ಕರ್ನಾಟಕ

karnataka

ETV Bharat / entertainment

'ಸಲಾರ್​​' ಸ್ಪೀಡ್​​ಗಿಲ್ಲ ಬ್ರೇಕ್​: ​ಕಲೆಕ್ಷನ್​​ ಕಂಡು ಹುಬ್ಬೇರಿಸಿದ ಪ್ರೇಕ್ಷಕರು! - ಸಲಾರ್ ಬಾಕ್ಸ್ ಆಫೀಸ್​

Salaar collection: ಸಲಾರ್​ ಕಳೆದ ದಿನ 42.50 ಕೋಟಿ ರೂಪಾಯಿ ಗಳಿಸಿದ್ದು, ಭಾರತದಲ್ಲಿ ಒಟ್ಟು 251.60 ಕೋಟಿ ರೂ. ಕಲೆಕ್ಷನ್​ ಮಾಡಿದೆ.

Salaar collection
ಸಲಾರ್ ಕಲೆಕ್ಷನ್​​

By ETV Bharat Karnataka Team

Published : Dec 26, 2023, 9:57 AM IST

ಸ್ಟಾರ್ ಡೈರೆಕ್ಟರ್​ ಪ್ರಶಾಂತ್ ನೀಲ್ ಆ್ಯಕ್ಷನ್​ ಕಟ್​​ ಹೇಳಿರುವ ಬಹುನಿರೀಕ್ಷಿತ 'ಸಲಾರ್' ಸಿನಿಮಾ ಕಳೆದ ಶುಕ್ರವಾರದಂದು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಬಹುತೇಕ ಪಾಸಿಟಿವ್ ರೆಸ್ಪಾನ್ಸ್ ಸ್ವೀಕರಿಸಿದೆ. ಬಾಕ್ಸ್ ಆಫೀಸ್​ ಓಟ ಅದ್ಭುತವಾಗಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಸಿನಿಮಾ ಸೋಮವಾರದಂದು ಭಾರತೀಯ ಬಾಕ್ಸ್​​ ಆಫೀಸ್​ನಲ್ಲಿ 250 ಕೋಟಿ ರೂ.ನ ಕ್ಲಬ್‌ ಸೇರುವಲ್ಲಿ ಯಶ ಕಂಡಿದೆ. ಸಿನಿಮಾದಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಅಮೋಘವಾಗಿ ಅಭಿನಯಿಸಿದ್ದು, ಪ್ರಶಾಂತ್​ ನೀಲ್​​ ನಿರ್ದೇಶನ ಶೈಲಿಗೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಭಾರತೀಯ ಬಾಕ್ಸ್ ಆಫೀಸ್ ಕಲೆಕ್ಷನ್​: ವರದಿಗಳ ಪ್ರಕಾರ ಸಲಾರ್​ ತೆರೆಕಂಡ ದಿನವೇ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ 90.7 ಕೋಟಿ ರೂ. ಗಳಿಸಿದೆ. ಎರಡನೇ ದಿನ 56.35 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಮೂರನೇ ದಿನ 62.05 ಕೋಟಿ ರೂ.ನ ವ್ಯವಹಾರ ನಡೆಸಿದ ಸಿನಿಮಾ ತನ್ನ ನಾಲ್ಕನೇ ದಿನ ಅಂದರೆ ಮೊದಲ ಸೋಮವಾರ 42.50 ಕೋಟಿ ರೂಪಾಯಿಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ ಈವರೆಗೆ 251.60 ಕೋಟಿ ರೂ. ಸಂಪಾದಿಸಿದೆ.

ಡಂಕಿ ಸಿನಿಮಾಗೆ ಭರ್ಜರಿ ಪೈಪೋಟಿ: ಡಿಸೆಂಬರ್ 22 ರಂದು ಶಾರುಖ್ ಖಾನ್ ಅವರ ಬಹುನಿರೀಕ್ಷೆಯ 'ಡಂಕಿ' ಕೂಡ ಥಿಯೇಟರ್‌ ಪ್ರವೇಶಿಸಿದೆ. ಡಂಕಿ ಬಳಿಕ ಸಲಾರ್ ತೆರೆಗಪ್ಪಳಿಸಿ ಬಾಕ್ಸ್ ಅಫೀಸ್​​ನಲ್ಲಿ ಪೈಪೋಟಿ ನಡೆಸುತ್ತಿದೆ. ಕಲೆಕ್ಷನ್​ ವಿಚಾರದಲ್ಲಿ ಡಂಕಿಗಿಂತ ಸಲಾರ್​ ಎರಡು ಹೆಜ್ಜೆ ಮುಂದಿದೆ. ಕ್ರಿಸ್ಮಸ್ ದಿನದಂದು ಸಲಾರ್ ಡಂಕಿಗಿಂತ ಎರಡು ಪಟ್ಟು ಹೆಚ್ಚು ಕಲೆಕ್ಷನ್​ ಮಾಡಿದೆ. ಶಾರುಖ್​ ಖಾನ್​ ನಟನೆಯ ಸಿನಿಮಾ ಐದನೇ ದಿನ (ಸೋಮವಾರ) ದಂದು 22.50 ಕೋಟಿ ರೂ. ಗಳಿಸಿದ್ದು, ಭಾರತೀಯ ಬಾಕ್ಸ್​ ಆಫೀಸ್​​​ನಲ್ಲಾದ ಒಟ್ಟು ಗಳಿಕೆ 128 ಕೋಟಿ ರೂಪಾಯಿಗಳು..

ಇದನ್ನೂ ಓದಿ:ಶುರಾ ಖಾನ್ ಜೊತೆಗೆ ನಿಖಾ ಮಾಡಿಕೊಂಡ ಫೋಟೋಗಳನ್ನು ಹಂಚಿಕೊಂಡ ನಟ ಅರ್ಬಾಜ್ ಖಾನ್

ಸಲಾರ್ ಕಲೆಕ್ಷನ್​​ ಭಾನುವಾರದ ವೇಳೆಗೆ ಜಾಗತಿಕವಾಗಿ 400 ಕೋಟಿ ರೂ. ಮೀರಿದೆ. ಸೋಮವಾರದ ಕಲೆಕ್ಷನ್​ ಸೇರಿಸಿದರೆ, ಚಿತ್ರ ಈಗಾಗಲೇ 450 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ ಅಂತಲೇ ಹೇಳಬಹುದು. ಪ್ರಶಾಂತ್​​ ನೀಲ್​ ಅವರ ಖಾನ್ಸಾರ್ ಎಂಬ ಕಾಲ್ಪನಿಕ ನಗರದಲ್ಲಿ ದೇವ (ಪ್ರಭಾಸ್) ಮತ್ತು ವರದ (ಪೃಥ್ವಿರಾಜ್) ಪಾತ್ರಗಳ ಸುತ್ತ ಕಥೆ ಸುತ್ತುತ್ತದೆ.

ಇದನ್ನೂ ಓದಿ:'ಕೆಸಿಸಿ ಕಪ್ ದೇಶದಲ್ಲೇ ವಿನೂತನ ಪ್ರಯತ್ನ': ಫೈನಲ್ ಪಂದ್ಯ ವೀಕ್ಷಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್

ABOUT THE AUTHOR

...view details