ಕರ್ನಾಟಕ

karnataka

ETV Bharat / entertainment

'₹100 ಕೋಟಿ ಸಾಮಾನ್ಯವಾಗ್ಬಿಟ್ಟಿದೆ, ನಮ್ಮ ಗಮನ ₹1,000 ಕೋಟಿ ಮೇಲಿರಲಿ': ಸಲ್ಮಾನ್ ಖಾನ್ - Salman Khan movies

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಲಿವುಡ್​ ಭಾಯ್​​ಜಾನ್​ ಸಲ್ಮಾನ್​ ಖಾನ್​ ಬಾಕ್ಸ್​ ಆಫೀಸ್​ ಕಲೆಕ್ಷನ್​ ಬಗ್ಗೆ ಮಾತನಾಡಿದರು.

Salman Khan
ಸಲ್ಮಾನ್ ಖಾನ್

By ETV Bharat Karnataka Team

Published : Sep 22, 2023, 1:35 PM IST

ಬಾಲಿವುಡ್‌ ಸೂಪರ್​ ಸ್ಟಾರ್ ಸಲ್ಮಾನ್ ಖಾನ್‌ ಅವರ ಸಿನಿಮಾ 2023ರಲ್ಲಿ ಹೇಳುವಷ್ಟು ಸದ್ದು ಮಾಡಿಲ್ಲ. ಭಾಯಿಜಾನ್​ನ ಬ್ಲಾಕ್​ಬಸ್ಟರ್​ ಸಿನಿಮಾಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. ಈ ಸಾಲಿನಲ್ಲಿ ಸಲ್ಮಾನ್ ಖಾನ್ ಅಭಿನಯದ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರ ಬಿಡುಗಡೆ ಆಗಿತ್ತು. ಆದ್ರೆ ಈ ಚಿತ್ರ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಲಿಲ್ಲ. ಮುಂದಿನ ಬಹುನಿರೀಕ್ಷಿತ ಟೈಗರ್ 3 ಸಿನಿಮಾ ದೀಪಾವಳಿ ಸಂದರ್ಭ ತೆರೆಕಾಣಲಿದೆ. ಬಹುಬೇಡಿಕೆ ನಟನ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಪಂಜಾಬಿ ಸಿನಿಮಾ ಸ್ಟಾರ್​ ಗಿಪ್ಪಿ ಗ್ರೆವಾಲ್ ಅವರ ಮುಂಬರುವ ಚಿತ್ರ 'ಮೌಜಾ ಹಿ ಮೌಜಾ'ದ (Maujaan Hi Maujaan) ಟ್ರೇಲರ್ ಲಾಂಚ್​ ಈವೆಂಟ್​ನಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದರು. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸಲ್ಮಾನ್​ ಭಾಗಿಯಾಗಿದ್ದು, ತಮ್ಮದೇ ಸಿನಿಮಾ ಬಗ್ಗೆ ತಮಾಷೆ ಮಾಡುತ್ತಿರುವುದು ಕಂಡುಬಂತು. ಇಂದಿನ ಕಾಲದಲ್ಲಿ ಯಾವುದೇ ಚಿತ್ರ 100 ಕೋಟಿ ಗಳಿಸುವುದು ದೊಡ್ಡ ವಿಷಯವಲ್ಲ. ಪ್ರಸ್ತುತ ನಮ್ಮ ಗಮನ 1,000 ಕೋಟಿ ರೂ. ಕಲೆಕ್ಷನ್ ಮೇಲೆ ಇರಬೇಕು ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಇದನ್ನೂ ಓದಿ:RRR ಖ್ಯಾತಿಯ ಕೀರವಾಣಿ ಜೊತೆ ಅನುಪಮ್​​​​ ಖೇರ್: ಸಂಗೀತಾಭ್ಯಾಸದ ಸ್ಪೆಷಲ್​ ವಿಡಿಯೋ

