ಹೈದರಾಬಾದ್: ಜಗತ್ತಿನ ಹಲವು ಪ್ರಶಸ್ತಿ ಸಮಾರಂಭ, ಸಿನಿ ವೇದಿಯಲ್ಲಿ 'ಆರ್ಆರ್ಆರ್' ಸಿನಿಮಾ ಹಲವು ಪ್ರಶಸ್ತಿಗಳನ್ನು ಪಡೆದು, ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ತರುವಂತೆ ಮಾಡಿದೆ. ಈ ನಡುವೆ ಮತ್ತೊಂದು ಪ್ರಶಸ್ತಿಗೆ ಚಿತ್ರ ಆಯ್ಕೆಯಾಗಿದೆ. ಗೋಲ್ಡನ್ ಟೊಮಟೊ ಅವಾರ್ಡ್ನಲ್ಲಿ ಇದೀಗ 'ಆರ್ಆರ್ಆರ್' ಸಿನಿಮಾ ಫ್ಯಾನ್ ಫೆವರೇಟ್ ಮೂವಿ (ಅಭಿಮಾನಿಗಳ ಮೆಚ್ಚಿನ ಸಿನಿಮಾ) ಕ್ಯಾಟಗರಿಯಲ್ಲಿ ಪ್ರಶಸ್ತಿ ಪಡೆದಿದೆ. ಈ ವಿಷಯವನ್ನು ಹಂಚಿಕೊಂಡಿರುವ ತಂಡ ಚಿತ್ರವನ್ನು ಮೆಚ್ಚಿ ಅದಕ್ಕಾಗಿ ಮತ ಚಲಾಯಿಸಿದ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದೆ.
ಸಿನಿ ಪ್ರೇಮಿಗಳ ಮತ ಚಲಾವಣೆ ಆಧಾರದ ಮೇಲೆ ಅಮೆರಿಕದ ರೊಟ್ಟೆನ್ ಟೊಮಟೋಸ್ ವೆಬ್ಸೈಟ್ ಪ್ರತಿ ವರ್ಷ ಸಿನಿಮಾಗಳಿಗೆ ಪ್ರಶಸ್ತಿ ನೀಡುತ್ತದೆ. 2022ರಲ್ಲಿ ಆರ್ಆರ್ಆರ್ ಇದಕ್ಕೆ ಆಯ್ಕೆಯಾಗಿದ್ದು, ಟಾಪ್ಗನ್; ಮವೆರಿಕ್. ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್ ಮತ್ತು ಅವತಾರ್: ದಿ ವೇ ಆಫ್ ವಾಟರ್ ಅನ್ನು ಸೋಲಿಸುವ ಮೂಲಕ ಟಾಪ್ 1 ಸ್ಥಾನವನ್ನು ಭಾರತೀಯ ಸಿನಿಮಾ ಪಡೆದಿದೆ. ಈ ಚಿತ್ರಗಳಿ 2023ರ ಆಸ್ಕರ್ ಉತ್ತಮ ಸಿನಿಮಾಗಳಿಗೆ ಆಯ್ಕೆ ಆಗಿದೆ.
ಈಗಾಗಲೇ 'ಆರ್ಆರ್ಆರ್' ಸಿನಿಮಾದ 'ನಾಟು ನಾಟು' ಹಾಡು 2023ರ ಆಸ್ಕರ್ ಅಂಗಳಕ್ಕೆ ಆಯ್ಕೆಯಾಗಿದೆ. ಒರಿಜಿನಲ್ ಸಾಂಗ್ ವರ್ಗದಲ್ಲಿ ಈ ಹಾಡು ಆಯ್ಕೆಯಾಗಿದೆ. ಇನ್ನು ಈಗಾಗಲೇ ಈ ಸಿನಿಮಾ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ ಕೂಡ ಗೆದ್ದಿದ್ದು, ಜಪಾನ್ನಲ್ಲಿ 46ನೇ ಅಕಾಡೆಮಿ ಅವಾರ್ಡ್ ಪ್ರಶಸ್ತಿ ಕೂಡ ಪಡೆದಿದೆ. ಜೊತೆಗೆ ಫಿಲಡೆಲ್ಫಿಯಾ ಫಿಲ್ಮ್ ಕ್ರಿಟಿಕ್ಸ್ ಆವಾರ್ಡ್, ಅಟ್ಲಾಂಟಾ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಆವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಸಿನಿಮಾ ಬಾಚಿಕೊಂಡಿದೆ. ಇನ್ನು ಈ ಸಿನಿಮಾ ನಿರ್ದೇಶಕ ರಾಜಮೌಳಿ ಕೂಡ ದಿ ನ್ಯೂ ಯಾರ್ಕ್ ಫಿಲ್ಮ್ ಕ್ರಿಟಿಕಲ್ ಸರ್ಕಲ್ನ ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು. ಇನ್ನು ಈ ಚಿತ್ರದ ನಟರಾದ ರಾಮ್ ಚರಣ್ ಮತ್ತು ಎನ್ಟಿಆರ್ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.