ಕರ್ನಾಟಕ

karnataka

ETV Bharat / entertainment

ಸಲಾಮ್ ವೆಂಕಿ ಟ್ರೇಲರ್ ಬಿಡುಗಡೆ; ಮುಖ್ಯ ಪಾತ್ರದಲ್ಲಿ ನಟಿ ಕಾಜೊಲ್ - ಡಿಸೆಂಬರ್ 9 ರಂದು ಬಿಡುಗಡೆ

ಬಾಲಿವುಡ್ ನಟಿ ಕಾಜೊಲ್ ಮುಂದಿನ ಚಿತ್ರ 'ಸಲಾಮ್ ವೆಂಕಿ' ಟ್ರೇಲರ್ ಇಂದು ಬಿಡುಗಡೆಗೊಂಡಿದೆ. ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದ್ದು, ತಾಯಿಯೊಬ್ಬಳು ತನ್ನ ಮಕ್ಕಳಿಗಾಗಿ ಮಾಡುವ ಹೋರಾಟ ಹೇಳುತ್ತದೆ.

Salaam Venky Trailer OUT
ಸಲಾಮ್ ವೆಂಕಿ ಟ್ರೇಲರ್ ಬಿಡುಗಡೆ; ಮುಖ್ಯ ಪಾತ್ರದಲ್ಲಿ ನಟಿ ಕಾಜೊಲ್

By

Published : Nov 14, 2022, 5:08 PM IST

ಬಾಲಿವುಡ್ ನಟಿ ಕಾಜೊಲ್ ಮುಂದಿನ ಚಿತ್ರ 'ಸಲಾಮ್ ವೆಂಕಿ' ಟ್ರೇಲರ್ ಇಂದು ಬಿಡುಗಡೆಗೊಂಡಿದೆ. ಮಕ್ಕಳ ದಿನಾಚರಣೆಯ ದಿನದಂದೇ ಬಿಡುಗಡೆ ಮಾಡಲಾಗಿದೆ. ಈ ಚಿತ್ರದ ಮೂಲಕ ಕಾಜೊಲ್ ಬೆಳ್ಳಿತೆರೆಯಲ್ಲಿ ದೊಡ್ಡ ಹಿಟ್​ಗಾಗಿ ತಯಾರಿ ನಡೆಸಿದ್ದಾರೆ.

'ಸಲಾಮ್ ವೆಂಕಿ' ಚಿತ್ರದ 2.17 ನಿಮಿಷಗಳ ಟ್ರೈಲರ್ ತಾಯಿ ಮತ್ತು ಮಗನ ಕಥೆಯ ಮೇಲೆ ನಿಂತಿದೆ. ಕಥೆಯಲ್ಲಿ ಕಾಜೊಲ್ ಪುತ್ರ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದು, ಅವನನ್ನು ನೋಡಿಕೊಳ್ಳಲು ಆಕೆ ಹಗಲಿರುಳು ಶ್ರಮಿಸುತ್ತಾಳೆ. ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದ್ದು, ತಾಯಿಯೊಬ್ಬಳು ತನ್ನ ಮಕ್ಕಳಿಗಾಗಿ ಮಾಡುವ ಹೋರಾಟವನ್ನು ಈ ಚಿತ್ರ ಹೇಳುತ್ತದೆ. ಚಿತ್ರದ ಟ್ರೇಲರ್‌ನ ಕೊನೆಗೆ, ಕಾಜೊಲ್ ಆಸ್ಪತ್ರೆಯಲ್ಲಿ ತಮ್ಮ ಮಗನ ಚೇತರಿಕೆಗಾಗಿ ಪ್ರಾರ್ಥಿಸುತ್ತಿರುವ ದೃಶ್ಯದಲ್ಲಿ ಅಮೀರ್ ಖಾನ್ ಕಾಣಿಸಿಕೊಂಡಿದ್ದಾರೆ.

ತಮಿಳು ಖ್ಯಾತ ನಟಿ ರೇವತಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಇದೇ ಡಿಸೆಂಬರ್ 9 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ:ವಿಭಿನ್ನ ಶೀರ್ಷಿಕೆಯ 'ಬಿಂಗೊ' ಸಿನಿಮಾದಲ್ಲಿ ತುಪ್ಪದ ಬೆಡಗಿ ರಾಗಿಣಿ

ABOUT THE AUTHOR

...view details