'ಆರ್‌ಆರ್‌ಆರ್' ಚಿತ್ರ ನಿರ್ಮಾಪಕರು ಆಸ್ಕರ್ ರೇಸ್‌ನಲ್ಲಿ ಮತ್ತಷ್ಟು ಪ್ರಗತಿ ಸಾಧಿಸುತ್ತಿರುವ ಖುಷಿಯಲ್ಲಿದ್ದಾರೆ. 2023ರ ಆಸ್ಕರ್ ಪ್ರಶಸ್ತಿಗಳಿಗೆ 'ಅತ್ಯುತ್ತಮ ಮೂಲ ಗೀತೆ' ವಿಭಾಗದಲ್ಲಿ ಬ್ಲಾಕ್‌ಬಸ್ಟರ್ ತೆಲುಗು ಚಲನಚಿತ್ರದ 'ನಾಟು ನಾಟು' ಹಾಡನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಚಿತ್ರ ವಿಮರ್ಶಕ ತರಣ್ ಆದರ್ಶ್ ಅವರು ಟ್ವಿಟರ್‌ನಲ್ಲಿ ಈ ಕುರಿತು ಖಚಿತ ಪಡಿಸಿದ್ದಾರೆ.
"ದಿನವನ್ನು ಪ್ರಾರಂಭಿಸಲು ಅದ್ಭುತ ಮಾರ್ಗ.. ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು, 2022ರ ಅತ್ಯಂತ ಪ್ರಸಿದ್ಧ ನೃತ್ಯ, - ಆಸ್ಕರ್ 2023ರ 'ಮೂಲ ಹಾಡು' ವಿಭಾಗದಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ಚೆಲ್ಲೋ ಶೋ: ಇನ್ನೂ ಗುಜರಾತಿ ಚಿತ್ರ 'ಚೆಲ್ಲೋ ಶೋ' ಅನ್ನು 'ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ' ವಿಭಾಗದಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ಸಹ ಆದರ್ಶ್ ಘೋಷಿಸಿದರು. "ಒಂದು ಸ್ಮರಣೀಯ ಕ್ಷಣ, ನಿಜಕ್ಕೂ 'ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್' ವಿಭಾಗದಲ್ಲಿ ಚೆಲ್ಲೋ ಶೋ ಅನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಅಧಿಕೃತ ಪೋಸ್ಟರ್" ಎಂದು ಅವರು ಬರೆದಿದ್ದಾರೆ.
ಆರ್‌ಆರ್‌ಆರ್: ಆರ್‌ಆರ್‌ಆರ್ ಚಲನಚಿತ್ರ ನಿರ್ಮಾಪಕರು ಚಲನಚಿತ್ರವನ್ನು ಆಸ್ಕರ್‌ಗಾಗಿ ಅಕಾಡೆಮಿಗೆ ಮುಖ್ಯ ವಿಭಾಗಗಳಲ್ಲಿ ಅರ್ಜಿ ಸಲ್ಲಿಸಿದ್ದರು. ಅವರು ಅತ್ಯುತ್ತಮ ಚಿತ್ರ (ಡಿವಿವಿ ದಾನಯ್ಯ), ಅತ್ಯುತ್ತಮ ನಿರ್ದೇಶಕ (ಎಸ್‌ಎಸ್ ರಾಜಮೌಳಿ), ಅತ್ಯುತ್ತಮ ನಟ (ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್), ಅತ್ಯುತ್ತಮ ಪೋಷಕ ನಟ (ಅಜಯ್ ದೇವಗನ್), ಅತ್ಯುತ್ತಮ ಪೋಷಕ ನಟಿ (ಆಲಿಯಾ ಭಟ್) ಹೆಸರನ್ನು ಪರಿಗಣನೆಗೆ ಕೇಳಿದ್ದರು.
ಇದನ್ನೂ ಓದಿ:ಸಿನಿ ಪ್ರಿಯರಿಗೆ ಗುಡ್ನ್ಯೂಸ್.. ಆಸ್ಕರ್ ರೇಸ್ಗೆ ಕಾಂತಾರ ಎಂಟ್ರಿ