ಕರ್ನಾಟಕ

karnataka

ETV Bharat / entertainment

ಬಾಕ್ಸ್​ ಆಫೀಸ್​.. ಐದನೇ ದಿನಕ್ಕೆ 100 ಕೋಟಿಯ ಕ್ಲಬ್​​​ ಸೇರಿದ ರಣವೀರ್​ - ಆಲಿಯಾ ಚಿತ್ರ - ಕೊಂಚ ನಿರಾಸೆ ಕಾಡಿದೆ ಎಂಬ ಅಭಿಪ್ರಾಯ

Rocky Aur Rani Kii Prem Kahaani: ಈ ಚಿತ್ರದ ಬಗ್ಗೆ ಅನೇಕ ನಿರೀಕ್ಷೆಗಳನ್ನು ಹೊಂದಿದ್ದ ಅಭಿಮಾನಿಗಳಿಗೆ ಕೊಂಚ ನಿರಾಸೆ ಕಾಡಿದೆ ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗಿದೆ.

Rocky Aur Rani Kii Prem Kahaani box office collection: Alia Bhatt and Ranveer Singh's film witnesses a slight growth on day 5
Rocky Aur Rani Kii Prem Kahaani box office collection: Alia Bhatt and Ranveer Singh's film witnesses a slight growth on day 5

By

Published : Aug 2, 2023, 11:13 AM IST

ನಟ ರಣವೀರ್​ ಸಿಂಗ್​ ಮತ್ತು ನಟಿ ಆಲಿಯಾ ಭಟ್​ ಅಭಿಯನದ 'ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ' ಸಿನಿಮಾ ಬಿಡುಗಡೆಯಾದಾಗಿನಿಂದ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳನ್ನು ಸೆಳೆದಿರುವ ಈ ಮಾಡ್ರನ್​ ಫ್ಯಾಮಿಲಿ ಲವ್​ ಸ್ಟೋರಿ ಸಿನಿಮಾ ನಾಲ್ಕು ದಿನದಲ್ಲಿ 50 ಕೋಟಿ ಬಾಚಿಕೊಂಡಿದ್ದು. ಸದ್ಯ ಸ್ಥಳೀಯವಾಗಿ ಬಾಕ್ಸ್​ ಆಫೀಸ್​ನಲ್ಲಿ ಐದನೇ ದಿನಕ್ಕೆ ನಿಧಾನವಾಗಿ ಅಭಿಮಾನಿಗಳನ್ನು ಸೆಳೆಯುತ್ತ, ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರ ಮಂಗಳವಾರ 100 ಕೋಟಿ ಗಳಿಸಿತು.

ಐದನೇ ದಿನಕ್ಕೆ ಚೇತರಿಕೆ: ಧರ್ಮ ಪ್ರೊಡಕ್ಷನ್​ನಲ್ಲಿ ಕರಣ್​ ಜೋಹರ್​ ನಿರ್ದೇಶನದ ಈ ಚಿತ್ರ ಸದ್ಯ ಭಾರತದಲ್ಲಿ 7.25 ಕೋಟಿ ಸಂಪಾದನೆ ಮಾಡಿದೆ. ಚಿತ್ರ ಬಿಡುಗಡೆಯಾಗಿ ನಾಲ್ಕನೇ ದಿನದ ಅಂತ್ಯಕ್ಕೆ ಚಿತ್ರ ಉತ್ತಮ ಪ್ರದರ್ಶನ ಕಾಣಲು ