ಕರ್ನಾಟಕ

karnataka

ETV Bharat / entertainment

ಸೈಮಾ ಅವಾರ್ಡ್ಸ್ 2022: ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರ ಅತ್ಯುತ್ತಮ ನಟ ಪ್ರಶಸ್ತಿ - puneeth rajkumar

ಸೈಮಾ ಅವಾರ್ಡ್ಸ್ 2022 ಪವರ್ ಸ್ಟಾರ್ ಪುನೀತ್ ರಾಜ್​​​ಕುಮಾರ್ ನೆನಪಿನೊಂದಿಗೆ ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ.

Saima Awards 2022
ಸೈಮಾ ಅವಾರ್ಡ್ಸ್ 2022

By

Published : Sep 11, 2022, 12:20 PM IST

Updated : Sep 11, 2022, 1:14 PM IST

ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ತಾರೆಯರ, ತಂತ್ರಜ್ಞರ ಸಮಾಗಮದಲ್ಲಿ ನಡೆಯುವ ಪ್ರತಿಷ್ಠಿತ ಸೈಮಾ ಅವಾರ್ಡ್ಸ್ 2022 ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್​​​ಕುಮಾರ್ ನೆನಪಿನೊಂದಿಗೆ ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಎರಡು ದಿನಗಳ ಕಾರ್ಯಕ್ರಮವಾಗಿದ್ದು ಇಂದೂ ಕೂಡ ನಡೆಯಲಿದೆ. ಕಳೆದ ಹತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯುತ್ತಿದೆ.

ಸೈಮಾ ಅವಾರ್ಡ್ಸ್ 2022

SIIMA - 'ಸೌತ್ ಇಂಡಿಯನ್ ಇಂಟರ್​ನ್ಯಾಷನಲ್​ ಮೂವಿ ಅವಾರ್ಡ್ಸ್​' 2012ರಲ್ಲಿ ಆರಂಭಗೊಂಡಿದ್ದು, ಈ ಬಾರಿ 10 ವರ್ಷದ ಸಂಭ್ರಮಾಚರಣೆಯಲ್ಲಿದೆ. ಪ್ರತಿ ಭಾಷೆಯಲ್ಲಿ ಸುಮಾರು 19 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. 2021ರಲ್ಲಿ ತೆರೆಗೆ ಬಂದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳನ್ನು ನಾನಾ ವಿಭಾಗಗಳಡಿ ನಾಮಿನೇಷನ್ ಮಾಡಲಾಗಿತ್ತು. ಈ ಪೈಕಿ ಹಲವು ಸಿನಿಮಾಗಳು ನಿನ್ನೆ ಪ್ರಶಸ್ತಿ ಪಡೆದಿವೆ.

ಸೈಮಾ ಅವಾರ್ಡ್ಸ್ 2022

ದಿ. ಪುನೀತ್ ರಾಜ್​​​ಕುಮಾರ್ ನೆನಪಿನೊಂದಿಗೆ ಈ ಕಾರ್ಯಕ್ರಮ ನಡೆದಿದ್ದು, ಯುವರತ್ನನಿಗೆ ಮರಣೋತ್ತರ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ. ತರುಣ್ ಸುಧೀರ್ ನಿರ್ದೇಶನದಲ್ಲಿ 2021ರಲ್ಲಿ ಬಂದ ರಾಬರ್ಟ್​ ಸಿನಿಮಾದ ಸಿನಿಮಾಟೋಗ್ರಫಿಗೆ 'ಬೆಸ್ಟ್ ಸಿನಿಮಾಟೋಗ್ರಫಿ' (ಕನ್ನಡ) ಪ್ರಶಸ್ತಿಯನ್ನು ಸುಧಾಕರ್ ರಾಜ್ ಅವರು ಪಡೆದುಕೊಂಡಿದ್ದಾರೆ. ನಿನ್ನ ಸನಿಹಕೆ ಸಿನಿಮಾದ 'ನೀ ಪರಿಚಯ' ಹಾಡಿಗೆ ವಾಸುಕಿ ವೈಭವ್ 'ಅತ್ಯುತ್ತಮ ಗೀತ ರಚನಕಾರ' (ಕನ್ನಡ) ಪ್ರಶಸ್ತಿ ಬಾಚಿಕೊಂಡಿದ್ದಾರೆ.

