ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಭಾರತದಲ್ಲಿ ಮಾತ್ರವಲ್ಲದೇ ಹಾಲಿವುಡ್ನಲ್ಲೂ ಬ್ಲಾಕ್ಬಸ್ಟರ್ ಎನಿಸಿಕೊಂಡಿತ್ತು. ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅಭಿನಯಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದರು. ಸಿನಿಮಾ 1,200 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಚಿತ್ರದ ನಿರ್ದೇಶನಕ್ಕೆ ಇದೀಗ ಹಾಲಿವುಡ್ನ ಪ್ರತಿಷ್ಠಿತ 'ದಿ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್' ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಪಡೆದ ರಾಜಮೌಳಿ ಅವರಿಗೆ ಸಿನಿಮಾ ಹೀರೋಗಳಾದ ರಾಮ್ ಚರಣ್ ಮತ್ತು ತಾರಕ್ ಶುಭಾಶಯ ತಿಳಿಸಿದ್ದಾರೆ. ಜೂನಿಯರ್ ಎನ್ಟಿಆರ್ ಟ್ವಿಟ್ ಮಾಡಿ, 'ಅಭಿನಂದನೆಗಳು ಜಕ್ಕಣ್ಣ(ರಾಜಮೌಳಿ). ವಿಶ್ವಾದ್ಯಂತ ನಿಮ್ಮ ವೈಭವದ ಪ್ರಯಾಣ ಪ್ರಾರಂಭವಾಗಿದೆ. ನಿಮ್ಮ ಬಗ್ಗೆ ನನಗೆ ತಿಳಿದಿರುವುದನ್ನು ಜಗತ್ತು ತಿಳಿದುಕೊಳ್ಳುವ ಸಮಯ' ಎಂದಿದ್ದಾರೆ. ಇದಕ್ಕೆ 'ತಾರಕ್ ಒಂದು ಸಣ್ಣ ತಿದ್ದುಪಡಿ. ನನ್ನ ಪಯಣ ಅಲ್ಲ ನಮ್ಮ ಪಯಣ' ಎಂದು ರಾಜಮೌಳಿ ಪ್ರತಿಕ್ರಿಯಿಸಿದ್ದಾರೆ.