'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' 2023ರ ಬಹುನಿರೀಕ್ಷಿತ ಸಿನಿಮಾ. ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಚಿತ್ರ ಇದೇ ಶುಕ್ರವಾರ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿತ್ರತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ.
ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ರೊಮ್ಯಾಂಟಿಕ್ ಸಿನಿಮಾ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'ಯ ಪ್ರೀಮಿಯರ್ ಶೋ ಮುಂಬೈನಲ್ಲಿ ಮಂಗಳವಾರ ಸಂಜೆ ನಡೆಯಿತು. ಸ್ಪೆಷಲ್ ಈವೆಂಟ್ಗೆ ಬಾಲಿವುಡ್ ಸ್ಟಾರ್ಸ್ ಸಾಕ್ಷಿಯಾಗಿದ್ದರು.
ಪ್ರೆಗ್ನೆನ್ಸಿ, ಡೆಲಿವರಿ, ಮಗುವಿನ ಆರೈಕೆ ಎಂದು ಸಿನಿಮಾಗಳಿಂದ ಸಣ್ಣ ಬ್ರೇಕ್ ಪಡೆದಿದ್ದ ಆಲಿಯಾ ಭಟ್ ಈ ಚಿತ್ರದ ಮೂಲಕ ಮತ್ತೆ ಮಿಂಚಲು ರೆಡಿಯಾಗಿದ್ದಾರೆ. ಪತ್ನಿ ಆಲಿಯಾ ಅವರ ಮುಂಬರುವ ಸಿನಿಮಾಗೆ ಸಪೋರ್ಟ್ ಕೊಡುವ ಉದ್ದೇಶದೊಂದಿಗೆ ಪತಿ, ಸ್ಟಾರ್ ನಟ ರಣ್ಬೀರ್ ಕಪೂರ್ ಈವೆಂಟ್ಗೆ ಆಗಮಿಸಿದ್ದರು. ಸದಾ ಮಾದರಿ ದಂಪತಿಯಂತೆ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಗುರುತಿಸಿಕೊಳ್ಳುತ್ತಾರೆ. ಆದ್ರೆ ಪತಿ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾಗೆ ದೀಪಿಕಾ ಪಡುಕೋಣೆ ಆಗಮಿಸಿಲ್ಲ. ಹೀಗಾಗಿ ಹಲವರು ಸೋಷಿಯಲ್ ಮೀಡಿಯಾದಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ಆಲಿಯಾ ಮತ್ತು ರಣ್ಬೀರ್ ದಂಪತಿ 'ಟೀಮ್ ರಾಕಿ ಔರ್ ರಾಣಿ' ಎಂದು ಬರೆಯಲಾದ ಕಪ್ಪು ಟಿ-ಶರ್ಟ್ ಧರಿಸಿ ಕಾರ್ಯಕ್ರಮಕ್ಕೆ ಒಟ್ಟಿಗೆ ಆಗಮಿಸಿದ್ದಾರೆ. ಆಲಿಯಾ ಬ್ಲ್ಯಾಕ್ ಟಿ-ಶರ್ಟ್, ಫೇಡೆಡ್ ಜೀನ್ಸ್ ಮತ್ತು ಬ್ಲ್ಯಾಕ್ ಶೂಸ್ ಧರಿಸಿದ್ದರೆ, ರಣ್ಬೀರ್ ಕಪೂರ್ ಬ್ಲ್ಯಾಕ್ ಟಿ-ಶರ್ಟ್, ಪ್ಯಾಂಟ್ ಮತ್ತು ವೈಟ್ ಶೂಸ್ ಆರಿಸಿಕೊಂಡಿದ್ದರು. ಆಲಿಯಾಗೆ ಜೋಡಿಯಾಗಿ ನಟಿಸಿರುವ ರಣ್ವೀರ್ ಸಿಂಗ್ ಮಾತ್ರ ಪ್ರೀಮಿಯರ್ನಲ್ಲಿ ಎಂದಿನಂತೆ ತಮ್ಮ ಢಿಪ್ರೆಂಟ್ ಅವತಾರದಲ್ಲಿ ಕಾಣಿಸಿಕೊಂಡರು. ವೈಟ್ ಟಿ-ಶರ್ಟ್, ಬಹುಬಣ್ಣದ ಪ್ಯಾಂಟ್, ಎಲ್ಲೋ ಶೂ ಧರಿಸಿದ್ದರು.