'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' 2023ರ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಬಾಲಿವುಡ್ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ಬಾಲಿವುಡ್ ಪ್ರತಿಭೆಗಳಾದ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಬಣ್ಣ ಹಚ್ಚಿದ್ದಾರೆ. ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಕ್ಷಣ ಕ್ಷಣಕ್ಕೂ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚುತ್ತಿದೆ.
ಮೊದಲ ದಿನ ಕಲೆಕ್ಷನ್ ಎಷ್ಟಾಗಬಹುದು?: 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ನಾಳೆ (ಜುಲೈ 28) ಜಗತ್ತಿನಾದ್ಯಂತ ಚಿತ್ರಮಂದಿರಗಲ್ಲಿ ಅದ್ಧೂರಿಯಾಗಿ ತೆರೆ ಕಾಣಲಿದೆ. ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಮೊದಲ ದಿನ (ಶುಕ್ರವಾರ) 8 ರಿಂದ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ ಎಂದು ಸಿನಿ ವ್ಯವಹಾರ ತಜ್ಞರು ತಿಳಿಸಿದ್ದಾರೆ. ಆಲಿಯಾ ಭಟ್ ಮತ್ತು ರಣ್ವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರೆ, ಧರ್ಮೇಂದ್ರ, ಶಬಾನಾ ಅಜ್ಮಿ ಮತ್ತು ಜಯಾ ಬಚ್ಚನ್ ಪ್ರಮುಖ ಅಭಿನಯಿಸಿದ್ದಾರೆ. 6 ವರ್ಷಗಳ ಬ್ರೇಕ್ ಬಳಿಕ ಕರಣ್ ಜೋಹರ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಬಹುತಾರಾಗಣದ ಬಿಗ್ ಬಜೆಟ್ ಸಿನಿಮಾ ಬಗ್ಗೆ ಅಭಿಮಾನಿಗಳು ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ.
ನಿರ್ಮಾಪಕ ಮತ್ತು ಚಲನಚಿತ್ರ ವ್ಯವಹಾರ ತಜ್ಞ ಗಿರೀಶ್ ಜೋಹರ್ ಪ್ರಕಾರ, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಭರ್ಜರಿ ಓಪನಿಂಗ್ ಮಾಡುವ ನಿರೀಕ್ಷೆಯಿದೆ. ಶುಕ್ರವಾರದ ಚಿತ್ರ 8 ರಿಂದ 10 ಕೋಟಿ ರೂ.ಗಳನ್ನು ಸಂಪಾದಿಸಲಿದೆ ಮತ್ತು ವಾರಾಂತ್ಯ ಕಲೆಕ್ಷನ್ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಪ್ರೇಕ್ಷಕರು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾವನ್ನು ಎಂಜಾಯ್ ಮಾಡಿದ್ರೆ, ಸಿನಿಮಾಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿ ಮೊದಲನೇ ದಿನ ಎರಡಂಕಿಯ (ಕೋಟಿಗಳಲ್ಲಿ) ಕಲೆಕ್ಷನ್ ಮಾಡಿದರೆ, ಎರಡನೇ ಮತ್ತು ಮೂರನೇ ದಿನಕ್ಕೆ ಸಹಕಾರಿಯಾಗಲಿದೆ. ವಾರಾಂತ್ಯ ಬಾಕ್ಸ್ ಆಫೀಸ್ ಕಲೆಕ್ಷನ್ ಸಂಖ್ಯೆ ಸುಮಾರು 12 ಕೋಟಿ ರೂ.ನಷ್ಟಾದರೆ, ಸಿನಿಮಾ ಮೊದಲ ವಾರದಲ್ಲೇ ಸುಲಭವಾಗಿ 35 ರಿಂದ 40 ಕೋಟಿ ರೂ.ಗಳವರೆಗೆ ಗಳಿಸಬಹುದು ಗಿರೀಶ್ ಜೋಹರ್ ತಿಳಿಸಿದ್ದಾರೆ. ಅಲ್ಲದೇ, ನಾವು ನಿರೀಕ್ಷಿಸಿದ್ದಕ್ಕೂ ಹೆಚ್ಚು ಸಂಪಾದನೆ ಆದ್ರೆ ಅದು ಅದ್ಭುತ, ಅದೇ ಕಡಿಮೆ ಕಲೆಕ್ಷನ್ ಮಾಡಿದ್ರೆ ಅದು ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಹಿನ್ನೆಡೆ ಕಂಡಿದೆ ಎಂದು ಸೂಚಿಸುತ್ತದೆ ಎಂದು ಕೂಡ ತಿಳಿಸಿದರು.
ಇದನ್ನೂ ಓದಿ:ಡಿಫ್ರೆಂಟ್ ಸ್ಟೈಲ್ನಲ್ಲಿ ರಣ್ವೀರ್ ಆಲಿಯಾ ಮೋಡಿ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಡೀಟೆಲ್ಸ್ ನಿಮಗಾಗಿ
2 ಗಂಟೆ, 48 ನಿಮಿಷ, 33 ಸೆಕೆಂಡುಗಳ ಸಿನಿಮಾವಿದು. ಭಾರತದಲ್ಲಿ ಸುಮಾರು 2,000 ಸ್ಕ್ರೀನ್‌ಗಳಲ್ಲಿ ಮತ್ತು ವಿದೇಶಗಳಲ್ಲಿ 300 ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆ ಕಾಣಲಿದೆ. 178 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಆಗಿದೆ ಎಂದು ಅಂದಾಜಿಸಲಾಗಿದೆ. ಸಿನಿಮಾ ಹಿಟ್ ಎಂದು ಪರಿಗಣಿಸಲು ಕನಿಷ್ಠ 70 ರಿಂದ 90 ಕೋಟಿ ರೂಪಾಯಿಗಳ ನಡುವೆ ಕಲೆಕ್ಷನ್ ಮಾಡಬೇಕಿದೆ. ಬಿಡುಗಡೆಗೂ ಮುನ್ನವೇ, ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳ ಮಾರಾಟದ ಮೂಲಕ ಈ ಸಿನಿಮಾ ಸುಮಾರು 160 ಕೋಟಿ ರೂ. ವ್ಯವಹಾರ ನಡೆಸಿದೆ ಎಂದು ವರದಿಗಳು ಸೂಚಿಸಿವೆ. ಜುಲೈ 24ರಂದು (ಸೋಮವಾರ) ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ ಮುಂಗಡ ಟಿಕೆಟ್ ಬುಕಿಂಗ್ ಪ್ರಾರಂಭವಾಗಿದೆ.
ಇದನ್ನೂ ಓದಿ:Kiara Advani Photos: ಬಾರ್ಬಿ ಲುಕ್ನಲ್ಲಿ ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