ದಬಾಂಗ್ 3 ಮತ್ತು ಮೇಜರ್ ನಂತಹ ಸಿನಿಮಾ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಸಾಯಿ ಎಂ ಮಂಜ್ರೇಕರ್ ( Saiee M Manjrekar ) ಅವರು ಶೀಘ್ರದಲ್ಲೇ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಹೆಸರಿಸದ ಮುಂದಿನ ಸಿನಿಮಾದಲ್ಲಿ 'ಇಸ್ಮಾರ್ಟ್ ಶಂಕರ್' ಖ್ಯಾತಿಯ ನಟ ರಾಮ್ ಪೋತಿನೇನಿ ( Ram Pothineni ) ಜೊತೆ ನಟಿಸುತ್ತಿದ್ದಾರೆ. ಶ್ರೀಮಂತ, ಸುಶಿಕ್ಷಿತ ಹುಡುಗಿಯೊಬ್ಬರು ಕೌಟುಂಬಿಕ ಕಲಹದಲ್ಲಿ ಸಿಕ್ಕಿಹಾಕಿಕೊಳ್ಳುವ ಪಾತ್ರವನ್ನು ನಟಿ ಸಾಯಿ ಎಂ ಮಂಜ್ರೇಕರ್ ನಿರ್ವಹಿಸುತ್ತಿದ್ದಾರೆ. ಸದ್ಯ ಈ ಹೆಸರಿಡದ ಚಿತ್ರ ನಿರ್ಮಾಣ ಹಂತದಲ್ಲಿದೆ.
ಟೈಟಲ್ ಫಿಕ್ಸ್ ಆಗದ ಈ ಚಿತ್ರದಲ್ಲಿ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ ನಟಿ ಸಾಯಿ ಎಂ ಮಂಜ್ರೇಕರ್, "ಈ ಚಿತ್ರದಲ್ಲಿ ಕೆಲಸ ಮಾಡುತ್ತಿರುವುದು ಒಂದು ಅದ್ಭುತ ಪ್ರಯಾಣ. ನಾನು ನಿರ್ವಹಿಸುತ್ತಿರುವ ಪಾತ್ರವು ಸಂಕೀರ್ಣ ಮತ್ತು ಬಹುಮುಖವಾಗಿದೆ. ಇದು ಕಲಾವಿದರಿಗೆ ಯಾವಾಗಲೂ ಒಂದು ದೊಡ್ಡ ಸವಾಲು ಎಂದು ಹೇಳಿದರು.
ಚಿತ್ರದಲ್ಲಿ ತನ್ನ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಲು ಸಹಾಯ ಮಾಡಿದ್ದಕ್ಕಾಗಿ ತಮ್ಮ ನಿರ್ದೇಶಕರು ಮತ್ತು ಸಹ ನಟರಿಗೆ ಧನ್ಯವಾದ ಅರ್ಪಿಸಿದರು. "ನಮ್ಮ ನಿರ್ದೇಶಕರು ಮತ್ತು ನನ್ನ ಸಹ ನಟರ ಮಾರ್ಗದರ್ಶನದಿಂದ ನಾನು ಈವರೆಗೆ ಬರಲು ಸಾಧ್ಯವಾಯಿತು, ಈ ಚಿತ್ರದ ಮೂಲಕ ಪ್ರೇಕ್ಷಕರನ್ನು ಸಂಪರ್ಕಿಸಲಿದ್ದೇನೆ ಎಂದು ನಾನು ಭಾವಿಸುತ್ತೇನೆ. ಈ ಅವಕಾಶಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ ಮತ್ತು ಈ ಸಿನಿಮಾ ನೋಡಲು ಬಹಳ ಕಾತರಳಾಗಿದ್ದೇನೆ'' ಎಂದು ತಿಳಿಸಿದರು.