ಬಾಲಿವುಡ್ ಸೂಪರ್ ಸ್ಟಾರ್ ನಟ ರಣವೀರ್ ಸಿಂಗ್ ಮತ್ತು ನಟಿ ಆಲಿಯಾ ಭಟ್ ಅಭಿನಯದ ಮುಂಬರುವ ಚಿತ್ರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಈ ವರ್ಷದ ಬಹುನಿರೀಕ್ಷಿತ ಹಿಂದಿ ಚಿತ್ರಗಳಲ್ಲಿ ಒಂದು. ಕರಣ್ ಜೋಹರ್ ಏಳು ವರ್ಷಗಳ ನಂತರ ನಿರ್ದೇಶಕರಾಗಿ ಈ ಚಿತ್ರದ ಮೂಲಕ ಮತ್ತೆ ಇಂಡಸ್ಟ್ರಿಗೆ ಮರಳಿದ್ದಾರೆ. ಇದೀಗ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಟೀಸರ್ ಬಿಡುಗಡೆಗೊಂಡಿದೆ.
1 ನಿಮಿಷ, 16 ಸೆಕೆಂಡುಗಳ ಟೀಸರ್ ಕರಣ್ ಜೋಹರ್ ಅವರ ಸಾಮರ್ಥ್ಯವನ್ನು ಪರಿಚಯಿಸಿದೆ. ಪ್ರೇಕ್ಷಕರಿಗೆ ಆಕರ್ಷಕವಾದ ಸಿನಿಮೀಯ ಅನುಭವ ನೀಡಿದೆ. 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಟೀಸರ್ ಯಾವುದೇ ಸಂಭಾಷಣೆಯನ್ನು ಹೊಂದಿಲ್ಲ. ಬದಲಾಗಿ ಹಿನ್ನೆಲೆಯಲ್ಲಿ ತುಮ್ ಕ್ಯಾ ಮೈಲ್ ಹಾಡನ್ನು ಪ್ಲೇ ಮಾಡಲಾಗಿದೆ. ಇದು ಆಹ್ಲಾದಕರ ರಸಾನುಭವ ನೀಡುತ್ತಿದೆ. ರಾಕಿ ಮತ್ತು ರಾಣಿ ಪರಸ್ಪರ ಪ್ರೀತಿಸುತ್ತಿರುವುದನ್ನು ಟೀಸರ್ನಲ್ಲಿ ತೋರಿಸಲಾಗಿದೆ. ಆದರೆ ಚಿತ್ರದ ಕಥಾವಸ್ತುವನ್ನು ಬಹಿರಂಗಪಡಿಸಿಲ್ಲ.
ಟೀಸರ್ ಕೆಳಗಡೆ, 'ವರ್ಷದ ಅತಿದೊಡ್ಡ ಮನರಂಜನೆಯನ್ನು ಅನುಭವಿಸಲು ಕರಣ್ ಜೋಹರ್ ನಿಮ್ಮನ್ನು ಆಹ್ವಾನಿಸಿದ್ದಾರೆ' ಎಂದು ಬರೆದಿದ್ದಾರೆ. ಹೀಗಾಗಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ವೀಕ್ಷಿಸಲು ಯೋಗ್ಯವಾದ ಚಲನಚಿತ್ರವಾಗಿದೆ ಎಂದು ತೋರುತ್ತಿದೆ. ರಣವೀರ್ ಸಿಂಗ್ ವಿಶೇಷವಾಗಿ ಟೀಸರ್ನಲ್ಲಿ ಗಮನ ಸೆಳೆದಿದ್ದಾರೆ. ಆಲಿಯಾ ತನ್ನ ನೋಟ, ಡ್ಯಾನ್ಸ್ ಮತ್ತು ಸೀರೆಯಿಂದ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.