ಕರ್ನಾಟಕ

karnataka

ETV Bharat / entertainment

ಮುಂಬೈನಲ್ಲಿ 19 ಅಂತಸ್ತಿನ ಹೋಟೆಲ್ ನಿರ್ಮಿಸಲಿರುವ ಸಲ್ಮಾನ್ ಖಾನ್! - etv bharat kannada

ನಟ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬ ಮುಂಬೈನಲ್ಲಿ ಐಷಾರಾಮಿ ಹೋಟೆಲ್ ನಿರ್ಮಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.

Salman Khan to build a 19-storey sea-facing hotel in Mumbai
ಮುಂಬೈನಲ್ಲಿ 19 ಅಂತಸ್ತಿನ ಹೋಟೆಲ್ ನಿರ್ಮಿಸಲಿರುವ ಸಲ್ಮಾನ್ ಖಾನ್!

By

Published : May 20, 2023, 5:58 PM IST

ಹೈದರಾಬಾದ್: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ಐಷಾರಾಮಿ ಹೋಟೆಲ್ ನಿರ್ಮಿಸಲು ಯೋಜಿಸುತ್ತಿದ್ದಾರೆ. ಖಾನ್‌ಗಳು ಪ್ರಮುಖ ಸ್ಥಳದಲ್ಲಿ ಹೋಟೆಲ್ ನಿರ್ಮಿಸುತ್ತಿದ್ದಾರೆ ಮತ್ತು ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ಸಮುದ್ರಕ್ಕೆ ಎದುರಾಗಿರುವ ಪ್ಲಾಟ್ ಅನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಇನ್ನು 19 ಅಂತಸ್ತಿನ ಹೋಟೆಲ್ ನಿರ್ಮಾಣಕ್ಕೆ BMC ಅನುಮೋದನೆಯನ್ನು ನೀಡಿದೆ.

ವರದಿಯ ಪ್ರಕಾರ, ಈ ಪ್ಲಾಟ್ ಮೂಲತಃ ಸ್ಟಾರ್ಲೆಟ್ ಸಿಎಚ್ಎಸ್ ವಸತಿ ಕಟ್ಟಡಕ್ಕೆ ಸೇರಿದ್ದು, ನಂತರ ಅಲ್ಲಿ ಖಾನ್​ಗಳು ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದರು ಮತ್ತು ಆರಂಭದಲ್ಲಿ ಆಸ್ತಿಯನ್ನು ವಸತಿ ಕಟ್ಟಡವಾಗಿ ನವೀಕರಿಸಲು ಯೋಜಿಸಿದ್ದರು. ಆದರೆ, ಅವರ ಕುಟುಂಬವು ತಮ್ಮ ಯೋಜನೆಗಳನ್ನು ಬದಲಾಯಿಸಲಾಯಿತು. ನಟನ ತಾಯಿ ಸಲ್ಮಾ ಖಾನ್ ಹೆಸರಿನಲ್ಲಿ ಹೋಟೆಲ್ ನಿರ್ಮಿಸುವ ಪ್ರಸ್ತಾಪವನ್ನು ಒಂದು ವರ್ಷದ ಹಿಂದೆ ಸಲ್ಲಿಸಿದ್ದರು.

ಖಾನ್ ಅವರ ವಾಸ್ತುಶಿಲ್ಪಿ ಸಪ್ರೆ & ಅಸೋಸಿಯೇಟ್ಸ್ ಈಗ ನಗರದ ಹೊಸ ಅಭಿವೃದ್ಧಿ ನಿಯಂತ್ರಣ ಮತ್ತು ಪ್ರಚಾರ ನಿಯಂತ್ರಣ (ಡಿಸಿಪಿಆರ್ -2034) ಅಡಿಯಲ್ಲಿ "69.90 ಮೀಟರ್ ಎತ್ತರದ ವಾಣಿಜ್ಯ ಕೇಂದ್ರೀಕೃತ ಹವಾನಿಯಂತ್ರಿತ ಕಟ್ಟಡ" ಕ್ಕಾಗಿ ನವೀಕರಿಸಿದ ಪರಿಷ್ಕೃತ ಯೋಜನೆಯನ್ನು ಹಂಚಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಅವರ ಈ ಆಸ್ತಿಯು ಮೂರು ಹಂತದ ನೆಲಮಾಳಿಗೆಗಳನ್ನು ಹೊಂದಿರುತ್ತದೆ ಎಂದು ತಿಳಿದು ಬಂದಿದೆ.

