ಕರ್ನಾಟಕ

karnataka

ETV Bharat / entertainment

'ಟೈಗರ್​ 3 ಲೀಕ್ ಆಗದಂತೆ ನೋಡಿಕೊಳ್ಳಿ'​: ಅಭಿಮಾನಿಗಳಲ್ಲಿ ಸಲ್ಮಾನ್​, ಕತ್ರಿನಾ ಮನವಿ! - tiger 3 leak

Tiger 3: ಟೈಗರ್​ 3 ಲೀಕ್ ಆಗದಂತೆ ನೋಡಿಕೊಳ್ಳುವಂತೆ ಅಭಿಮಾನಿಗಳಲ್ಲಿ ಸಲ್ಮಾನ್​ ಖಾನ್​, ಕತ್ರಿನಾ ಕೈಫ್​ ಮತ್ತು ಇಮ್ರಾನ್ ಹಶ್ಮಿ ಮನವಿ ಮಾಡಿದ್ದಾರೆ.

Katrina Kaif Salman Khan
ಕತ್ರಿನಾ ಸಲ್ಮಾನ್​ ನಟನೆಯ ಟೈಗರ್​ 3

By ETV Bharat Karnataka Team

Published : Nov 11, 2023, 4:25 PM IST

'ಟೈಗರ್ 3' ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಕೋಟ್ಯಂತರ ಅಭಿಮಾನಿಗಳಿಗೆ, ಸಿನಿಪ್ರಿಯರಿಗೆ ದೀಪಾವಳಿ ಹಬ್ಬದ ಉಡುಗೊರೆಯಾಗಿ ಈ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾ ವೀಕ್ಷಿಸಲು ತುದಿಗಾಲಿನಲ್ಲಿ ಕಾಯುತ್ತಿರುವ ಅಭಿಮಾನಿಗಳಿಗೆ ಚಿತ್ರದ ಕಲಾವಿದರಾದ ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಅವರು ಮನವಿಯಂತಿರುವ ವಿಶೇಷ ಸಂದೇಶ ಕಳುಹಿಸಿದ್ದಾರೆ. ತಮ್ಮ ಈ ಬಹುನಿರೀಕ್ಷಿತ ಸಿನಿಮಾ ವೀಕ್ಷಿಸಿದ ನಂತರ ಸ್ಪಾಯ್ಲರ್‌ (Spoilers) ಪೋಸ್ಟ್ ಮಾಡದಂತೆ ಮನವಿ ಮಾಡಿದ್ದಾರೆ.

ಇಮ್ರಾನ್​​ ಹಶ್ಮಿ ಇನ್​ಸ್ಟಾಗ್ರಾಮ್​ ಸ್ಟೋರಿ

ಇಸ್ಟಾಗ್ರಾಮ್‌ನಲ್ಲಿ ಸ್ಟೋರಿ ಶೇರ್ ಮಾಡಿರುವ ಸೂಪರ್​ ಸ್ಟಾರ್ ಸಲ್ಮಾನ್ ಖಾನ್​, "ನಾವು ಬಹಳ ಉತ್ಸಾಹದಿಂದ ಟೈಗರ್ 3 ಸಿನಿಮಾ ಮಾಡಿದ್ದೇವೆ. ನೀವು ಸಿನಿಮಾವನ್ನು ರಕ್ಷಿಸುತ್ತೀರೆಂದು ನಂಬಿದ್ದೇವೆ. ಸ್ಪಾಯ್ಲರ್‌ಗಳು ಅದ್ಭುತ ಸಿನಿಮೀಯ ಅನುಭವವನ್ನು ಹಾಳು ಮಾಡಬಹುದು. ನೀವು ಸರಿಯಾದುದ್ದನ್ನೇ ಮಾಡುತ್ತೀರಿ ಎಂದು ನಾವು ನಂಬುತ್ತೇವೆ. ಟೈಗರ್ 3 ನಿಮಗೆ ನಮ್ಮಿಂದ ದೀಪಾವಳಿ ಉಡುಗೊರೆಯಾಗಿದೆ ಎಂದು ನಾವು ನಂಬಿದ್ದೇವೆ'' ಎಂದು ಬರೆದುಕೊಂಡಿದ್ದಾರೆ.

