ಕರ್ನಾಟಕ

karnataka

ETV Bharat / entertainment

ಅಬ್ಬರದ ಓಟ ಮುಂದುವರಿಸಿದ 'ಸಲಾರ್​': ಎರಡನೇ ದಿನವೂ ಭರ್ಜರಿ ಕಲೆಕ್ಷನ್​​​!

Salaar: ಎರಡನೇ ದಿನವೂ ಬಾಕ್ಸ್​ ಆಫೀಸ್​ನಲ್ಲಿ ಸಲಾರ್​ ಸಿನಿಮಾ ಅಬ್ಬರ ಮುಂದುವರೆದಿದ್ದು, ಭಾರತದಲ್ಲಿ ಭಾರಿ ಕಲೆಕ್ಷನ್​ ಮಾಡಿದೆ.

Salaar collection
ಸಲಾರ್​ ಕಲೆಕ್ಷನ್​​

By ETV Bharat Karnataka Team

Published : Dec 24, 2023, 10:20 AM IST

ಶುಕ್ರವಾರ ತೆರೆಕಂಡ 'ಸಲಾರ್​' ಸಿನಿಮಾ ಪ್ರೇಕ್ಷಕರು ಸೇರಿದಂತೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಬಹುತೇಕ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ ಅಂತಲೇ ಹೇಳಬಹುದು. ಪ್ರಶಾಂತ್​​ ನೀಲ್​ ನಿರ್ದೇಶನ ಶೈಲಿ ಮತ್ತು ಪ್ರಭಾಸ್​ ನಟನೆಗೆ ಪ್ರಶಂಸೆಯ ಮಳೆ ಸುರಿದಿದೆ. ಬಾಕ್ಸ್​​ ಆಫೀಸ್​​ ವಿಚಾರದಲ್ಲಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ 'ಸಲಾರ್​'.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಲಾರ್ ಪಾರ್ಟ್ ಒನ್ ಬಾಕ್ಸ್ ಆಫೀಸ್ ಪ್ರಯಾಣ ಅತ್ಯುತ್ತಮವಾಗಿದೆ. ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಅಮೋಘ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಶೃತಿ ಹಾಸನ್​ ಮತ್ತು ಜಗಪತಿ ಬಾಬು, ಟಿನ್ನು ಆನಂದ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಿನಿಪ್ರಿಯರು ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳು ಸಹ ಈ ಸಿನಿಮಾಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಾಣುತ್ತಿರುವ ಚಿತ್ರ 2023ರಲ್ಲಿ ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ತೆರೆಕಂಡ ದಿನ ಭಾರತದಲ್ಲಿ 90 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದ್ದರೆ, ಜಾಗತಿಕವಾಗಿ ಸರಿಸುಮಾರು 178 ಕೋಟಿ ರೂ. ಬಾಚಿಕೊಂಡಿತ್ತು.

ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಸಲಾರ್ ಸಿನಿಮಾ ಎರಡನೇ ದಿನ ಭಾರತದಲ್ಲಿ ಸರಿಸುಮಾರು 57.61 ಕೋಟಿ ರೂಪಾಯಿ ಗಳಿಸಿದೆ. ಎರಡು ದಿನಗಳಲ್ಲಿ ಸುಮಾರು 145.70 ಕೋಟಿ ರೂಪಾಯಿ ಆಗಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ. ಸಿನಿಮಾ ಹಿಂದಿರುವ ಹೊಂಬಾಳೆ ಫಿಲ್ಮ್ಸ್ ಮಾಹಿತಿ ಪ್ರಕಾರ, 'ಸಲಾರ್' ತನ್ನ ಮೊದಲ ದಿನ ದೇಶೀಯ ಮಾರುಕಟ್ಟೆಯಲ್ಲಿ 93.45 ಕೋಟಿ ರೂ. ವ್ಯವಹಾರ ನಡೆಸಿದೆ. ಜಾಗತಿಕವಾಗಿ 178.7 ಕೋಟಿ ರೂ. ಸಂಪಾದನೆ ಮಾಡಿದೆ.

ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಶನ್​ನ ಚೊಚ್ಚಲ ಚಿತ್ರವಿದು. ಮೆಗಾ ಆ್ಯಕ್ಷನ್ ಪ್ಯಾಕ್ಡ್ ಸಿನಿಮೀಯ ಅನುಭವ ನೀಡುವಲ್ಲಿ ಈ ಕಾಂಬೋ ಯಶ ಕಂಡಿದೆ. ಬಾಕ್ಸ್ ಆಫೀಸ್ ಯಶಸ್ಸಿನ ಜೊತೆಗೆ, 'ಸಲಾರ್' ನಟರಾದ ಚಿರಂಜೀವಿ, ವರುಣ್ ತೇಜ್ ಕೊನಿಡೇಲಾ, ಸಾಯಿ ಧರಮ್ ತೇಜ್ ಮತ್ತು ರಿಷಬ್ ಶೆಟ್ಟಿ ಸೇರಿದಂತೆ ಹಲವರಿಂದ ಮೆಚ್ಚುಗೆ ಗಳಿಸಿದೆ.

ಇದನ್ನೂ ಓದಿ:ಪ್ರಭಾಸ್ ನಟನೆ, ಪ್ರಶಾಂತ್ ನೀಲ್ ನಿರ್ದೇಶನ ಶೈಲಿಗೆ ಮನಸೋತ ನಟ ಚಿರಂಜೀವಿ

ಗುರುವಾರ ಬಿಡುಗಡೆಯಾದ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಡಂಕಿ ಸಿನಿಮಾ ಮೂರನೇ ದಿನ ಭಾರತದಲ್ಲಿ 13.76 ಕೋಟಿ ರೂಪಾಯಿ ಗಳಿಸಿದೆ. ಡಿಸೆಂಬರ್ 21 ರಂದು ತೆರೆಕಂಡ ಈ ಸಿನಿಮಾ ತನ್ನ ಮೊದಲ ದಿನ 29.2 ಕೋಟಿ ರೂ. ಕಲೆಕ್ಷನ್​​ ಮಾಡಿತ್ತು. ಎರಡನೇ ದಿನದ ಗಳಿಕೆ - 20.5 ಕೋಟಿ ರೂ. ಆಗಿದ್ದು, ರಾಜ್​​​ಕುಮಾರ್​​ ಹಿರಾನಿ ನಿರ್ದೇಶನದ ಚಿತ್ರದ ಕಲೆಕ್ಷನ್​​ ಮೀರಿಸುವಲ್ಲಿ ಸಲಾರ್​​ ಯಶಸ್ವಿಯಾಗಿದೆ.

ಇದನ್ನೂ ಓದಿ:ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಕಲೆಕ್ಷನ್​ ಮಾಡಿದ 'ದಂಗಲ್​'ಗೆ 7 ವರ್ಷ; ಹಿಟ್​ ಲಿಸ್ಟ್ ಇಲ್ಲಿದೆ

ABOUT THE AUTHOR

...view details