ಬಾಲಿವುಡ್ ಬ್ಯಾಚುಲರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಮಕ್ಕಳ ಮೇಲಿರುವ ಪ್ರೀತಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆಗಾಗ್ಗೆ ತಮ್ಮ ಸಂಬಂಧಿ ಮಕ್ಕಳ ಜೊತೆ ಸಮಯ ಕಳೆಯುತ್ತಾರೆ. ದಬಾಂಗ್ ಸ್ಟಾರ್ ಒಮ್ಮೆ ತಮ್ಮದೇ ಮಗುವನ್ನು ಹೊಂದುವ ಬಗ್ಗೆ ಯೋಚಿಸಿದ್ದರು ಎಂಬ ವಿಷಯ ಬಹಿರಂಗಗೊಂಡಿದೆ.
ಇತ್ತೀಚೆಗೆ, ಆಪ್ ಕಿ ಅದಾಲತ್ ಶೋನಲ್ಲಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಭಾಗಿಯಾಗಿದ್ದರು. ಅವರ ಮದುವೆಯ ಯೋಜನೆಗಳ ಬಗ್ಗೆ ಪ್ರಶ್ನೆಗಳು ಎದುರಾದವು. ಅದಕ್ಕೆ ಪ್ರತಿಕ್ರಿಯಿಸಿರುವ ಸಲ್ಲು, "ಯೋಜನೆ ಇತ್ತು, ಅದು ಸೊಸೆಗಾಗಿ ಅಲ್ಲ, ಮಗುವಿಗಾಗಿ. ಆದರೆ ಭಾರತೀಯ ಕಾನೂನುಗಳ ಪ್ರಕಾರ, ಅದು ಸಾಧ್ಯವಿಲ್ಲ. ಈಗ ನಾವು ಏನು ಮಾಡಬೇಕು, ಹೇಗೆ ಮಾಡಬೇಕೆಂದು ನೋಡೋಣ'' ಎಂದು ತಿಳಿಸಿದರು.
ಸಲ್ಮಾನ್ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ ಮತ್ತು ಅವರೊಂದಿಗೆ ಹೇಗೆ ಆತ್ಮೀಯ ಬಾಂಧವ್ಯ ಹೊಂದುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಅವರು ತಮ್ಮ ಸೋದರಳಿಯ ಅಹಿಲ್ ಶರ್ಮಾನನ್ನು ಹೇಗೆ ಇಷ್ಟಪಡುತ್ತಾರೆ ಮತ್ತು ಆಗಾಗ್ಗೆ ಅವರೊಂದಿಗೆ ಹೇಗೆ ಸಮಯ ಕಳೆಯುತ್ತಾರೆ ಎಂಬುದನ್ನು ನೀವು ನೋಡಿರುತ್ತೀರಿ.
ಕರಣ್ ಜೋಹರ್ ಅವರ ಮದುವೆಯ ಬಗ್ಗೆ ಸಲ್ಮಾನ್ ಪ್ರಶ್ನಿಸಿದ್ದ ದಿನದ ಬಗ್ಗೆ ಕೇಳಿದಾಗ, ಅವರು (ಕರಣ್) ಈಗ ಎರಡು ಮಕ್ಕಳ ತಂದೆಯಾಗಿದ್ದಾರೆ ಎಂದು ಸಲ್ಮಾನ್ ಪ್ರತಿಕ್ರಿಯಿಸಿದರು. "ಹಾಗಾಗಿ ನಾವು ಆ ಪ್ರಕ್ರಿಯೆಗೆ ಪ್ರಯತ್ನಿಸುತ್ತಿದ್ದೇನೆ. ಆದರೆ, ಆ ಕಾನೂನು ಬದಲಾಗಿರಬಹುದು, ಆದ್ದರಿಂದ ನೋಡೋಣ. ನನಗೆ ಮಕ್ಕಳೆಂದರೆ ಇಷ್ಟ. ನಮಗೆ ಇಡೀ ಜಿಲ್ಲೆ, ಇಡೀ ಗ್ರಾಮವಿದೆ. ಆದರೆ ನನ್ನ ಮಗುವಿನ ತಾಯಿ ನನ್ನ ಹೆಂಡತಿಯಾಗುತ್ತಾಳೆ'' ಎಂದು ತಿಳಿಸಿದ್ದಾರೆ.