ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿರುವ 'ಆರ್‌ಆರ್‌ಆರ್' ಚಿತ್ರ ಆಸ್ಕರ್ ಅವಾರ್ಡ್ ಮೇಲೆ ಕಣ್ಣಿಟ್ಟಿರೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಈಗಾಗಲೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಆರ್‌ಆರ್‌ಆರ್ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರೋದು ಹೊಸ ಸಂಗತಿ. ಬೆಸ್ಟ್ ಆ್ಯಕ್ಟರ್ ಇನ್ ಆ್ಯಕ್ಷನ್ ಮೂವಿ ಮತ್ತು ಬೆಸ್ಟ್ ಆ್ಯಕ್ಷನ್ ಮೂವಿ ವಿಭಾಗದಲ್ಲಿ ನಾಮನಿರ್ದೇಶನ ಆಗಿದೆ.
ಹೌದು, 'ಕ್ರಿಟಿಕ್ಸ್ ಚಾಯ್ಸ್ ಸೂಪರ್ ಅವಾರ್ಡ್ಸ್ 2023'ರಲ್ಲಿ ಆರ್‌ಆರ್‌ಆರ್ ಸ್ಥಾನ ಪಡೆದುಕೊಂಡಿದೆ. ಸೌತ್ ಸೂಪರ್ ಸ್ಟಾರ್ಗಳಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಇಬ್ಬರೂ ಹಾಲಿವುಡ್ ದಿಗ್ಗಜರಾದ ಟಾಮ್ ಕ್ರೂಸ್ ಮತ್ತು ಬ್ರಾಡ್ ಪಿಟ್ ಅವರೊಂದಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
'ಆರ್‌ಆರ್‌ಆರ್' ಕ್ರಿಟಿಕ್ಸ್ ಚಾಯ್ಸ್ ಸೂಪರ್ ಅವಾರ್ಡ್ಸ್ 2023'ರಲ್ಲಿ ಅತ್ಯುತ್ತಮ ಆ್ಯಕ್ಷನ್ ಚಲನಚಿತ್ರಕ್ಕಾಗಿ ಆರ್‌ಆರ್‌ಆರ್ ನಾಮನಿರ್ದೇಶನ ಪಡೆದುಕೊಂಡಿದೆ. ಇದರಲ್ಲಿ ಹಾಲಿವುಡ್ ಸ್ಟಾರ್ ಟಾಮ್ ಕ್ರೂಸ್ ಅಭಿನಯದ ಚಿತ್ರ 'ಟಾಪ್ ಗನ್ ಮವೆರಿಕ್' ಮತ್ತು ಬ್ರಾಡ್ ಪಿಟ್ ಅವರ 'ದಿ ಬುಲೆಟ್ ಟ್ರೈನ್', 'ದಿ ವುಮನ್ ಕಿಂಗ್' ಮತ್ತು 'ದಿ ಅನ್‌ಬೇರಬಲ್ ವೆಯ್ಟ್ ಆಫ್ ಮ್ಯಾಸಿವ್ ಟ್ಯಾಲೆಂಟ್' ಚಿತ್ರಗಳೊಂದಿಗೆ 'ಆರ್‌ಆರ್‌ಆರ್' ಸ್ಪರ್ಧಿಸಲಿದೆ.
ಭಾರತದ ಶ್ರೇಷ್ಠ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಇಬ್ಬರೂ ಕ್ರಿಟಿಕ್ಸ್ ಚಾಯ್ಸ್ ಸೂಪರ್ ಅವಾರ್ಡ್ಸ್ 2023ರಲ್ಲಿ ಬೆಸ್ಟ್ ಆ್ಯಕ್ಟರ್ ಇನ್ ಆ್ಯಕ್ಷನ್ ಮೂವಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ. ಟಾಮ್ ಕ್ರೂಸ್ ಮತ್ತು ಬ್ರಾಡ್ ಪಿಟ್ ಕೂಡ ಈ ವಿಭಾಗದಲ್ಲಿ ನಾಮನಿರ್ದೇಶನಗಳನ್ನು ಪಡೆದಿದ್ದಾರೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಹಾಲಿವುಡ್ ದಿಗ್ಗಜರೊಂದಿಗೆ ಪೈಪೋಟಿ ನಡೆಸಲಿದ್ದಾರೆ.
ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಾಮನಿರ್ದೇಶನಗಳ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬುಲೆಟ್ ಟ್ರೈನ್, ಆರ್‌ಆರ್‌ಆರ್, ಟಾಪ್ ಗನ್ ಮವೆರಿಕ್, ದಿ ನಿಕ್ ಕೇಜ್ ಮತ್ತು ದಿ ವುಮನ್ ಕಿಂಗ್ ಅತ್ಯುತ್ತಮ ಆ್ಯಕ್ಷನ್ ಮೂವಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಕ್ಕಾಗಿ ಅಭಿನಂದನೆಗಳು ಎಂದು ಟ್ವೀಟ್‌ನಲ್ಲಿ ಮಾಡಲಾಗಿದೆ. ಮಾರ್ಚ್ 16ರಂದು ವಿಜೇತರನ್ನು ಘೋಷಿಸಲಾಗುತ್ತದೆ.
ಇದನ್ನೂ ಓದಿ:ಪಠಾಣ್ ಧಮಾಕ!: ಪ್ರೇಕ್ಷಕ ಪ್ರಭುವಿಗೆ ಧನ್ಯವಾದ ಅರ್ಪಿಸಿದ ನಿರ್ದೇಶಕ
ಇನ್ನೂ ರಾಮ್ ಚರಣ್ ಗುಡ್ ಮಾರ್ನಿಂಗ್ ಅಮೆರಿಕಾ ಟಾಕ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಅವರು ಆರ್‌ಆರ್‌ಆರ್ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ಅವರು ಅಂತಾರಾಷ್ಟ್ರೀಯ ಪ್ರಾಜೆಕ್ಟ್ ಅನ್ನು ನಿರ್ದೇಶಿಸಲು ಆಸಕ್ತಿ ಹೊಂದಿದ್ದಾರೆ ಎಂದು ಕೂಡ ರಾಮ್ ಚರಣ್ ಕಾರ್ಯಕ್ರಮದಲ್ಲಿ ಸುಳಿವು ನೀಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುಂಚಿತವಾಗಿ ತಮ್ಮ ಆರ್‌ಆರ್‌ಆರ್ ಚಲನಚಿತ್ರವನ್ನು ಪ್ರಚಾರ ಮಾಡುವ ಸಲುವಾಗಿ ಗುಡ್ ಮಾರ್ನಿಂಗ್ ಅಮೆರಿಕಾ ಟಾಕ್ ಶೋನಲ್ಲಿ ರಾಮ್ ಚರಣ್ ಕಾಣಿಸಿಕೊಂಡರು.
ಇದನ್ನೂ ಓದಿ:'ಗುಡ್ ಮಾರ್ನಿಂಗ್ ಅಮೆರಿಕ ಶೋ'ನಲ್ಲಿ ಆರ್‌ಆರ್‌ಆರ್ ಸ್ಟಾರ್ ರಾಮ್ ಚರಣ್
ಟಾಲಿವುಡ್‌ನ ಮೆಗಾಸ್ಟಾರ್, ರಾಮ್ ಚರಣ್ ತಂದೆ, ನಟ ಚಿರಂಜೀವಿ ಪುತ್ರನ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ತೆಲುಗು,ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ಕ್ಷಣ. ರಾಜಮೌಳಿ ಅವರ ಮೆದುಳಿನಲ್ಲಿ ಹುಟ್ಟಿದ ಒಂದು ಕಲ್ಪನೆಯ ಶಕ್ತಿಯು ಜಗತ್ತನ್ನು ಹೇಗೆ ಆವರಿಸುತ್ತದೆ ಎಂಬುದನ್ನು ನೋಡಲು ಅದ್ಭುತವಾಗಿದೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ರಾಜಮೌಳಿ ಅವರನ್ನು ಭಾರತದ ಸ್ಟೀವನ್ ಸ್ಪೀಲ್ಬರ್ಗ್ ( ವಿಶ್ವ ಖ್ಯಾತ ಹಾಲಿವುಡ್ ನಿರ್ದೇಶಕ) ಎಂದು ಕೂಡ ರಾಮ್ ಚರಣ್ ಬಣ್ಣಿಸಿದ್ದಾರೆ.