ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಥಿಯೇಟರ್ನಲ್ಲಿ ಧೂಳೆಬ್ಬಿಸುತ್ತಿದೆ. ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮಾಡ್ರನ್ ಫ್ಯಾಮಿಲಿ ಲವ್ ಸ್ಟೋರಿ ಪ್ರೇಕ್ಷಕರನ್ನು ಆಕರ್ಷಿಸಿದೆ. ಜುಲೈ 28 ರಂದು ತೆರೆಗೆ ಬಂದ ಈ ಚಿತ್ರ ವಾರ ಕಳೆದರೂ ಕಲೆಕ್ಷನ್ ವಿಚಾರದಲ್ಲಿ ವೇಗದ ಓಟ ಮುಂದುವರೆಸಿದೆ.
ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಚಿತ್ರವು ಗುರುವಾರ 6.25 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರವು ಭಾರತದಲ್ಲಿ ಬಿಡುಗಡೆಯಾದ ಒಂದು ವಾರದಲ್ಲಿ ಒಟ್ಟು 73.37 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಚೆನ್ನೈ ಮತ್ತು ಬೆಂಗಳೂರಿನಲ್ಲಿ ಹೆಚ್ಚು ಜನರು ಸಿನಿಮಾವನ್ನು ವೀಕ್ಷಿಸಿದ್ದಾರೆ ಎನ್ನಲಾಗಿದೆ.
'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಮೊದಲ ದಿನ 11.1 ಕೋಟಿ ರೂ., ಎರಡನೇ ದಿನ 16.5 ಕೋಟಿ ರೂ., ಮೂರನೇ ದಿನ 19 ಕೋಟಿ ರೂ., ನಾಲ್ಕನೇ ದಿನ 7.50 ಕೋಟಿ ರೂ., ಐದನೇ ದಿನ 7.25 ಕೋಟಿ ರೂ ಮತ್ತು ಆರನೇ ದಿನ 6.90 ಕೋಟಿ ರೂ. ಗಳಿಸಿತ್ತು. ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರ ಈಗಾಗಲೇ 100 ಕೋಟಿ ಕ್ಲಬ್ ಸೇರಿದೆ.
ಥಿಯೇಟರ್ನಲ್ಲಿ ಸದ್ಯ ಯಾವುದೇ ಹಿಂದಿ ಸಿನಿಮಾಗಳು ಬಿಡುಗಡೆಯಾಗಿಲ್ಲ. ಹಾಗಾಗಿ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'ಗೆ ಕಾಂಪಿಟೇಶನ್ ನೀಡಲು ಯಾವುದೇ ಸಿನಿಮಾಗಳಿಲ್ಲ. ಆದರೆ ಹಾಲಿವುಡ್ನ ಓಪನ್ಹೈಮರ್ ಮತ್ತು ಬಾರ್ಬಿ ಈಗಾಗಲೇ ಬಿಡುಗಡೆಯಾಗಿ ಭಾರತದಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಹೀಗಾಗಿ ಕರಣ್ ಜೋಹರ್ ಚಿತ್ರ ಜನರನ್ನು ಹೆಚ್ಚು ಥಿಯೇಟರ್ನೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ.
'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ 178 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧಗೊಂಡಿದೆ. 2300 ಪರದೆಗಳಲ್ಲಿ (2000 ಭಾರತ ಮತ್ತು 300 ವಿದೇಶ) ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮಾತ್ರವಲ್ಲದೇ, ಧರ್ಮೇಂದ್ರ, ಜಯಾ ಬಚ್ಚನ್, ಶಬಾನಾ ಅಜ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಕಥೆ ಸಂಪೂರ್ಣವಾಗಿ ವಿಭಿನ್ನ ಹಿನ್ನೆಲೆ ಮತ್ತು ಸಂಸ್ಕೃತಿಯಿಂದ ಬಂದ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಜೋಡಿ ಸುತ್ತ ಸುತ್ತುತ್ತದೆ. ಈ ಜೋಡಿಯ ಪ್ರೇಮಕಥೆಯೇ ಚಿತ್ರದ ಕೇಂದ್ರಬಿಂದು. ಅವರ ವಿಭಿನ್ನ ಆಚರಣೆಗಳು, ಜೀವನ ಶೈಲಿಯಿಂದಾಗಿ ಉದ್ಭವಿಸುವ ಸವಾಲುಗಳು ಮತ್ತು ಸಂತೋಷಕರ ಕ್ಷಣಗಳನ್ನು ಈ ಸಿನಿಮಾ ಹೇಳುತ್ತದೆ.
ಇದನ್ನೂ ಓದಿ:ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ: ಗಂಡನ ಸಿನಿಮಾ ವೀಕ್ಷಿಸಿದ ದೀಪಿಕಾ ಪಡುಕೋಣೆ ಪ್ರತಿಕ್ರಿಯೆ ಹೇಗಿತ್ತು?