ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಇದೇ ಏಪ್ರಿಲ್ 21ರಂದು ತೆರೆಕಾಣಲಿದೆ. ಚಿತ್ರತಂಡ ಸಿನಿಮಾ ಪ್ರಚಾರದಲ್ಲಿ ತೊಡಗಿದೆ. ಸಲ್ಮಾನ್ ಖಾನ್ ಅವರು ಜನಪ್ರಿಯ 'ದಿ ಕಪಿಲ್ ಶರ್ಮಾ ಶೋ'ನಲ್ಲಿ ತಮ್ಮ ಮುಂದಿನ ಚಿತ್ರವನ್ನು ಪ್ರಚಾರ ಮಾಡಲಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಆಗಿದ್ದು, ಸಂಪೂರ್ಣ ಎಪಿಸೋಡ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ಸಲ್ಮಾನ್ ಖಾನ್ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9:30ಕ್ಕೆ ಸೋನಿ ಟಿವಿಯಲ್ಲಿ ಪ್ರಸಾರವಾಗುವ ದಿ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರೂಪಕ ಕಪಿಲ್ ಶರ್ಮಾ ಅವರು ಸಲ್ಮಾನ್ ಅವರನ್ನು "ಜಾನ್" (ಪ್ರೇಮಿ) ಎಂದು ಕರೆಯುವ ಹಕ್ಕನ್ನು ಯಾರಿಗೆ ನೀಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಟ ಈ ತಪ್ಪನ್ನು ಮಾಡದಿರುವಂತೆ ಹಾಸ್ಯವಾಗಿ ಉತ್ತರಿಸಿದರು.
ಕಪಿಲ್ ಶರ್ಮಾ ಅವರು ಬಾಲಿವುಡ್ ಬ್ಯಾಚುಲರ್ ಸಲ್ಲು ಅವರಲ್ಲಿ ಪ್ರಶ್ನೆ ಕೇಳುವ ಮೂಲಕ ಪ್ರೋಮೋ ಪ್ರಾರಂಭವಾಗುತ್ತದೆ. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಎಂಬುದು ಸಿನಿಮಾ ಟೈಟಲ್ ಆಗಿದ್ದು ಜಾನ್ ಕುರಿತು ಪ್ರಶ್ನಿಸಿದ್ದಾರೆ. ಎಲ್ಲರೂ ನಿಮ್ಮನ್ನು ಭಾಯ್ ಎಂದು ಕರೆಯುತ್ತಾರೆ, ಆದರೆ ಈ ದಿನಗಳಲ್ಲಿ ನಿಮ್ಮನ್ನು ಜಾನ್ ಎಂದು ಕರೆಯುವ ಹಕ್ಕನ್ನು ಯಾರಿಗೆ ನೀಡಿದ್ದೀರಿ ಎಂದು ಕೇಳಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿರುವ ಸಲ್ಮಾನ್, ''ಜಾನ್ (ಜೀವ, ಜೀವನ, ಪ್ರೀತಿಪಾತ್ರರು) ಇಂದ ಆರಂಭವಾಗುತ್ತದೆ. ನಂತ ಜಾನ್ (ಜೀವ) ತೆಗೆಯುತ್ತಾರೆ. ಹಾಗಾಗಿ ನಾನು ಯಾರಿಗೂ ಈ ಹಕ್ಕನ್ನು ನೀಡಲು ಬಯಸುವುದಿಲ್ಲ. ಮೊದಲು ಅವರು ನಿಮಗೆ ಕರೆ ಮಾಡುತ್ತಾರೆ, ಮಾತನಾಡುತ್ತಾರೆ, ಬಣ್ಣಿಸುತ್ತಾರೆ ನಂತರ ಅವರು ನಿಮ್ಮ ಜೀವ ಪಡೆದುಕೊಳ್ಳುತ್ತಾರೆ ಎಂದು ತಿಳಿಸಿದರು. "ನಿಮ್ಮೊಂದಿಗೆ ಇರಲು ನನಗೆ ತುಂಬಾ ಸಂತೋಷವಾಗಿದೆ, ನಾನು ತುಂಬಾ ಅದೃಷ್ಟಶಾಲಿ" ಎಂದು ಹೇಳುತ್ತಾರೆ. ಸ್ವಲ್ಪ ಸಮಯದ ನಂತರ, ಪ್ರೀತಿಯನ್ನು ಘೋಷಿಸಿದ ತಕ್ಷಣ, ನಿಮ್ಮ ಜೀವನವು ನಾಶವಾಗುತ್ತದೆ ಎಂದು ಸಲ್ಮಾನ್ ಹೇಳಿದ್ದಾರೆ.