ಸಲ್ಮಾನ್ ಖಾನ್ ತಮ್ಮ ಕೊನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ 110 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎಂದು ತಿಳಿಸಿದ್ದಾರೆ. ಆದ್ರೆ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿದ್ದವು. ದೊಡ್ಡ ಮಟ್ಟಿಗೆ ಸದ್ದು ಮಾಡುವಲ್ಲಿ ಸಿನಿಮಾ ಕೊಂಚ ಹಿನ್ನೆಡೆ ಕಂಡಿದೆ. ಪಂಜಾಬಿ ನಟ​ ಗಿಪ್ಪಿ ಗ್ರೆವಾಲ್ ಅವರ ಮುಂಬರುವ ಚಿತ್ರ 'ಮೌಜಾ ಹಿ ಮೌಜಾ'ದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಲ್ಮಾನ್ ಖಾನ್, 'ಈಗಿನ ಕಾಲದಲ್ಲಿ ಚಿತ್ರಗಳ ಗಳಿಕೆ, ಹಳೇ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸುತ್ತಿರುವುದನ್ನು ನೋಡಿದರೆ, 100 ಕೋಟಿ ರೂ. ಗಳಿಸುವುದು ಸಾಮಾನ್ಯ ಸಂಗತಿಯಾಗಿದೆ ಎಂದು ಹೇಳಬಹುದು. 400-500-600 ಅಂಕಿ-ಅಂಶಗಳು ಚಿತ್ರರಂಗಕ್ಕೆ ಬಹಳ ಮುಖ್ಯವಾಗಿವೆ. ಪ್ರಾದೇಶಿಕ ಸಿನಿಮಾ ಕೂಡ ಸದ್ಯ ಸರಿಸುಮಾರು 100 ಕೋಟಿ ರೂ. ಕಲೆಕ್ಷನ್ ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಗಮನ 1,000 ಕೋಟಿ ರೂ. ಕಲೆಕ್ಷನ್​ ಮೇಲಿರಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕರೀನಾ, ವಿಜಯ್​ ವರ್ಮಾ, ಜೈದೀಪ್​ ಅಹ್ಲಾವತ್​ ನಟನೆಯ 'ಜಾನೆ ಜಾನ್​' ಬಿಡುಗಡೆ: ಹೇಗಿದೆ ಸಿನಿಮಾ?

ಏಕ್ ಥಾ ಟೈಗರ್ (ಟೈಗರ್​ 1) ಸಿನಿಮಾ 2012ರಲ್ಲಿ ಬಿಡುಗಡೆ ಆಗಿದ್ದು, ಕಬೀರ್ ಖಾನ್ ಆ್ಯಕ್ಷನ್​ ಕಟ್​​ ಹೇಳಿದ್ದರು. 2017ರಲ್ಲಿ ಟೈಗರ್​ 2 ಸಿನಿಮಾ ಬಂತು. ಅಲಿ ಅಬ್ಬಾಸ್ ಜಾಫರ್ ಆ್ಯಕ್ಷನ್​ ಕಟ್​ ಹೇಳಿದ್ದ 'ಟೈಗರ್ ಜಿಂದಾ ಹೈ' ಕೂಡ ಸೂಪರ್​ ಹಿಟ್​ ಆಗಿತ್ತು. ಇದೀಗ ಮನೀಶ್​ ಶರ್ಮಾ ನಿರ್ದೇಶನದಲ್ಲಿ ಟೈಗರ್​ 3 ರೆಡಿ ಆಗಿದ್ದು, ದೀಪಾವಳಿಗೆ ತೆರೆಕಾಣಲಿದೆ. ಮೊದಲೆರಡು ಭಾಗಗಳಲ್ಲಿ ಇದ್ದ ನಟಿ ಕತ್ರಿನಾ ಕೈಫ್​ ಈ ಚಿತ್ರದಲ್ಲಿಯೂ ಮುಂದುವರಿದಿದ್ದಾರೆ.

ABOUT THE AUTHOR

...view details