ಕರ್ನಾಟಕ

karnataka

ETV Bharat / entertainment

ಕಿಸಿ ಕಾ ಭಾಯ್​ ಕಿಸಿ ಕಾ ಜಾನ್​ ಶೂಟಿಂಗ್​ ಕಂಪ್ಲೀಟ್: ಸಲ್ಲು ಲುಕ್​ಗೆ ಫ್ಯಾನ್ಸ್ ಫಿದಾ - ಸಲ್ಮಾನ್​ ಖಾನ್ ಲೇಟೆಸ್ಟ್ ನ್ಯೂಸ್

ಕಿಸಿ ಕಾ ಭಾಯ್​ ಕಿಸಿ ಕಾ ಜಾನ್​ ಚಿತ್ರದ ಶೂಟಿಂಗ್​ ಪೂರ್ಣಗೊಂಡಿದ್ದು, ಈದ್​ಗೆ ತೆರೆಕಾಣಲಿದೆ. ಈಗಲೇ ಅಭಿಮಾನಿಗಳು ಚಿತ್ರ ವೀಕ್ಷಣೆಗೆ ಕಾತರರಾಗಿದ್ದಾರೆ.

Salman Khan
ಸಲ್ಮಾನ್​ ಖಾನ್​

By

Published : Feb 8, 2023, 6:10 PM IST

ಸತತ ಸೋಲನ್ನನುಭವಿಸಿದ್ದ ಹಿಂದಿ ಚಿತ್ರರಂಗ ಮತ್ತೆ ಯಶಸ್ಸಿನ ಹಾದಿ ತಲುಪಿದೆ. ಪಠಾಣ್​ ಸಿನಿಮಾ​ ಸೂಪರ್​ ಹಿಟ್ ಆಗಿ ಬಾಲಿವುಡ್​ಗೆ ಬೂಸ್ಟರ್ ಡೋಸ್​ ಕೊಟ್ಟಿದೆ. ಹಿಂದಿ ಸಿನಿ ರಂಗದಲ್ಲಿ ಉತ್ತಮ ವರ್ಷಾರಂಭ ಆಗಿದ್ದು, ಅನೇಕ ಚಿತ್ರಗಳು ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಬಾಲಿವುಡ್​​ ಸೂಪರ್​ ಸ್ಟಾರ್ ಸಲ್ಮಾನ್​ ಖಾನ್​ ಅಭಿನಯದ ಕಿಸಿ ಕಾ ಭಾಯ್​ ಕಿಸಿ ಕಾ ಜಾನ್​ ಸಿನಿಮಾ ಕೂಡ ಈ ಸಾಲಿನ ಬಹುನಿರೀಕ್ಷಿತ ನಿಸಿಮಾವಾಗಿದ್ದು, ಚಿತ್ರದ ಶೂಟಿಂಗ್​ ಕಂಪ್ಲೀಟ್ ಆಗಿದೆ.

ವಿವಾದಗಳ ನಡುವೆ ತೆರೆಕಂಡ ಬಾಲಿವುಡ್​ ಕಿಂಗ್​ ಖಾನ್​ ಅಭಿನಯದ ಪಠಾಣ್​ ಚಿತ್ರ ಅದ್ಭುತ ಯಶಸ್ಸು ಕಂಡಿದೆ. ಇದೀಗ ಸ್ಟಾರ್​ ನಟನ ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಸಲ್ಮಾನ್​ ಖಾನ್​ ಸಿನಿಮಾ ಅಂದ ಮೇಲೆ ನಿರೀಕ್ಷೆ, ಕುತೂಹಲ ಹೆಚ್ಚೇ ಅಲ್ವಾ?. ಅದರಂತೆ ಕಿಸಿ ಕಾ ಭಾಯ್​ ಕಿಸಿ ಕಾ ಜಾನ್​ ಸಿನಿಮಾ ತನ್ನ ಚಿತ್ರೀಕರಣ ಪೂರ್ಣಗೊಳಿಸಿದ್ದು, ಪೋಸ್ಟ್ ಪ್ರೊಡಕ್ಷನ್​ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ನಟ ಸಲ್ಮಾನ್ ಖಾನ್​​ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದಿಂದ ತಮ್ಮ ಕ್ಲೀನ್ ಶೇವ್ ಲುಕ್‌ನ ಫೋಟೋ ಹಂಚಿಕೊಂಡಿರುವ ಸಲ್ಮಾನ್ ಖಾನ್​​, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಶೂಟಿಂಗ್​ ಕಂಪ್ಲೀಟ್. ಈದ್​ ಸಂದರ್ಭ ಸಿನಿಮಾ ತೆರೆಗೆ ಎಂದು ಬರೆದುಕೊಂಡಿದ್ದಾರೆ.

