ಮುಂಬೈ(ಮಹಾರಾಷ್ಟ್ರ):ಬಿ-ಟೌನ್ ಬ್ಯಾಡ್ ಬಾಯ್, ಬಜರಂಗಿ ಭಾಯಿಜಾನ್ ಸಿನಿಮಾ ಜನಪ್ರಿಯತೆಯ ಸಲ್ಮಾನ್ ಖಾನ್ ಬಣ್ಣದ ಲೋಕದಲ್ಲಿ 34 ವರ್ಷ ಪೂರೈಸಿದ್ದಾರೆ. ಈ ಖುಷಿಯಲ್ಲಿ ತಮ್ಮ ಹೊಸ ಚಿತ್ರದ ಘೋಷಣೆ ಮಾಡಿದ್ದಾರೆ. ಕಾಮಿಡಿ, ಆ್ಯಕ್ಷನ್, ಡ್ರಾಮಾ ಎಲ್ಲ ರೀತಿಯ ಸಿನಿಮಾ ಮಾಡಿ ಯಶಸ್ಸು ಪಡೆದಿರೋ ನಟ ತಮ್ಮ ಮುಂದಿನ ಚಿತ್ರ 'ಕಿಸಿ ಕಾ ಭಾಯ್.. ಕಿಸಿ ಕಿ ಜಾನ್'(Kisi Ka Bhai.. Kisi Ki Jaan) ಎಂದು ತಿಳಿಸಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿರುವ ಸಲ್ಮಾನ್, ತಮ್ಮ ಅಭಿಮಾನಿಗಳಿಂದ ಸಿಗುತ್ತಿರುವ ನಿರಂತರ ಪ್ರೀತಿ ಮತ್ತು ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಆಗಸ್ಟ್ 26, 1988ರಲ್ಲಿ ಸಿನೆಮಾ ಕ್ಷೇತ್ರಕ್ಕೆ ಬಂದಿದ್ದ ಸಲ್ಲು, ಬಿವಿ ಹೋ ತೋ ಐಸಿ ಚಿತ್ರದ ಮೂಲಕ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ 1989ರಲ್ಲಿ ಮೈನೆ ಪ್ಯಾರ್ ಕಿಯಾದಲ್ಲಿ ಅದ್ಭುತವಾಗಿ ನಟಸಿ ಗಮನ ಸೆಳೆದಿದ್ದರು.
34 ವರ್ಷ ಬಣ್ಣದ ಪ್ರಪಂಚದಲ್ಲಿ ಹಾದಿ ಸವೆಸಿದ ಸಲ್ಮಾನ್ ಖಾನ್ ಸಮೀರ್, ರಾಧೆ, ಚುಲ್ಬುಲ್ ಪಾಂಡೆಯಂತಹ ಅನೇಕ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. 34 ವರ್ಷಗಳ ಹಿಂದೆ ಮತ್ತು 34 ವರ್ಷಗಳ ನಂತರದ ನನ್ನ ಜೀವನದ ಪ್ರಯಾಣ ಇಲ್ಲಿಗೆ ಬಂದು ನಿಂತಿದೆ. ನನ್ನೊಂದಿಗೆ ಸಹಕರಿಸಿದ, ಅಭಿಮಾನಿಗಳ ಪ್ರೀತಿಗೆ ಧನ್ಯವಾದಗಳು ಎಂದಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಹೊಸ ಚಿತ್ರ ಘೋಷಿಸಿದರು.