ಕರ್ನಾಟಕ

karnataka

ETV Bharat / entertainment

ಆರ್​ಆರ್​ಆರ್​ ಸಿನಿಮಾಗೆ ಆಸ್ಕರ್​ ಆಸೆ ಜೀವಂತ.. ಈ ಕೆಟಗರಿಯಲ್ಲಿ ಸಿಗುತ್ತಾ ಪ್ರಶಸ್ತಿ - Oscar

ನಿರ್ದೇಶಕ ರಾಜಮೌಳಿ ಅವರ ಆರ್​ಆರ್​ಆರ್​ ಸಿನಿಮಾ ಸಾಮಾನ್ಯ ವರ್ಗದಲ್ಲಿ ಪರಿಗಣಿಸಲು ಅಕಾಡೆಮಿ ಆಫ್ ಆಸ್ಕರ್‌ಗೆ ಅರ್ಜಿ ಸಲ್ಲಿಸಿದೆ.

RRR movie seeks Oscar nomination in general category
ಆರ್​ಆರ್​ಆರ್​ ಸಿನಿಮಾಗೆ ಆಸ್ಕರ್​ ಆಸೆ

By

Published : Oct 8, 2022, 12:40 PM IST

ಮಾರ್ಚ್​ 25ರಂದು ತೆಲುಗು, ಕನ್ನಡ, ಮಲೆಯಾಳಂ, ಹಿಂದಿ, ತಮಿಳು ಭಾಷೆಗಳಲ್ಲಿ ತೆರೆ ಕಂಡಿದ್ದ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಆರ್​ಆರ್​ಆರ್​ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿತ್ತು. ವಿಶ್ವಾದ್ಯಂತ ಬಾಕ್ಸ್​ ಆಫೀಸ್​ನಲ್ಲಿ 1 ಸಾವಿರ ಕೋಟಿ ರೂಪಾಯಿ ಗಳಿಸಿದೆ. ತೆಲುಗು ಸ್ಟಾರ್ ನಟರಾದ ರಾಮ್​ಚರಣ್​, ಜೂನಿಯರ್​ ಎನ್​ಟಿಆರ್​ ಅಭಿನಯದ ಈ ಆರ್​ಆರ್​ಆರ್​ ಸಿನಿಮಾ ಸಾಮಾನ್ಯ ವರ್ಗದಲ್ಲಿ ಪರಿಗಣಿಸಲು ಅಕಾಡೆಮಿ ಆಫ್ ಆಸ್ಕರ್‌ಗೆ ಅರ್ಜಿ ಸಲ್ಲಿಸಿದೆ.

ನಾವು ಸಾಮಾನ್ಯ ವರ್ಗದಲ್ಲಿ ಆಸ್ಕರ್‌ ಅಕಾಡೆಮಿಗೆ ಅರ್ಜಿ ಸಲ್ಲಿಸಿದ್ದೇವೆ. ನಮ್ಮ RRR ಕುಟುಂಬಕ್ಕೆ ನಾವು ಶುಭ ಹಾರೈಸುತ್ತೇವೆ. ಮತ್ತು ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಅವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಆರ್​ಆರ್​ಆರ್​ ಟ್ವಿಟರ್​ ಖಾತೆ ತಿಳಿಸಿದೆ.

ಇದನ್ನೂ ಓದಿ:ಹೊಸ ವೆಬ್ ಸಿರೀಸ್​​​ಗಾಗಿ ವಿಶೇಷ ತರಬೇತಿ ಪಡೆಯುತ್ತಿರುವ ಸಮಂತಾ

"ಆರ್‌ಆರ್‌ಆರ್‌ ಗಲ್ಲಾಪೆಟ್ಟಿಗೆಯಲ್ಲಿ ಮೈಲಿಗಲ್ಲುಗಳನ್ನು ಸೃಷ್ಟಿಸುವ ಮೂಲಕ ಮತ್ತು ಭಾಷಾ ಮತ್ತು ಸಾಂಸ್ಕೃತಿಕ ಅಡೆತಡೆಗಳನ್ನು ಮೀರಿ ಪ್ರಪಂಚದಾದ್ಯಂತದ ಚಲನಚಿತ್ರ ಅಭಿಮಾನಿಗಳನ್ನು ಒಂದುಗೂಡಿಸುವ ಮೂಲಕ ಜಾಗತಿಕ ವೇದಿಕೆಯಲ್ಲಿ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸಿದೆ ಎಂದು ನಾವು ಗೌರವಿಸುತ್ತೇವೆ" ಎಂದು ಅದು ಹೇಳಿದೆ.

ABOUT THE AUTHOR

...view details