ಬಾಲಿವುಡ್ ನಟ ಹಾಗೂ ನಿರ್ಮಾಪಕ ಅರ್ಬಾಜ್ ಖಾನ್ ನಿನ್ನೆಯಷ್ಟೇ ತಮ್ಮ 56ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅವರು ತಮ್ಮ ಆತ್ಮೀಯರಿಗಾಗಿ ಗ್ರ್ಯಾಂಡ್ ಪಾರ್ಟಿಯನ್ನು ಆಯೋಜಿಸಿದ್ದರು. ಅರ್ಬಾಜ್ ಖಾನ್ ಹಿರಿಯ ಸಹೋದರ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಈ ಪಾರ್ಟಿಯಲ್ಲಿ ಭಾಗವಹಿಸಿ ಗಮನ ಸೆಳೆದರು. ಸದ್ಯ ಅವರ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸಲ್ಮಾನ್ ಖಾನ್ ಅವರ ಹೊಸ ಲುಕ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಕಪ್ಪು ಟೀ ಶರ್ಟ್ ಮೇಲೆ ಬೂದು ಬಣ್ಣದ ಜಾಕೆಟ್ ಮತ್ತು ಅದಕ್ಕೆ ಮ್ಯಾಚಿಂಗ್ ಆಗುವಂತಹ ಗುಲಾಬಿ ಬಣ್ಣದ ಪ್ಯಾಂಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ಸಲ್ಮಾನ್ ಖಾನ್ ಲುಕ್ ಅನ್ನು ಇತ್ತೀಚೆಗೆ ಬಿಡುಗಡೆಯಾದ 'ಬಾರ್ಬಿ' ಸಿನಿಮಾಗೆ ಹೋಲಿಸುತ್ತಿದ್ದಾರೆ. ಸದ್ಯ ಇದುವೇ ಇಂಟರ್ನ್ನೆಟ್ನಲ್ಲಿ ಸದ್ದು ಮಾಡುತ್ತಿದೆ.
ಇನ್ನೂ ಸಲ್ಮಾನ್ ಖಾನ್ ಅವರ ಸಿನಿಮಾ ವಿಚಾರ ನೋಡುವುದಾದರೆ, ಅವರು ಕೊನೆಯದಾಗಿ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಪೂಜಾ ಹೆಗ್ಡೆ, ಶಹನಾಜ್ ಗಿಲ್, ರಾಘವ್ ಜುಯಲ್ ಮತ್ತು ಪಾಲಕ್ ತಿವಾರಿ ನಟಿಸಿದ್ದರು. ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಟೈಗರ್ 3'. ದೀಪಾವಳಿ ಸಂದರ್ಭದಲ್ಲಿ ಸಿನಿಮಾ ತೆರೆಗೆ ತರಲು ಸಿದ್ಧತೆ ನಡೆಯುತ್ತಿದ್ದು, ಕತ್ರಿನಾ ಕೈಫ್ ನಾಯಕಿಯಾಗಿ ನಟಿಸಿದ್ದಾರೆ.