2023ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾಗಿದ್ದ 'ಸಲಾರ್' ಸಿನಿಮಾ ಡಿಸೆಂಬರ್ 22ರಂದು ತೆರೆಗಪ್ಪಳಿಸಿ ಅಭುತಪೂರ್ವ ಯಶ ಕಂಡಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಚಿತ್ರತಂಡ ಅದ್ಧೂರಿಯಾಗಿ ಸಂಭ್ರಮಾಚಣೆ ನಡೆಸಿದೆ. ಶುಕ್ರವಾರ ರಾತ್ರಿ ಹೈ ಅಲ್ಟ್ರಾ ಲೌಂಜ್ನಲ್ಲಿ ನಿರ್ದೇಶಕ ಪ್ರಶಾಂತ್ ನೀಲ್, ನಟ ಪ್ರಭಾಸ್, ನಟಿ ಶ್ರುತಿ ಹಾಸನ್, ನಟ ಜಗಪತಿ ಬಾಬು, ನಿರ್ಮಾಪಕ ವಿಜಯ್ ಕಿರಗಂದೂರ್ ಸೇರಿದಂತೆ ಚಿತ್ರತಂಡ ಸಕ್ಸಸ್ ಸೆಲೆಬ್ರೇಶನ್ ಮಾಡಿದೆ. ಬ್ಲ್ಯಾಕ್ ಥೀಮ್ ಕೋಡ್ನಲ್ಲಿ ಚಿತ್ರತಂಡ ಕಾಣಿಸಿಕೊಂಡಿದೆ.
ಸಲಾರ್ ಸಕ್ಸಸ್ ಸಲೆಬ್ರೇಶನ್ನ ಹಲವು ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ. ನಟಿ ಶ್ರುತಿ ಹಾಸನ್ ಕೂಡ ಚಿತ್ರ ತಂಡದವರೊಂದಿಗಿನ ಫೋಟೋ-ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ, ಪ್ರಭಾಸ್ ಕಂಪ್ಲೀಟ್ ಬ್ಲ್ಯಾಕ್ ಔಟ್ಫಿಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡದ ಎಲ್ಲರೂ ಬ್ಲ್ಯಾಕ್ ಥೀಮ್ ಕೋಡ್ ಫಾಲೋ ಮಾಡಿದ್ದಾರೆ. ಇದಕ್ಕೂ ಮುನ್ನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಲಾರ್ ಚಿತ್ರತಂಡ ಭೇಟಿ ನೀಡಿತ್ತು. ಪ್ರಭಾಸ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರ್ ಅವರು ದೇವಿಯ ಆಶೀರ್ವಾದ ಪಡೆದಿದ್ದಾರೆ.
'ಸಲಾರ್' 2023 ಡಿಸೆಂಬರ್ 22 ರಂದು ತೆರೆಗಪ್ಪಳಿಸಿತ್ತು. ತೆಲುಗು, ಕನ್ನಡ, ತಮಿಳು, ಮಾಲಯಳಂ ಮತ್ತು ಹಿಂದಿ ಸೇರಿ ಪಂಚಭಾಷೆಗಳಲ್ಲಿ ಬಿಡುಗಡೆ ಆದ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದಾರೆ. ಅದೇ ಸಮಯ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಅವರ ಬಹು ನಿರೀಕ್ಷಿತ ಚಿತ್ರ ಡಂಕಿ ಕೂಡ ಬಿಡುಗಡೆ ಆಗಿ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪೈಪೋಟಿ ನೀಡಿತ್ತು. ಅದಾಗ್ಯೂ ಸೌತ್ ಸಿನಿಮಾ ಬಹುಕೋಟಿ ಸಂಗ್ರಹಿಸುವಲ್ಲಿ ಯಶಸ್ವಿ ಆಗಿದೆ.