ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ 'ಬಿಲ್ಲಿ ಬಿಲ್ಲಿ' ಹಾಡು ನಾಳೆ ಬಿಡುಗಡೆ ಆಗಲಿದೆ. ಇಂದು ಹಾಡಿನ ಟೀಸರ್ ರಿಲೀಸ್ ಆಗಿದ್ದು, ಸಲ್ಲು ಫ್ಯಾನ್ಸ್ ನಿರೀಕ್ಷೆ ದುಪ್ಪಟ್ಟಾಗಿದೆ. ಟೀಸರ್ ಬಿಡುಗಡೆಗೂ ಮುನ್ನ ಸಲ್ಮಾನ್ ಖಾನ್ ತಮ್ಮ ಬ್ಲ್ಯಾಕ್ & ವೈಟ್ ಫೋಟೋ ಶೇರ್ ಮಾಡಿದ್ದು, ಚಿತ್ರಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಸಖತ್ ಕ್ಲಾಸ್ ಲುಕ್ನಲ್ಲಿ ಸಲ್ಮಾನ್ ಕಾಣಿಸಿಕೊಂಡಿದ್ದು, ಅವರ ಕಣ್ಣುಗಳು ಸಾಕಷ್ಟು ಸಂದೇಶ ಕೊಟ್ಟಿದೆ.
ಫರ್ಹಾದ್ ಸಾಮ್ಜಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಗೆ ಪೂಜಾ ಹೆಗ್ಡೆ, ಪಂಜಾಬ್‌ನ ಕತ್ರಿನಾ ಕೈಫ್ ಖ್ಯಾತಿಯ ಶೆಹನಾಜ್ ಗಿಲ್ ಮತ್ತು ಪಲಕ್ ತಿವಾರಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ 'ಬಿಲ್ಲಿ ಬಿಲ್ಲಿ ಆಂಖ್ ಗೋರಿಯೇ' ಹಾಡು ನಾಳೆ (ಮಾರ್ಚ್ 2) ಬಿಡುಗಡೆ ಆಗಲಿದೆ. ಸಲ್ಮಾನ್ ಖಾನ್ ತಮ್ಮ ಹೊಸ ಹಾಡಿನ ತುಣಕನ್ನು ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದೆ. ಅದಕ್ಕೂ ಮುನ್ನ ಸಲ್ಮಾನ್ ಖಾನ್ ತಮ್ಮ ಬ್ಲ್ಯಾಕ್ & ವೈಟ್ ಫೋಟೋವನ್ನು ಕೂಡ ಪೋಸ್ಟ್ ಮಾಡಿದ್ದಾರೆ.
ಬಾಲಿವುಡ್ ಟೈಗರ್ ಇಂದು ತಮ್ಮ ಹೊಸ ಚಿತ್ರವನ್ನು ತಮ್ಮ ಅಭಿಮಾನಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಚಿತ್ರವನ್ನು ಬಾಲಿವುಡ್ ಭಾಯ್ಜಾನ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಬ್ಲ್ಯಾಕ್ & ವೈಟ್ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಕಪ್ಪು ಶರ್ಟ್‌ನಲ್ಲಿ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಫೋಟೋಗೆ ಚಿತ್ರರಂಗದವರು ಸೇರಿದಂತೆ ಅಭಿಮಾನಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. 'ಇಷ್ಟು ಚೆನ್ನಾಗಿ ಕಾಣುವುದನ್ನು ನಿಲ್ಲಿಸಿ', ಭಾಯ್ಜಾನ್, ಅದ್ಭುತ ಫೋಟೋ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಫೋಟೋ ಮೆಚ್ಚುಗೆ ಜೊತೆಗೆ ಹಾರ್ಟ್ ಮತ್ತು ಫೈರ್ ಇಮೋಜಿ ಸಂಪಾದಿಸಿದೆ.