ವಾಷಿಂಗ್ಟನ್: ಪ್ರತಿಷ್ಟಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದ ಎಸ್.ಎಸ್.ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಸಿನಿಮಾದ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರು ರಾಮೋಜಿ ಗ್ರೂಪ್ ಅಧ್ಯಕ್ಷರಾದ ರಾಮೋಜಿ ರಾವ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜ್ಯೂ.ಎನ್ಟಿಆರ್ ಮತ್ತು ರಾಮ್ ಚರಣ್ ಅಭಿನಯದ 'ಆರ್ಆರ್ಆರ್' ಸಿನಿಮಾದ ನಾಟು ನಾಟು ಹಾಡು ಕ್ರಿಟಿಕ್ ಚಾಯ್ಸ್ ಪ್ರಶಸ್ತಿಯನ್ನು ಪಡೆದಿದೆ.
ಕೀರವಾಣಿ ಅವರು ರಾಮೋಜಿ ರಾವ್ ಸೇರಿದಂತೆ ಪ್ರಮುಖ ಮಾರ್ಗದರ್ಶಕರಿಗೆ ತಮ್ಮ ಕಲೆಯನ್ನು ಉತ್ಕೃಷ್ಠಗೊಳಿಸಿದ್ದಕ್ಕೆ ಟ್ವಿಟರ್ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. ಗೋಲ್ಡನ್ ಗ್ಲೋಬ್ ಸೇರಿದಂತೆ 4 ಅಂತಾರಾಷ್ಟ್ರೀಯ ಪ್ರಶಸ್ತಿಗಳೊಂದಿಗೆ ಮನೆಗೆ ಮರಳಿದ್ದೇನೆ. ತೆಲುಗು ರಾಜ್ಯದ ಗಡಿ ದಾಟಿ ತಮ್ಮ ಸಂಗೀತವನ್ನು ಉತ್ಕೃಷ್ಟಗೊಳಿಸಿದ ರಾಮೋಜಿ ರಾವ್ ಸೇರಿದಂತೆ ಎಲ್ಲಾ ಮಾರ್ಗದರ್ಶಕರಿಗೂ ಧನ್ಯವಾದಗಳು. ಬಾಲಚಂದ್ರ ಸರ್, ಭರತನ್ ಸರ್, ಅರ್ಜುನ್ ಸರ್ಜಾ ಮತ್ತು ಭಟ್ ಸಾಬ್ ಎಂದು ಹೆಸರು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ರಾಜಮೌಳಿ ನಿರ್ದೇಶನದ ಸಿನಿಮಾ ಮೆಚ್ಚಿದ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ಜೊತೆಗಿನ ಫೋಟೋವನ್ನು ಕೀರವಾಣಿ ಹಂಚಿಕೊಂಡಿದ್ದಾರೆ. ಕ್ಯಾಮರೂನ್ ಎರಡು ಬಾರಿ 'ಆರ್ಆರ್ಆರ್' ಸಿನಿಮಾ ವೀಕ್ಷಣೆ ಮಾಡಿದ್ದು, ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಇದು ಅಪಾರ ಸಂತಸ ತಂದಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. 'ಆರ್ಆರ್ಆರ್' ಸಿನಿಮಾದ ಸಂಗೀತವು ಪಾಶ್ಚಿಮಾತ್ಯ ಚಲನಚಿತ್ರಗಳಿಗಿಂತ ಹೇಗೆ ಭಿನ್ನವಾಗುತ್ತದೆ ಎಂಬುದರ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿ, ನನ್ನ ಕೆಲಸ ಬಗ್ಗೆ ಗುರುತಿಸಿದ್ದು ದೊಡ್ಡ ಗೌರವ ಎಂದು ತಿಳಿಸಿದ್ದಾರೆ.