ಮುಂಬೈ (ಮಹಾರಾಷ್ಟ್ರ):ಅಭಿಮಾನಿಗಳುಕುತೂಹಲದಿಂದ ಕಾಯುತ್ತಿರುವ ಬಿಗ್ ಬಾಸ್ OTT2 ಸೀಸನ್ ಇಂದಿನಿಂದ ಪ್ರಾರಂಭಗೊಳ್ಳಲಿದೆ. ಬಾಲಿವುಡ್ನ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಕಾರ್ಯಕ್ರಮ ಹೋಸ್ಟ ಮಾಡಲಿದ್ದಾರೆ. ದಶಕಗಳಿಂದ ಕಿರುತೆರೆಯಲ್ಲಿ ಹೋಸ್ಟ್ ಮಾಡುತ್ತಿದ್ದ ಸಲ್ಮಾನ್ ಇದೀಗ ಒಟಿಟಿಯ ಬಿಗ್ ಬಾಸ್ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಮೊದಲ ಬಾರಿಗೆ ಸಲ್ಮಾನ್ ಖಾನ್ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಗ್ ಬಾಸ್ ಒಟಿಟಿ ಸೀಸನ್ 2 ಹೋಸ್ಟ್ ಮಾಡುತ್ತಿರುವ ವಿಚಾರ ತಿಳಿದು ಅವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಸಲ್ಮಾನ್ ಖಾನ್, 'ನಾನು ಯಾವಾಗಲೂ ಬಿಗ್ ಬಾಸ್‌ಗಾಗಿ ಎದುರು ನೋಡುತ್ತೇನೆ. ಬಿಗ್ ಬಾಸ್ OTT ನಲ್ಲಿ ಮೊದಲ ಬಾರಿಗೆ ಹೋಸ್ಟ್ ಮಾಡುತ್ತಿದ್ದು, ಇದು ತುಂಬಾ ಸೆನ್ಸಾರ್ಡ್ (ಅಶ್ಲೀಲತೆಯಿಂದ ಕೂಡಿರದ) ಆಗಿರಲ್ಲ ಎಂದು ನಾನು ಭಾವಿಸುತ್ತೇನೆ. ಒಂದು ವೇಳೆ ಹಾಗಿದ್ದಲ್ಲಿ, ನಾನೇ ಅದನ್ನು ಮಾಡರೇಟ್ ಮಾಡುತ್ತೇನೆ. ನಮ್ಮ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ನಡೆಯಬೇಕು ಹಾಗಾಗಿಯೇ ನಾನು ಬಿಗ್ ಬಾಸ್ OTT ನ ಭಾಗವಾಗಿದ್ದೇನೆ ಎಂದು ಹೇಳಿದರು.
ಈ ಬಾರಿ ಕರಣ್ ಮತ್ತು ಫರಾ ಅಲಭ್ಯದಿಂದಾಗಿ ನಾನೇ ಬಿಗ್ ಬಾಸ್ OTT2 ಹೋಸ್ಟ್ ಮಾಡಬೇಕಾಗಿದೆ ಎಂದು ಹೇಳಿದ ಸಲ್ಮಾನ್ ಖಾನ್ ಎರಡನೇ ಸೀಸನ್‌ನಲ್ಲಿ ಪ್ರೇಕ್ಷಕರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಇದೇ ವೇಳೆ ಹೇಳಿದ್ದಾರೆ.
ಬಿಗ್ ಬಾಸ್ OTT2 ಹೇಗೆ ನೋಡುವುದು:'ಬಿಗ್ ಬಾಸ್ OTT 2' ಅನ್ನು ಯಾವಾಗ ಮತ್ತು ಹೇಗೆ ನೋಡಬೇಕು ಎಂಬ ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಮೊದಲಿಗೆ ಬಿಗ್ ಬಾಸ್ OTT ವೇದಿಕೆಯಲ್ಲಿ ಪ್ರಸಾರವಾಗುತ್ತಿರುವುದರಿಂದ ಇಡೀ ಸೀಸನ್ ಅನ್ನು ನೀವು ಸಂಪೂರ್ಣ ಉಚಿತವಾಗಿ ವೀಕ್ಷಿಸಬಹುದಾಗಿದೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ನಿಮ್ಮ ಮೊಬೈಲ್ನಲ್ಲಿ ಜಿಯೋ ಸಿನಿಮಾವನ್ನು ಡೌನ್‌ಲೋಡ್ ಮಾಡಿ. ನಂತರ ಇಡೀ ಸೀಸ್ನ ಅನ್ನು ಎಲ್ಲಿ ಬೇಕಾದರೂ ಯಾವಾಗ ಬೇಕಾದರು ಆರಾಮವಾಗಿ ಆನಂದಿಸಬಹುದಾಗಿದೆ. ಕಾರ್ಯಕ್ರಮದ ಗ್ರ್ಯಾಂಡ್ ಪ್ರೀಮಿಯರ್ ಶನಿವಾರ ರಾತ್ರಿ 9ಗಂಟೆಯಿಂದ ಜಿಯೋ ಸಿನಿಮಾದಲ್ಲಿ ಪ್ರಸಾರ ಆಗಲಿದೆ.