ನಟಿ ಕತ್ರಿನಾ ಕೈಫ್ ಸಹ ಇದೇ ರೀತಿಯಾಗಿ ಇನ್​ಸ್ಟಾಗ್ರಾಮ್​ ಸ್ಟೋರಿ ಶೇರ್ ಮಾಡುವ ಮೂಲಕ ಸಿನಿಮಾ ಸ್ಪಾಯ್ಲ್ ಮಾಡದಂತೆ ಮನವಿ ಮಾಡಿದ್ದಾರೆ. ''ಟೈಗರ್​ 3 ಕಥೆಯಲ್ಲಿನ ಟ್ವಿಸ್ಟ್ ಅಂಡ್​​​ ಸರ್​​ಪ್ರೈಸಸ್ ಉತ್ತಮ ಸಿನಿಮೀಯ ಅನುಭವ ನೀಡಲಿದೆ. ಸಿನಿಮಾ ಲೀಕ್ ಮಾಡದಂತೆ ನಾವು ನಿಮ್ಮಲ್ಲಿ ವಿನಂತಿಸುತ್ತೇವೆ. ನಮ್ಮ ಪ್ರೀತಿಯ ಶ್ರಮವನ್ನು ರಕ್ಷಿಸುವ ಶಕ್ತಿ ನಿಮ್ಮಲ್ಲಿದೆ. ನಮ್ಮ ಸಿನಿಮಾ ನಿಮಗೆ ಅತ್ಯುತ್ತಮ ಮನರಂಜನೆ ನೀಡಲಿದೆ. ಧನ್ಯವಾದಗಳು, ದೀಪಾವಳಿಯ ಶುಭಾಶಯಗಳು" ಎಂದು ಬರೆದಿದ್ದಾರೆ.

ಇದನ್ನೂ ಓದಿ:ರಾಘವ್​ ಚಡ್ಡಾ ಜನ್ಮದಿನ: ರೊಮ್ಯಾಂಟಿಕ್​ ಫೋಟೋಗಳನ್ನು ಹಂಚಿಕೊಂಡ ಪತ್ನಿ ಪರಿಣಿತಿ ಚೋಪ್ರಾ

ಸ್ಪಾಯ್ಲರ್‌ಗಳಿಂದ "ಥಿಯೇಟರ್‌ಗಳಲ್ಲಿ ಸಿಗುವ ಸಿನಿಮೀಯ ಅನುಭವಕ್ಕೆ ಅಡ್ಡಿಯಾಗುತ್ತದೆ" ಎಂದು ಖಳನಾಯಕನ ಪಾತ್ರ ನಿರ್ವಹಿಸಿರುವ ಇಮ್ರಾನ್ ಹಶ್ಮಿ ತಿಳಿಸಿದ್ದಾರೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ನಟ, ''ಟೈಗರ್​ 3 ಸಿನಿಮಾ ಲೆಕ್ಕವಿಲ್ಲದಷ್ಟು ಸೀಕ್ರೆಟ್ಸ್ ಒಳಗೊಂಡಿದೆ, ಅವುಗಳನ್ನು ಸುರಕ್ಷಿತವಾಗಿರಿಸುವಿರಿ ಎಂದು ನಾವು ನಂಬುತ್ತೇವೆ. ದಯವಿಟ್ಟು ಯಾವುದೇ ಸ್ಪಾಯ್ಲರ್‌ಗಳನ್ನು (ವಿಡಿಯೋಗಳನ್ನು) ಬಹಿರಂಗಪಡಿಸಬೇಡಿ. ಏಕೆಂದರೆ ಅವು ಚಿತ್ರಮಂದಿರಗಳಲ್ಲಿ ಮಾತ್ರ ಸಿಗುವ ಸಿನಿಮೀಯ ಅನುಭವಕ್ಕೆ ಅಡ್ಡಿಯಾಗುತ್ತದೆ. ಟೈಗರ್ 3 ಸಿನಿಮಾ ಮಾಡಲು ನಾವು ನಿಜವಾಗಿಯೂ ಬಹಳ ಶ್ರಮ ಹಾಕಿದ್ದೇವೆ. ನೀವು ನಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತೀರಿ ಎಂದು ತಿಳಿದಿದೆ. ದೀಪಾವಳಿ ಹಬ್ಬದ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ.

ಸಲ್ಮಾನ್​, ಕತ್ರಿನಾ ಇನ್​ಸ್ಟಾಗ್ರಾಮ್​ ಸ್ಟೋರಿ

ಇದನ್ನೂ ಓದಿ:ರಾಜನ ಲುಕ್​ನಲ್ಲಿ ಅಭಿನಯ ಚಕ್ರವರ್ತಿ: ಕಿಚ್ಚ 47 ಮೇಕಿಂಗ್ ವಿಡಿಯೋ ವೈರಲ್​​

ಮನೀಶ್​ ಶರ್ಮಾ ನಿರ್ದೇಶನದ ಟೈಗರ್​ 3 ಚಿತ್ರವನ್ನು ಯಶ್​ ರಾಜ್​ ಫಿಲ್ಮ್ಸ್ ಬ್ಯಾನರ್​ ಅಡಿ ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ನಾಳೆ ಚಿತ್ರಮಂದಿರಗಳಲ್ಲಿ ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ABOUT THE AUTHOR

...view details