‘ಆರ್‌ಆರ್‌ಆರ್’ ಸಿನಿಮಾ ಬಿಡುಗಡೆಯಾಗಿ ಬಹಳ ದಿನಗಳೇ ಕಳೆದಿವೆ. ಆದರೂ ಇದರ ಹವಾ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಬಿಡುಗಡೆ ಆಗಿ ಬಾಕ್ಸ್ ಆಫೀಸ್ನಲ್ಲಿ ಸಖತ್ ಕಮಾಲ್ ಮಾಡಿದೆ. ಇದೀಗ ಈ ಸಿನಿಮಾ ಜಪಾನ್‌ನಲ್ಲಿ ಕಮಾಲ್ ಮಾಡಲು ಸಿದ್ಧವಾಗುತ್ತಿದೆ. ಹೌದು, ಇದೇ ವರ್ಷ ಅಕ್ಟೋಬರ್ 21ರಂದು ಜಪಾನ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.
ಜಪಾನ್‌ನಲ್ಲಿ ಎನ್ಟಿಆರ್ಗೆ ಒಳ್ಳೆಯ ಕ್ರೇಜ್ ಇದ್ದು, ಪ್ರೇಕ್ಷಕರ ಮುಂದೆ ತರಲು ಸಂತಸವಾಗುತ್ತಿದೆ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. ಜಪಾನಿನ ಅನೇಕರು ಈಗಾಗಲೇ ತೆಲುಗು ಸಿನಿಮಾಗಳ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಜಪಾನ್‌ನ ಹೀರೋ ಮುನಿರು, ಅಸಾಹಿ ಸನಕಿ ಮತ್ತು ಇತರರು ಎನ್‌ಟಿಆರ್, ರಾಮ್ ಚರಣ್, ಅಲ್ಲು ಅರ್ಜುನ್ ಅವರ ಸೂಪರ್ ಹಿಟ್ ಹಾಡುಗಳಿಗೆ ಕವರ್ ವಿಡಿಯೋಗಳನ್ನು ಮಾಡಿದ್ದಾರೆ. ಬಹುತೇಕರು ಎನ್ ಟಿಆರ್ ಅವರ ಹಾಡುಗಳಿಗೆ ನೃತ್ಯ ಮಾಡಿದ್ದಾರೆ.