2023ರಲ್ಲಿ ಎರಡು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿರುವ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರ ಮುಂದಿನ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ 'ಡಂಕಿ'. ಇತ್ತ ದಕ್ಷಿಣ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ 'ಸಲಾರ್' ಕೂಡ ಬಿಡುಗಡೆಗೆ ಸಜ್ಜಾಗಿದೆ. ಎರಡೂ ಸಿನಿಮಾಗಳು ಡಿಸೆಂಬರ್ 22ರಂದು ಬಿಡುಗಡೆ ಆಗಲು ರೆಡಿಯಾಗಿವೆ. ಬಾಕ್ಸ್ ಆಫೀಸ್ ಫೈಟ್ ಬಿಸಿ ಬೆನ್ನಲ್ಲೇ 'ಡಂಕಿ' ಸಿನಿಮಾವನ್ನು ಮುಂದೂಡಲು ಯೋಚಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಲಾರ್ ವರ್ಸಸ್ ಡಂಕಿ:ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನೇತೃತ್ವದಲ್ಲಿ ಸಲಾರ್ ಸಿದ್ಧಗೊಂಡಿದೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಜೊತೆಗೆ ಪ್ರಶಾಂತ್ ನೀಲ್ - ಪ್ರಭಾಸ್ ಕಾಂಬಿನೇಶನ್ ಅಂದ ಮೇಲೆ ಪ್ರೇಕ್ಷಕರ ನಿರೀಕ್ಷೆ ಕೊಂಚ ಹೆಚ್ಚೇ ಅಲ್ವೇ?. ಇತ್ತ ಡಂಕಿ ಸಿನಿಮಾ ರಾಜ್ ಕುಮಾರ್ ಹಿರಾನಿ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಸೂಪರ್ ಸ್ಟಾರ್ ಎಸ್ಆರ್ಕೆ ಲೀಡ್ ರೋಲ್ನಲ್ಲಿದ್ದಾರೆ. ಬಹುಭಾಷಾ ನಟಿ ತಾಪ್ಸಿ ಪನ್ನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಾಕ್ಸ್ ಆಫೀಸ್ ಫೈಟ್?!ಕ್ರಿಸ್ಮಸ್ - ನ್ಯೂ ಇಯರ್ ಸಂದರ್ಭ ಡಂಕಿ ಸಿನಿಮಾ ಬಿಡುಗಡೆ ಆಗಲಿದೆ ಎಂದು ಶಾರುಖ್ ಖಾನ್ ಘೋಷಿಸಿದ್ದಾರೆ. ಇತ್ತ ಪ್ರಭಾಸ್ ಅವರ ಸಲಾರ್ 1 ಅನ್ನೂ ಕೂಡ ಡಿಸೆಂಬರ್ ಕೊನೆಗೆ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಇದು ಬಾಕ್ಸ್ ಆಫೀಸ್ ಫೈಟ್ಗೆ ಕಾಣವಾಗಲಿದೆ. ಆದರೆ ಇತ್ತೀಚಿನ ವರದಿಗಳು, ಡಂಕಿಯನ್ನು ಮುಂದೂಡುವ ಸಾಧ್ಯತೆ ಇದೆ ಎಂದು ಸೂಚಿಸಿವೆ.