ಕರ್ನಾಟಕ

karnataka

ETV Bharat / entertainment

1 ಸಾವಿರ ಕೋಟಿ ಕ್ಲಬ್​ಗೆ ಸೇರಿದ ಆರ್​ಆರ್​ಆರ್​.. ಶತಕೋಟಿ ಸಾಧನೆ ಮಾಡಿದ ರಾಜಮೌಳಿಯ ಮತ್ತೊಂದು ಸಿನಿಮಾ - ಆರ್​ಆರ್​ಆರ್ ಸಿನಿಮಾ ಶತಕೋಟಿ ಸಾಧನೆ

ಈ ಬಗ್ಗೆ ಡಿವಿವಿ ಎಂಟರ್​ಟೈನ್​ಮೆಂಟ್​ ಪ್ರೊಡಕ್ಷನ್​ ಹೌಸ್​ ತನ್ನ ಟ್ವಿಟರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಭಾರತದ ಮತ್ತೊಂದು ಸಿನಿಮಾ 1 ಸಾವಿರ ಕೋಟಿ ಕ್ಲಬ್​ ಸೇರಿಕೊಂಡಿದೆ. ನಮ್ಮ ಕೆಲಸಕ್ಕೆ ಪ್ರತಿಯಾಗಿ ನೀವು ಈ ಪ್ರಮಾಣದ ಪ್ರೀತಿ ನೀಡಿದ್ದಕ್ಕೆ ಧನ್ಯವಾದಗಳು ಎಂದಿದೆ..

RRR
ಆರ್​ಆರ್​ಆರ್

By

Published : Apr 10, 2022, 7:30 PM IST

ಹೈದರಾಬಾದ್ ​:ನಿರ್ದೇಶಕ ಎಸ್​ ಎಸ್ ರಾಜಮೌಳಿ ಅವರ ಆರ್​ಆರ್​ಆರ್​ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ. ವಿಶ್ವಾದ್ಯಂತ ಬಾಕ್ಸ್​ ಆಫೀಸ್​ನಲ್ಲಿ 1 ಸಾವಿರ ಕೋಟಿ ರೂಪಾಯಿ ಗಳಿಸಿದೆ. ತೆಲುಗು ಸ್ಟಾರ್ ನಟರಾದ ರಾಮ್​ಚರಣ್​, ಜೂನಿಯರ್​ ಎನ್​ಟಿಆರ್​ ಅಭಿನಯದ ಆರ್​ಆರ್​ಆರ್​ ಸಿನಿಮಾ ಮಾರ್ಚ್​ 25ರಂದು ತೆಲುಗು, ಕನ್ನಡ, ಮಲೆಯಾಳಂ, ಹಿಂದಿ, ತಮಿಳು ಭಾಷೆಗಳಲ್ಲಿ ತೆರೆ ಕಂಡಿತ್ತು.

ಸಿನಿಮಾ ತೆರೆಕಂಡ 16 ದಿನಗಳಲ್ಲಿ 1000 ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿದೆ. ಅಲ್ಲದೇ, ಹಿಂದಿ ಭಾಷೆಯೊಂದರಲ್ಲೇ 200 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಬಗ್ಗೆ ಡಿವಿವಿ ಎಂಟರ್​ಟೈನ್​ಮೆಂಟ್​ ಪ್ರೊಡಕ್ಷನ್​ ಹೌಸ್​ ತನ್ನ ಟ್ವಿಟರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಭಾರತದ ಮತ್ತೊಂದು ಸಿನಿಮಾ 1 ಸಾವಿರ ಕೋಟಿ ಕ್ಲಬ್​ ಸೇರಿಕೊಂಡಿದೆ. ನಮ್ಮ ಕೆಲಸಕ್ಕೆ ಪ್ರತಿಯಾಗಿ ನೀವು ಈ ಪ್ರಮಾಣದ ಪ್ರೀತಿ ನೀಡಿದ್ದಕ್ಕೆ ಧನ್ಯವಾದಗಳು ಎಂದಿದೆ.

ಓದಿ:ಮಾರ್ಟಿನ್ ರಿಲೀಸ್ ಡೇಟ್ ಅನೌನ್ಸ್ : ಸದ್ದಿಲ್ಲದೇ ಸರ್​ಪ್ರೈಸ್​ ಕೊಟ್ಟ ಧ್ರುವ ಸರ್ಜಾ

ABOUT THE AUTHOR

...view details