ಮುಂಬೈ:ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್‌ಗೆ ಬೆದರಿಕೆ ಇ-ಮೇಲ್ ಕಳುಹಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಮುಂಬೈ ಪೊಲೀಸರು ಲುಕ್‌ಔಟ್ ಸುತ್ತೋಲೆ (ಎಲ್‌ಒಸಿ) ಹೊರಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಆ ವ್ಯಕ್ತಿ ಮಾರ್ಚ್‌ನಲ್ಲಿ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಎಂಬ ಹೆಸರಿನಲ್ಲಿ ಸಲ್ಮಾನ್ ಖಾನ್‌ಗೆ ಬೆದರಿಕೆ ಸಂದೇಶಗಳನ್ನು ಇಮೇಲ್ ಮಾಡಿರುವುದಾಗಿ ತಿಳಿದು ಬಂದಿದೆ.
ಬಹಳ ದಿನಗಳಿಂದ ಜೀವ ಬೆದರಿಕೆ ಎದುರಿಸುತ್ತಿರುವ ಸಲ್ಲು, ಅದನ್ನು ಹೇಗೆ ಎದುರಿಸುತ್ತಿದ್ದಾರೆ ಎಂಬುದನ್ನ ಇತ್ತೀಚೆಗಷ್ಟೇ ಬಹಿರಂಗಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಆಪ್ ಕಿ ಅದಾಲತ್ ಶೋನಲ್ಲಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಭಾಗಿಯಾಗಿದ್ದರು. ಈ ವೇಳೆ, ಅವರು ಪ್ರಾಣ ಬೆದರಿಕೆಯ ನಡುವೆ ಪಡೆದ Y+ ಭದ್ರತೆಯ ಬಗ್ಗೆ ಮಾತನಾಡಿದ್ದಾರೆ.
"ಅಭದ್ರತೆಗಿಂತ ಸೆಕ್ಯೂರಿಟಿಯೇ ಮೇಲು. ಹೌದು ನನಗೆ ಭದ್ರತೆ ಇದೆ. ನನಗೀಗ ಸೈಕಲ್ ತುಳಿದುಕೊಂಡು ರಸ್ತೆಯಲ್ಲಿ ಹೋಗುವಂತಿಲ್ಲ. ಒಬ್ಬಂಟಿಯಾಗಿ ಎಲ್ಲಿಗೂ ಪ್ರಯಾಣಿಸುವಂತಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ನನಗೆ ಸಮಸ್ಯೆ ಎದುರಾಗುವುದು ಟ್ರಾಫಿಕ್ನಲ್ಲಿದ್ದಾಗ. ಹೆಚ್ಚಿನ ಭದ್ರತೆ ಇರುವುದರಿಂದ ವಾಹನಗಳು ಇತರೆ ಜನರಿಗೆ ತೊಂದರೆ ಉಂಟು ಮಾಡುತ್ತದೆ. ಅವರೆಲ್ಲರೂ ನನಗೊಂದು ನೋಟ ನೀಡಿ ಹೋಗುತ್ತಾರೆ. ಸದ್ಯ ನನಗೆ ಗಂಭೀರ ಬೆದರಿಕೆ ಇದ್ದು, ಅದಕ್ಕಾಗಿಯೇ ಭದ್ರತೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸಲ್ಮಾನ್-ಶಾರುಖ್ನ ಆ ಒಂದು ಸೀನ್ಗೆ 35 ಕೋಟಿಯ ಸೆಟ್ ನಿರ್ಮಾಣ.. ಹಾಗಾದ್ರೆ ನಟರ ಸಂಭಾವನೆ?
"ನಾನು ಎಲ್ಲೆಡೆ ಹೋಗುವುದಿದ್ದರೂ ಸಂಪೂರ್ಣ ಭದ್ರತೆಯೊಂದಿಗೆ ಹೋಗುತ್ತೇನೆ. ನಾನು ದೇವರನ್ನು ನಂಬುತ್ತೇನೆ. ಹಾಗೆಂದು ನಾನು ಮುಕ್ತವಾಗಿ ತಿರುಗಾಡಲು ಪ್ರಾರಂಭಿಸುತ್ತೇನೆ ಎಂದಲ್ಲ. ನನ್ನ ಸುತ್ತ ಮುತ್ತ ಭದ್ರತಾ ಸಿಬ್ಬಂದಿಗಳಿದ್ದಾರೆ. ನನ್ನ ಜೊತೆ ಅನೇಕ ಬಂದೂಕುಗಳು ಸುತ್ತಾಡುತ್ತವೆ. ಹೀಗಾಗಿ ನಾನು ಇತ್ತೀಚಿನ ದಿನಗಳಲ್ಲಿ ಹೆದರುತ್ತಿದ್ದೇನೆ " ಎಂದು ಮುಕ್ತವಾಗಿ ಮಾತನಾಡಿದ್ದಾರೆ.
ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದಲ್ಲಿ ಸಲ್ಮಾನ್: ಶಾರುಖ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಸಿದ್ಧಾರ್ಥ್ ಆನಂದ್ ಅವರ ಪಠಾಣ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ನಂತರ, ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಆ್ಯಕ್ಷನ್ ಚಲನಚಿತ್ರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ನಲ್ಲಿ ಕಾಣಿಸಿಕೊಂಡರು. ಫರ್ಹಾದ್ ಸಾಮ್ಜಿ ನಿರ್ದೇಶಿಸಿದ ಈ ಚಲನಚಿತ್ರವು ಏಪ್ರಿಲ್ 21 ರಂದು ಬಿಡುಗಡೆಯಾಯಿತು.
ಚಿತ್ರದಲ್ಲಿ ಜಗಪತಿ ಬಾಬು, ಜಸ್ಸಿ ಗಿಲ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಶೆಹನಾಜ್ ಗಿಲ್, ವಿಜೇಂದರ್ ಸಿಂಗ್ ಮತ್ತು ಪಾಲಕ್ ತಿವಾರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಲ್ಮಾನ್ ಮುಂದೆ ಮನೀಶ್ ಶರ್ಮಾ ನಿರ್ದೇಶನದ ಟೈಗರ್ 3 ನಲ್ಲಿ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಆ್ಯಕ್ಷನ್ ಚಿತ್ರವು ದೀಪಾವಳಿಯ ಆಸುಪಾಸಿನಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಸೇರಿದಂತೆ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ:ಇಳಿಕೆಯಾದ ಸಲ್ಮಾನ್ ಸಿನಿಮಾ ಗಳಿಕೆ: ಅದ್ಧೂರಿ ವೆಚ್ಚದಲ್ಲಿ ತಯಾರಾಗ್ತಿದೆ ಮುಂದಿನ ಚಿತ್ರ!