ಕರ್ನಾಟಕ

karnataka

ETV Bharat / entertainment

ಸಲಾರ್ ಬಿಡುಗಡೆ: ದೊಡ್ಡ ಕಟೌಟ್, ಡಿಜೆ ಶೋ ಮೂಲಕ ಪ್ರಭಾಸ್ ಅಭಿಮಾನಿಗಳಿಂದ ಚಿತ್ರಕ್ಕೆ ಅದ್ಧೂರಿ ಸ್ವಾಗತ - ಸೌತ್ ರೆಬೆಲ್ ಸ್ಟಾರ್ ಪ್ರಭಾಸ್

Salaar Release: ಪ್ರಭಾಸ್ ಅಭಿನಯದ 'ಸಲಾರ್' ಚಿತ್ರ ಇಂದು (ಶುಕ್ರವಾರ) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಹೈದರಾಬಾದ್ ಮತ್ತು ಆಂಧ್ರಪ್ರದೇಶದ ಥಿಯೇಟರ್‌ಗಳ ಮುಂದೆ ದೊಡ್ಡ ಕಟೌಟ್‌ಗಳು ಮತ್ತು ಡಿಜೆ ಶೋಗಳೊಂದಿಗೆ ಪ್ರಭಾಸ್ ಅವರ ಅಭಿಮಾನಿಗಳು ಚಿತ್ರವನ್ನು ಸ್ವಾಗತಿಸಿದ್ದಾರೆ. ಚಿತ್ರಮಂದಿರಗಳ ಹೊರಗೆ ಸಂಭ್ರಮಾಚರಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

Salaar Release
ಸಲಾರ್ ಬಿಡುಗಡೆ

By ETV Bharat Karnataka Team

Published : Dec 22, 2023, 8:26 AM IST

Updated : Dec 22, 2023, 8:45 AM IST

ಹೈದರಾಬಾದ್:'ಸಲಾರ್' ಬಿಡುಗಡೆಗೂ ಮುನ್ನ ಸೌತ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿಮಾನಿಗಳು ಹೈದರಾಬಾದ್‌ನ ಥಿಯೇಟರ್‌ಗಳ ಮುಂದೆ ದೊಡ್ಡ ಕಟೌಟ್‌ಗಳು ಮತ್ತು ಡಿಜೆ ಶೋನೊಂದಿಗೆ ಚಿತ್ರಕ್ಕೆ ಅದ್ಧೂರಿ ಸ್ವಾಗತ ಕೋರಿದ್ದಾರೆ. ಸ್ವಾಗತ ಸಮಾರಂಭದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿಡಿಯೋದಲ್ಲಿ ಜನರು ಫುಲ್ ಸೆಲೆಬ್ರೇಷನ್ ಮೂಡ್‌ನಲ್ಲಿದ್ದಾರೆ. ಅಲ್ಲದೆ, 'ಸಲಾರ್' ಚಿತ್ರದ ಪ್ರಭಾಸ್ ಅವರ ಬೃಹತ್ ಕಟೌಟ್​ನೊಂದಿಗೆ ಸೆಲ್ಫಿ ತೆಗೆದುಕೊಳುವುದು ಕೂಡ ಕಂಡು ಬಂದಿದೆ. ಈ ದೃಶ್ಯ ಎಲ್ಲ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ ಮುಂಭಾಗದಲ್ಲಿ ನಡೆದಿವೆ.

ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆ ಹೊಂದಿರುವವರು, ಸಲಾರ್ ಚಿತ್ರಕ್ಕೆ ಭರ್ಜರಿಯಾಗಿ ಸ್ವಾಗತಿಸುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಸಂಧ್ಯಾ 70 ಎಂಎಂ ಆರ್‌ಟಿಸಿ ಅಭಿಮಾನಿಗಳ ಗುಂಪು ಕುಣಿದು ಕುಪ್ಪಳಿಸುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಡಿಜೆ ಸದ್ದಿನೊಂದಿಗೆ ಬಣ್ಣ ಬಣ್ಣ ಲೈಟ್‌ಗಳ ಬೆಳಕಿನಲ್ಲಿ ಅಭಿಮಾನಿಗಳು ಸಾಮರಸ್ಯದಿಂದ ನೃತ್ಯ ಮಾಡುವ ದೃಶ್ಯ ಗಮನಸೆಳೆಯಿತು. ಪ್ರಭಾಸ್ ಅವರ ಫೋಟೋಗಳನ್ನು ಅನೇಕ ಎಲ್ಇಡಿ ಸ್ಕ್ರೀನ್​ಗಳಲ್ಲಿ ತೋರಿಸಲಾಗಿದೆ.