ಚಿತ್ರಕ್ಕೆ ಈ ಹಿಂದೆ ಕಭಿ ಈದ್ ಕಭಿ ದೀಪಾವಳಿ ಎಂದು ಟೈಟಲ್​ ಇಡಲಾಗಿತ್ತು. ನಂತರ ಕಿಸಿ ಕಾ ಭಾಯ್​ ಕಿಸಿ ಕಾ ಜಾನ್​ ಬದಲಾವಣೆ ಮಾಡಲಾಯಿತು. ಈ ಚಿತ್ರದಲ್ಲಿ ಸಲ್ಮಾನ್​ ಖಾನ್​ ಜೊತೆಗೆ ಪೂಜಾ ಹೆಗ್ಡೆ ಮತ್ತು ವೆಂಕಟೇಶ್ ದಗ್ಗುಬಾಟಿ ಕೂಡ ಇದ್ದಾರೆ. ಈ ಚಿತ್ರವನ್ನು ಸಲ್ಮಾನ್ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ಸಲ್ಮಾನ್ ಖಾನ್ ಫಿಲ್ಮ್ಸ್ ನಿರ್ಮಿಸಿದೆ. ಫರ್ಹಾದ್ ಸಾಮ್​ಜಿ ಈ ಚಿತ್ರಕ್ಕೆ ಆಕ್ಷನ್​ ಕಟ್ ಹೇಳಿದ್ದಾರೆ.

ಇದನ್ನೂ ಓದಿ:ಪತಿ ವಿರುದ್ಧ ದೂರು: ಪಾಪರಾಜಿಗಳಿಗೆ ಮಾಹಿತಿ ನೀಡುತ್ತಿದ್ದ ವೇಳೆ ಪ್ರಜ್ಞೆ ತಪ್ಪಿ ಬಿದ್ದ ರಾಖಿ ಸಾವಂತ್!

ಬಾಲಿವುಡ್​ ಕಿಂಗ್​ ಖಾನ್​ ಶಾರುಖ್, ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ ನಟನೆಯ ಪಠಾಣ್​ ಚಿತ್ರ ಭಾರೀ ವಿವಾದಗಳ ನಡುವೆಯೂ ಜನವರಿ 25ರಂದು ರಿಲೀಸ್​ ಆಗಿ ಅದ್ಭುತ ದಾಖಲೆ ಬರೆದಿದೆ. ಚಿತ್ರ ಬಿಡುಗಡೆ ಆದ 14 ದಿನಗಳಲ್ಲಿ 865 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಈ ಚಿತ್ರದಲ್ಲಿ ಸಲ್ಮಾನ್​ ಖಾನ್​ ಕೂಡ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಸ್ಟಾರ್​ ನಟರನ್ನು ಒಟ್ಟಿಗೆ ನೋಡಿದ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಶಾರುಖ್​ ಖಾನ್​ ಜೊತೆಗೆ ತೆರೆ ಹಂಚಿಕೊಂಡ ನಟ ಸಲ್ಮಾನ್​ ಖಾನ್​ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹರ್ಷ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:'ಪಠಾಣ್'ನಲ್ಲಿ ತೆರೆ ಹಂಚಿಕೊಂಡ ಬಗ್ಗೆ ಹರ್ಷ ವ್ಯಕ್ತಪಡಿಸಿದ ಶಾರುಖ್​, ಸಲ್ಮಾನ್​

''ಶಾರುಖ್ ಮತ್ತು ನಾನು (ಸಲ್ಮಾನ್​ ಖಾನ್​) ದೊಡ್ಡ ಪರದೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲು ಜನರು ಬಯಸಿದ್ದರು. ಅದು ನಮಗೆ ಗೊತ್ತಿತ್ತು. ಅದಕ್ಕಾಗಿ ಸೂಕ್ತ ಚಿತ್ರ ಬರಬೇಕಿತ್ತು. 'ಪಠಾಣ್' ಆ ವಿಶೇಷ ಸಿನಿಮಾ ಆಗಿದೆ ಎಂದು ನನಗೆ ಖುಷಿ ಆಗಿದೆ. ನಾವು 'ಕರಣ್ ಅರ್ಜುನ್' ಸಿನಿಮಾ ಮಾಡಿದಾಗ ಅದು ಕೂಡ ಸೂಪರ್​ ಹಿಟ್ ಆಗಿ ಹೊರಹೊಮ್ಮಿತ್ತು. ಇದೀಗ ಪಠಾಣ್​ ಕೂಡ ಸೂಪರ್​ ಹಿಟ್ ಆಗಿ ಹೊರಹೊಮ್ಮಿದೆ ಎಂದು ಹರ್ಷ ವ್ಯಕ್ತಪಡಿಸಿದ್ದರು..

ABOUT THE AUTHOR

...view details