ಟರ್‌ನಲ್ಲಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ WWW.VKREVENTS.COMಗೆ ಸಂಪರ್ಕಿಸಬುದು. ಸಲ್ಮಾನ್ ಖಾನ್ ಇನ್ಸ್ಟಾಗ್ರಾಮ್ ಪೋಸ್ಟರ್‌ನಲ್ಲಿ ಸಂಪೂರ್ಣ ಮಾಹಿತಿ ಇದೆ. ನೀವು ಸಲ್ಮಾನ್ ಖಾನ್ ಅಭಿಮಾನಿಗಳೇ?, ನೀವೂ ಭೇಟಿಯಾಗುವ ಆಲೋಚನೆಯಲ್ಲಿದ್ದೀರೇ? ಮತ್ಯಾಕೆ ತಡ ಟಿಕೆಟ್ ಬುಕ್ ಮಾಡಿ.
ಫರ್ಹಾದ್ ಸಾಮ್ಜಿ ಆ್ಯಕ್ಷನ್ ಕಟ್ ಹೇಳಿರುವ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಕನ್ನಡತಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಶೆಹನಾಜ್ ಗಿಲ್, ರಾಘವ್, ವೆಂಕಟೇಶ್ ದಗ್ಗುಬಾಟಿ ಮತ್ತು ಭೂಮಿಕಾ ಚಾವ್ಲಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.