ಮೊದಲ ಮತ್ತು ಎರಡನೇ ಮಹಡಿಯಲ್ಲಿ ಕೆಫೆ ಮತ್ತು ರೆಸ್ಟೋರೆಂಟ್, ಮೂರನೇ ಮಹಡಿಯಲ್ಲಿ ಜಿಮ್ ಮತ್ತು ಈಜುಕೊಳ ಮತ್ತು ನಾಲ್ಕನೇ ಮಹಡಿಯಲ್ಲಿ ಇತರೆ ಸೇವೆಗಳು ಇರಲಿದೆ. 5 ಮತ್ತು 6 ನೇ ಮಹಡಿಗಳು ಕನ್ವೆನ್ಷನ್ ಸೆಂಟರ್ ಮತ್ತು 7 ರಿಂದ 19 ನೇ ಮಹಡಿಗಳು ಹೋಟೆಲ್ ಬಳಕೆಗೆ ಇರಲಿವೆ. ಅವರ ಕುಟುಂಬದ ಪ್ಲಾಟ್‌ನಲ್ಲಿ ಇನ್ನೂ ನಿರ್ಮಾಣದ ಯಾವುದೇ ಚಿಹ್ನೆ ಇಲ್ಲದಿದ್ದರೂ, ಅಲ್ಲಿ ಒಂದು ಕಟ್ಟಡವಿದೆ, ಅದನ್ನು ಐಷಾರಾಮಿ ಹೋಟೆಲ್ ಮಾಡಲು ನವೀಕರಿಸಲಾಗುತ್ತದೆ. 2011 ರಲ್ಲಿ ಸಲ್ಮಾನ್ ಅವರ ತಂದೆ ಸಲೀಂ ಖಾನ್ ಅವರು ಆಗಾಗ್ಗೆ ರಿಯಲ್ ಎಸ್ಟೇಟ್​ನಿಂದ ಭೂಮಿ ಖರೀದಿಸುತ್ತಾರೆ ಎಂದು ಹೇಳಿಕೊಂಡಿದ್ದರು.

ಸದ್ಯ ಸಲ್ಮಾನ್ ಖಾನ್ ತಮ್ಮ ಮುಂಬರುವ ಚಿತ್ರ ಟೈಗರ್ 3 ಚಿತ್ರೀಕರಣದ ಸಮಯ ದಲ್ಲಿ ಉಂಟಾದ ಭುಜದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಜನಪ್ರಿಯ ಚಲನಚಿತ್ರ ಪಠಾಣ್​ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದೆ ಸಲ್ಮಾನ್ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದಲ್ಲಿ ನಟಿಸಿದ್ದರು. ಈ ಚಲನಚಿತ್ರಕ್ಕೆ ಅಭಿಮಾನಿಗಳು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇದನ್ನೂ ಓದಿ:ಲಾಂಗ್​​​ ಡ್ರೈವ್​ ಹೊರಟ ಚೊಚ್ಚಲ ಬಸುರಿ ಇಲಿಯಾನಾ ಡಿಕ್ರೂಜ್​

ವಿಕ್ಕಿ ಕೌಶಲ್​ ಮೇಲೆ ಅಭಿಮಾನಿ ಪ್ರೀತಿ:ಬಾಲಿವುಡ್ ನಟ ವಿಕ್ಕಿ ಕೌಶಲ್ ತಮ್ಮ ಮುಂಬರುವ ಚಿತ್ರ 'ಜರಾ ಹಟ್ಕೆ ಜರಾ ಬಚ್ಕೆ' ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರಚಾರ ಕಾರ್ಯಕ್ರಮದಲ್ಲಿ ಅಭಿಯೊಬ್ಬರು ನೆಚ್ಚಿನ ನಟನ ಮೇಲೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಆಗಮಿಸಿದ ಮಹಿಳಾ ಅಭಿಮಾನಿಯೊಬ್ಬರು ಭಾವುಕರಾದರು. "ಕತ್ರಿನಾ ಅವರು ನನ್ನ ಜೀವನದ ಭಾಗವಾಗಿದ್ದಾರೆ ಎಂದು ವಿಕ್ಕಿ ಕೌಶಲ್ ಹೇಳಿದ್ದಾರೆ. ಆದರೆ, ವಿಕ್ಕಿ ಕೌಶಲ್ ನನ್ನ ಲೈಫ್​. ಈ ಜನ್ಮದಲ್ಲಿ ಕತ್ರಿನಾ ನಿಮ್ಮವಳಾಗಿದ್ದರೂ, ಮುಂದಿನ ಏಳು ಜನ್ಮಗಳಲ್ಲಿ ನೀವು ನನ್ನವರು, ನನ್ನವರು ಮಾತ್ರ ಆಗಿರುತ್ತೀರಿ" ಎಂದು ಹೇಳಿದರು. ಅಭಿಮಾನಿಯ ಮಾತಿಗೆ ಪ್ರತಿಕ್ರಿಯಿಸಿದ ವಿಕ್ಕಿ, ನಮಸ್ಕರಿಸಿ, ಮುಗುಳ್ನಕ್ಕು ಮತ್ತು ಕೈಗಳನ್ನು ಮಡಚಿದರು. ಆಕೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದಾಗ ಅವರು ಕೂಡ 'ಐ ಲವ್ ಯೂ ಟೂ' ಎಂದು ಹೇಳಿದರು. ಬಳಿಕ ತಮ್ಮ ಅಭಿಮಾನಿಗಳೊಂದಿಗೆ ನಟ ಸೆಲ್ಫಿಗೆ ಪೋಸ್ ನೀಡಿದರು.

ABOUT THE AUTHOR

...view details