ಸೈಮಾ ಪ್ರಶಸ್ತಿಗಳ ಪಟ್ಟಿ:

  • ಅತ್ಯುತ್ತಮ ನಟ: ಪುನೀತ್ ರಾಜ್​ಕುಮಾರ್ (ಯುವರತ್ನ)
  • ಅತ್ಯುತ್ತಮ ನಟಿ: ಆಶಿಕಾ ರಂಗನಾಥ್ (ಮದಗಜ)
  • ಅತ್ಯುತ್ತಮ ನಟಿ (ಕ್ರಿಟಿಕ್ಸ್​): ಅಮೃತಾ ಅಯ್ಯಂಗಾರ್ (ಬಡವ ರಾಸ್ಕಲ್)
  • ಅತ್ಯುತ್ತಮ ಹಾಸ್ಯ ನಟ: ಚಿಕ್ಕಣ್ಣ (ಪೊಗರು)
  • ಅತ್ಯುತ್ತಮ ನಿರ್ದೇಶನ: ತರುಣ್ ಸುಧೀರ್ (ರಾಬರ್ಟ್​)
  • ಅತ್ಯುತ್ತಮ ಪೋಷಕ ನಟಿ: ಆರೋಹಿ ನಾರಾಯಣ್ (ದೃಶ್ಯ 2)
  • ಅತ್ಯುತ್ತಮ ಪೋಷಕ ನಟ: ಪ್ರಮೋದ್​ (ರತ್ನನ್​ ಪ್ರಪಂಚ)
  • ಅತ್ಯುತ್ತಮ ಹಿನ್ನೆಲೆ ಗಾಯಕಿ: ಚೈತ್ರಾ ಆಚಾರ್ (‘ಗರುಡ ಗಮನ ವೃಷಭ ವಾಹನ’ ಚಿತ್ರದ ‘ಸೋಜುಗಾದ ಸೂಜುಮಲ್ಲಿಗೆ ಹಾಡು’)
  • ಅತ್ಯುತ್ತಮ ಸಂಗೀತ ನಿರ್ದೇಶಕ: ಅರ್ಜುನ್ ಜನ್ಯ- (ರಾಬರ್ಟ್)

ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳ ಚಿತ್ರಗಳಲ್ಲಿಯೂ ಪ್ರತ್ಯೇಕ 19 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ. ತೆಲುಗು ಚಿತ್ರರಂಗ ಬಾಚಿಕೊಂಡ ಪ್ರಶಸ್ತಿಗಳು ಈ ಕೆಳಗಿನಂತಿವೆ.

