ಕರ್ನಾಟಕ

karnataka

ETV Bharat / entertainment

ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ 'ಸಲಾರ್'​ ರಿಲೀಸ್​ ಮುಂದೂಡಿಕೆ...ತರಣ್​ ಆದರ್ಶ್​ ಟ್ವೀಟ್​ನಲ್ಲೇನಿದೆ? - Salaar release date

Salaar release date postponed: ಬಹುನಿರೀಕ್ಷಿತ ಸಲಾರ್​ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಿರುವುದರ ಬಗ್ಗೆ ಸಿನಿಮಾ ವಿಶ್ಲೇಷಕ ತರಣ್​ ಆದರ್ಶ್ ಟ್ವೀಟ್​ ಮಾಡಿದ್ದಾರೆ.

Salaar release date postponed
'ಸಲಾರ್'​ ರಿಲೀಸ್​ ಮುಂದೂಡಿಕೆ

By ETV Bharat Karnataka Team

Published : Sep 2, 2023, 4:30 PM IST

Updated : Sep 2, 2023, 5:33 PM IST

ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಸಲಾರ್​'. ಬಿಗ್​​ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ಬ್ಲಾಕ್​ಬಸ್ಟರ್ ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​ ನಿರ್ದೇಶಿಸಿಸುತ್ತಿದ್ದಾರೆ. ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​​ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್, ಪ್ರಶಾಂತ್​ ನೀಲ್, ಪ್ರಭಾಸ್​ ಕಾಂಬೋದ ಸಿನಿಮಾವಾದ ಹಿನ್ನೆಲೆ ಪ್ರೇಕ್ಷಕರು ಸಾಕಷ್ಟು ಕುತೂಹಲಕಾರರಾಗಿದ್ದಾರೆ. ​

ಬಹುನಿರೀಕ್ಷಿತ ಸಿನಿಮಾ ವಿಕ್ಷಿಸಲು ಸಿನಿಪ್ರಿಯರು ಸಾಕಷ್ಟು ಉತ್ಸುಕರಾಗಿದ್ದಾರೆ. ಇದೇ ಸೆಪ್ಟೆಂಬರ್​ 28 ರಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿತ್ತು. ಆದ್ರೆ ನಿನ್ನೆಯಿಂದ ಸಿನಿಮಾ ರಿಲೀಸ್​ ಡೇಟ್​ ಅನ್ನು ಮುಂದೂಡಲಾಗುವುದು ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಬಂದಿಲ್ಲ. ಆದ್ರೀಗ ಸಿನಿಮಾ ವಿಶ್ಲೇಷಕ ತರಣ್​ ಆದರ್ಶ್ ಸಿನಿಮಾ ರಿಲೀಸ್​ ಡೇಟ್​ ಪೋಸ್ಟ್​​ಪೋನ್​ ಆಗಿದೆ ಎಂದು ಟ್ವೀಟ್​ ಮಾಡಿದ್ದು, ಸಿನಿಪ್ರಿಯರು ಗೊಂದಲಕ್ಕೀಡಾಗಿದ್ದಾರೆ.

ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ X (ಹಿಂದಿನ ಟ್ವಿಟರ್) ನಲ್ಲಿ ಸಲಾರ್​ ಪೋಸ್ಟರ್​ ಶೇರ್ ಮಾಡಿರುವ ವಿಶ್ಲೇಷಕ ತರಣ್​ ಆದರ್ಶ್, ''ಬ್ರೇಕಿಂಗ್​ ನ್ಯೂಸ್, ಪ್ರಭಾಸ್​ ಅಭಿನಯದ ಸಲಾರ್​ ಸಿನಿಮಾ ನವೆಂಬರ್​ಗೆ ಚಿತ್ರಮಂದಿರಗಳಿಗೆ ಬರಲಿದೆ. ಇದೇ ಸೆಪ್ಟೆಂಬರ್​​ 28 ರಂದು ತೆರೆಕಾಣುತ್ತಿಲ್ಲ. ಇದು ಅಧಿಕೃತ. ಪ್ರಭಾಸ್​ ಮುಖ್ಯಭೂಮಿಕೆಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ. ಸಿನಿಮಾದ ನಿರ್ಮಾಪಕರಾದ ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನವೆಂಬರ್​ಗೆ ಬಿಡುಗಡೆಗೊಳಿಸಲಿದ್ದಾರೆ. ಹೊಸ ಬಿಡುಗಡೆ ದಿನಾಂಕ ಶೀಘ್ರದಲ್ಲೇ ಅನೌನ್ಸ್ ಆಗಲಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:Kichcha 46: ಅಭಿನಯ ಚಕ್ರವರ್ತಿಯ ಚಿತ್ರಕ್ಕೆ ಮ್ಯಾಕ್ಸ್​ ಶೀರ್ಷಿಕೆ - ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದ ಟೀಸರ್​

ಮುಂದಿನ ಜನವರಿಯಲ್ಲಿ ಸಂಕ್ರಾತಿ ಗಿಫ್ಟ್ ಆಗಿ ಸಲಾರ್​ ಬಿಡುಗಡೆ ಆಗಲಿದೆ ಎಂದು ಕೂಡ ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಚಿತ್ರತಂಡ ಇನ್ನೂ ಯಾವುದೇ ಹೇಳಿಕೆ ಕೊಟ್ಟಿಲ್ಲ. ಈ ಹಿಂದೆ, ಸಿನಿಮಾ ಸೆಪ್ಟೆಂಬರ್​ 28 ರಂದು ಸಲಾರ್​ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿತ್ತು. ಸಲಾರ್​ ಸಿನಿಮಾ ಬಿಗ್​ ಬಜೆಟ್​ ಮತ್ತು ಬಿಗ್​ ಸ್ಟಾರ್​ ಕಾಸ್ಟ್ ಮೂಲಕ ಗಮನ ಸೆಳೆಯುತ್ತಿದೆ. ಬಹುಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನ ವಿಜಯ್​ ಕಿರಗಂದೂರ್​ ನಿರ್ಮಿಸಿದ್ದಾರೆ. ಕಾಂತಾರ ಮತ್ತು ಕೆಜಿಎಫ್​ ಸಿನಿಮಾಗಳ ಮೂಲಕ ಹೊಂಬಾಳೆ ಫಿಲ್ಮ್ಸ್ ದುಪ್ಪಟ್ಟಾಗಿರೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವೇ. ಇತ್ತ ಕೆಜಿಎಫ್​ ನಿರ್ದೇಶಿಸಿದ್ದ ಪ್ರಶಾಂತ್​ ನೀಲ್ ಅವರೇ ಪ್ರಭಾಸ್​ ಸಿನಿಮಾಗೆ ಆ್ಯಕ್ಷನ್ ಕಟ್​ ಹೇಳುತ್ತಿರುವುದರಿಂದ ನಿರೀಕ್ಷೆ ಕೊಂಚ ಹೆಚ್ಚೇ ಅಲ್ವೇ?. ಒಟ್ಟಾರೆ ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಕೊಡಬೇಕಿದೆ.

ಇದನ್ನೂ ಓದಿ:HBD Pawan Kalyan: ಬಹುನಿರೀಕ್ಷಿತ 'ಓಜಿ ಟೀಸರ್'​ ಅನಾವರಣ - ಪ್ರೇಕ್ಷಕರಿಗೆ ದರ್ಶನ ಕೊಟ್ಟ 'ಹಸಿದ ಚಿರತೆ'

Last Updated : Sep 2, 2023, 5:33 PM IST

ABOUT THE AUTHOR

...view details