ದೊಡ್ಡ ಕಟೌಟ್ ಮತ್ತು ಸಲಾರ್ ಪೋಸ್ಟರ್ ಜೊತೆಗೆ ಡಿಜೆ ಸೌಂಡ್ ಮತ್ತು ಲೈಟ್ ಶೋ ಪ್ರಭಾಸ್ ಅವರ ಹೊಸ ಚಿತ್ರಕ್ಕಾಗಿ ಅಭಿಮಾನಿಗಳು ಹೊಂದಿರುವ ಹೆಚ್ಚಿನ ನಿರೀಕ್ಷೆಯನ್ನು ಎತ್ತಿ ತೋರಿಸಿತು. ಹೈದರಾಬಾದ್ ಹೊರತಾಗಿ, ಆಂಧ್ರಪ್ರದೇಶದ ಭೀಮಾವರಂ ಥಿಯೇಟರ್‌ನ ಎದುರಿನ ವಿಡಿಯೋ ಹೊರಬಿದ್ದಿದ್ದು, ಅದರಲ್ಲಿ ಚಿತ್ರ ಬಿಡುಗಡೆಗೆ ಮುನ್ನ ಅಭಿಮಾನಿಗಳು ಸಂಭ್ರಮಿಸುತ್ತಿರುವುದು ಕಂಡುಬಂದಿದೆ.

ಹೊಂಬಾಳೆ ಫಿಲಂಸ್‌ನ ಸಲಾರ್- ಭಾಗ 1: ಇಂದು ತೆರೆ ಕಂಡಿರುವ ಸಲಾರ್ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಈ ಸಿನಿಮಾವು 2 ಗಂಟೆ 55 ನಿಮಿಷ ರನ್​ ಟೈಮ್​ ಅನ್ನು ಹೊಂದಿದೆ.

'ಸಲಾರ್​' ಮುಂಗಡ ಬುಕ್ಕಿಂಗ್​: ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಮೊದಲ ದಿನದ ಶೋಗಳಿಗೆ 14,10,965 ಮುಂಗಡ ಟಿಕೆಟ್‌ಗಳನ್ನು ಮಾರಾಟ ಮಾಡಿದೆ. 29.55 ಕೋಟಿ ರೂಪಾಯಿ ವ್ಯವಹಾರವಾಗಿದೆ. ಇದು ಮೊದಲ ದಿನದ ಆನ್​​ಲೈನ್ ಮುಂಗಡ ಟಿಕೆಟ್​ ಬುಕ್ಕಿಂಗ್​ನ ವ್ಯವಹಾರವಷ್ಟೇ ಆಗಿದೆ. ಈ ಅಂಕಿ, ಅಂಶ ಏರಿಕೆಯಾಗಲಿದೆ. 'ಸಲಾರ್‌' ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಪ್ರೊಸೆಸ್​ನ್ನು ಕೆಲ ದಿನಗಳ ಹಿಂದೆ ಆರಂಭಿಸಿಲಾಗಿದೆ. ಈ ಸಿನಿಮಾ ಭರ್ಜರಿ ಕಲೆಕ್ಷನ್​​ ಮಾಡುವ ಸಾಧ್ಯತೆಯು ಕೂಡ ಹೆಚ್ಚಿದೆ. ಇಂದು (ಶುಕ್ರವಾರ) ಸಲಾರ್​ ಸಿನಿಮಾ ಹಿಂದಿ, ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ದೇಶದಾದ್ಯಂತ 10,472 ಸ್ಕ್ರೀನ್‌ಗಳಲ್ಲಿ ತೆರೆ ಕಂಡಿದೆ.

ಇದನ್ನೂ ಓದಿ:'ಸಲಾರ್​' ಬಿಡುಗಡೆಗೆ ಕ್ಷಣಗಣನೆ: ಚಿತ್ರದ ಎರಡನೇ ಹಾಡು 'ಪ್ರತಿಕಥೆಯ..' ನೋಡಿ

Last Updated : Dec 22, 2023, 8:45 AM IST

ABOUT THE AUTHOR

...view details