ಕೊಡಗಿನ ಬೆಡಗಿ, ನ್ಯಾಶನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಬಹು ಭಾಷಾ ಚಿತ್ರರಂಗದಲ್ಲಿ ಛಾಪು ಮೂಡಿಸುತ್ತಿದ್ದು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಚಿಕ್ಕ ಮಕ್ಕಳೂ ಕೂಡ ರಶ್ಮಿಕಾರ ಮೇಲಿನ ಅಭಿಮಾನ ವ್ಯಕ್ತಪಡಿಸುತ್ತಿರುತ್ತಾರೆ. ಇದೀಗ ಪುಟ್ಟ ಹುಡುಗಿಯ ನೃತ್ಯಕ್ಕೆ ಮನಸೋತ ರಶ್ಮಿಕಾ ಮಂದಣ್ಣ ಬಾಲಕಿಯನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ತೆಲುಗಿನ ಪುಷ್ಪ ಸಿನಿಮಾದ ಸಾಮಿ ಸಾಮಿ.. ಹಾಡು ಸೂಪರ್ ಹಿಟ್ ಆಗಿದೆ. ಈ ಹಾಡಿನಲ್ಲಿ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ, ಲಂಗ ದಾವಣಿ ತೊಟ್ಟು ಮಸ್ತ್ ಸ್ಟೆಪ್ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿನ ಸಿಗ್ನೇಚರ್ ಸ್ಟೆಪ್ ಸಖತ್ ಟ್ರೆಂಡ್ ಆಗಿದೆ. ಇದೀಗ ಈ ಹಾಡಿಗೆ ಪುಟ್ಟ ಹುಡುಗಿ ಸ್ಟೆಪ್ ಹಾಕಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ. ಈ ಬಾಲಕಿಯ ಡ್ಯಾನ್ಸ್ಗೆ ನ್ಯಾಶನಲ್ ಕ್ರಶ್ ರಶ್ಮಿಕಾ ಮನಸೋತಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಂಡಿರುವ ರಶ್ಮಿಕಾ, ನಾನು ಈ ಬಾಲಕಿಯನ್ನು ಭೇಟಿಯಾಗಬೇಕು. ನಾನು ಹೇಗೆ ಆಕೆಯನ್ನು ಭೇಟಿಯಾಗಬಹುದು? ಎಂದು ಟ್ವೀಟ್ ಮೂಲಕ ಪ್ರಶ್ನೆ ಕೇಳಿದ್ದಾರೆ. ಈ ವಿಡಿಯೋದಲ್ಲಿ ಶಾಲಾ ಮಕ್ಕಳು ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ: ತನಿಖೆಗೆ ಹಾಜರಾದ ನಟಿ ಜಾಕ್ವೆಲಿನ್ ಫರ್ನಾಂಡಿಸ್
ಸದ್ಯ ರಶ್ಮಿಕಾ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರೊಂದಿಗೆ ಅಭಿನಯಿಸಿರುವ ಗುಡ್ ಬೈ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಗುಡ್ ಬೈ ಟ್ರೈಲರ್ಗೆ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏಕ್ತಾ ಕಪೂರ್ ನಿರ್ಮಿಸಿರುವ ಈ ಚಿತ್ರವು ಅಕ್ಟೋಬರ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಅಲ್ಲದೇ ರಶ್ಮಿಕಾ ಮಿಷನ್ ಮಜ್ನು ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಮಿಷನ್ ಮಜ್ನು ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಅನಿಮಲ್ ಚಿತ್ರದ ಕೆಲಸದಲ್ಲಿಯೂ ತೊಡಗಿಸಿಕೊಂಡಿದ್ದಾರೆ.