  • ಅತ್ಯುತ್ತಮ ಚಿತ್ರ: ಪುಷ್ಪ ದಿ ರೈಸ್
  • ಅತ್ಯುತ್ತಮ ನಟ: ಅಲ್ಲು ಅರ್ಜುನ್ (ಪುಷ್ಪ)
  • ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ: ನವೀನ್ ಪೋಲಿ ಶೆಟ್ಟಿ (ಜಾತಿ ರತ್ನಾಲು)
  • ದಕ್ಷಿಣ ಭಾರತದಲ್ಲಿ ಅತ್ಯುತ್ತಮ ಹಿಂದಿ ನಟ: ರಣವೀರ್ ಸಿಂಗ್
  • ಅತ್ಯುತ್ತಮ ನಟಿ: ಪೂಜಾ ಹೆಗಡೆ
  • ಅತ್ಯುತ್ತಮ ನಿರ್ದೇಶಕ: ಆರ್ಯ ಸುಕ್ಕು (ಪುಷ್ಪ)
  • ಅತ್ಯುತ್ತಮ ಹಾಸ್ಯ ನಟ: ಸುದರ್ಶನ್
  • ಅತ್ಯುತ್ತಮ ನಿರ್ಮಾಪಕ: ಸತೀಶ್ ವಿಗ್ನೇಷನ್ (ನಾಂದಿ)
  • ಅತ್ಯುತ್ತಮ ಪೋಷಕ ನಟ: ಜಗದೀಶ್ (ಪುಷ್ಪ)
  • ಅತ್ಯುತ್ತಮ ಪೋಷಕ ನಟಿ: ವರಲಕ್ಷ್ಮಿ ಶರತ್ ಕುಮಾರ್ (ಕ್ರ್ಯಾಕ್)
  • ಅತ್ಯುತ್ತಮ ಸಂಗೀತ ನಿರ್ದೇಶಕ: ದೇವಿ ಶ್ರೀ ಪ್ರಸಾದ್ (ಪುಷ್ಪ)
  • ಅತ್ಯುತ್ತಮ ನಟಿ (ಪ್ರಥಮ ಚಿತ್ರ): ಕೃತಿ ಶೆಟ್ಟಿ (ಉಪ್ಪೇನ)
  • ಅತ್ಯುತ್ತಮ ಯುವ ಐಕಾನ್ ನಟಿ: ಪೂಜಾ ಹೆಗ್ಡೆ
  • ಅತ್ಯುತ್ತಮ ನಿರ್ದೇಶನ: ಬುಚ್ಚಿ ಬಾಬು ಸನ (ಉಪ್ಪಿನ)
  • ಯೂತ್ ಐಕಾನ್ ಪ್ರಶಸ್ತಿ (ಪುರುಷರ ವಿಭಾಗದಲ್ಲಿ): ವಿಜಯ್ ದೇವರಕೊಂಡ
  • ಪ್ರೊಡಕ್ಷನ್ ಡಿಸೈನ್ ವಿಭಾಗದಲ್ಲಿ ಜೂರಿ ಪ್ರಶಸ್ತಿ: ರಾಮಕೃಷ್ಣ ಹಾಗೂ ಮೌನಿಕ
  • ಅತ್ಯುತ್ತಮ ಹಿನ್ನೆಲೆ ಗಾಯಕಿ: ಗೀತಾ ಮಾಧುರಿ, (ಅಖಂಡ ಚಿತ್ರದ ಜೈ ಬಾಲಯ್ಯ ಹಾಡು)
  • ಅತ್ಯುತ್ತಮ ಹಿನ್ನೆಲೆ ಗಾಯಕ: ರಾಮ ಮಿರಿಯಾಲ (ಜಾತಿ ರತ್ನಾಲು)

ಇದನ್ನೂ ಓದಿ:ಟಾಲಿವುಡ್​​ ರೆಬಲ್ ಸ್ಟಾರ್, ನಟ ಪ್ರಭಾಸ್​ ಚಿಕ್ಕಪ್ಪ ಕೃಷ್ಣಂರಾಜು ನಿಧನ

ಮೊದಲ ದಿನದ ಕಾರ್ಯಕ್ರಮದಲ್ಲಿ ಹಲವು ಸ್ಟಾರ್​ಗಳ ಸಮಾಗಮ ಆಗಿತ್ತು. ಯಶ್, ಅಲ್ಲು ಅರ್ಜುನ್ , ತೆಲುಗು ನಟ ಆಲಿ ಕುಟುಂಬ, ಶುಭ್ರಾ ಅಯ್ಯಪ್ಪ, ಸೋನು ಗೌಡ , ಲಾಸ್ಯ ನಾಗರಾಜ್ , ಕಾವ್ಯ ಶಾ, ಆಕುಲ್ ಬಾಲಾಜಿ, ನಿಧಿ ಸುಬ್ಬಯ್ಯ ಅರ್ಜುನ್ ಜನ್ಯ ಪೂರ್ಣಿಮ ರಾಮ್ ಕುಮಾರ್, ಐಂದ್ರಿತಾ ರೇ, ದಿಗಂತ್, ಕಮಲ್ ಹಾಸನ್ ಸೇರಿದಂತೆ ಹಲವು ನಟನಟಿಯರು ಆಗಮಿಸಿದ್ದರು.

Last Updated : Sep 11, 2022, 1:14 PM IST

ABOUT THE AUTHOR

...view details