ಪ್ಯಾನ್ ಇಂಡಿಯಾ ಸ್ಟಾರ್ ಮತ್ತು ಕೆಜಿಎಫ್, ಕಾಂತಾರಗಳಂತಹ ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಕಾಂಬೋದ ಮುಂದಿನ ಬಹುನಿರೀಕ್ಷಿತ ಚಿತ್ರ ''ಸಲಾರ್''. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹಿನ್ನೆಲೆ ಸಿನಿಮಾದ ಮೇಲೆ ಶಿಖರದಷ್ಟು ನಿರೀಕ್ಷೆಗಳಿವೆ. ಸಿನಿಪ್ರಿಯರ ನಿರೀಕ್ಷೆ ಪೂರೈಸಲು ಚಿತ್ರತಂಡ ಸಹ ಸಂಪೂರ್ಣ ಶ್ರಮ ಹಾಕಿದೆ.
ದಕ್ಷಿಣ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಸಲಾರ್ ಭಾಗ 1 ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಒಳಗೊಂಡಿರಲಿದೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದ ಆ್ಯಕ್ಷನ್ ಸೀಕ್ವೆನ್ಸ್ ಶೂಟಿಂಗ್ ಸಂದರ್ಭ ಜೀಪ್ಸ್, ಟ್ಯಾಂಕ್ಸ್, ಟ್ರಕ್ಸ್ ಸೇರಿದಂತೆ 750ಕ್ಕೂ ಹೆಚ್ಚು ವಾಹನಗಳನ್ನು ಬಳಸಿಕೊಳ್ಳಲಾಗಿದೆ.
ಇತ್ತೀಚೆಗಷ್ಟೇ ಸಲಾರ್ ಭಾಗ 1ರ ಟೀಸರ್ ಬಿಡುಗಡೆ ಆಗಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳನ್ನು ಕುತೂಹಲದಿಂದ ಕಾಯುವಂತೆ ಮಾಡಿದೆ. ಪ್ರಭಾಸ್ ಮತ್ತು ಪ್ರಶಾಂತ್ ಕಾಂಬೋದ ಚೊಚ್ಚಲ ಚಿತ್ರವು ಅತಿ ಹೆಚ್ಚು ಕ್ರೇಜ್ ಕ್ರಿಯೇಟ್ ಮಾಡಿರುವ ಕಂಪ್ಲೀಟ್ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾವಾಗಿದೆ.
ಚಿತ್ರ ನಿರ್ಮಾಣ ತಂಡದಲ್ಲಿರುವವರು ಸಲಾರ್ ಆ್ಯಕ್ಷನ್ ಸೀಕ್ವೆನ್ಸ್‌ಗಳ ಕೊಂಚ ಮಾಹಿತಿ ಹಂಚಿಕೊಂಡಿದ್ದಾರೆ. ಸಲಾರ್‌ನ ಚಿತ್ರೀಕರಣಕ್ಕಾಗಿ 750ಕ್ಕೂ ಹೆಚ್ಚು ವಿವಿಧ ಬಗೆಯ ವಾಹನಗಳನ್ನು ಬಳಸಿಕೊಳ್ಳಲಾಗಿದೆ. ಜೀಪ್‌ಗಳು, ಟ್ರಕ್‌ಗಳು ಸೇರಿದಂತೆ ಹಲವು ವಾಹನಗಳನ್ನು ಶೂಟಿಂಗ್ಗೆ ಬಳಸಲಾಗಿದೆ. ಹಾಲಿವುಡ್ ಮೂವಿಯಲ್ಲಿರುವಂತೆ ಅತಿ ದೊಡ್ಡ ಆ್ಯಕ್ಷನ್ ಸೀನ್ಗಳನ್ನು ಚಿತ್ರಿಸಲಾಗಿದೆ. ಸಿನಿಮಾದಲ್ಲಿ ಯುದ್ಧ ಭೂಮಿಯೇ ನಿರ್ಮಾಣಗೊಂಡಿದೆ. ಅದ್ಭುತ ಆ್ಯಕ್ಷನ್ ಸನ್ನಿವೇಶಗಳನ್ನು ಚಿತ್ರದಲ್ಲಿ ತೋರಿಸಲು ಚಿತ್ರತಂಡ ಸಜ್ಜಾಗಿದೆ ಎಂದು ಮೂಲಗಳು ಮಾಹಿತಿ ಹಂಚಿಕೊಂಡಿವೆ.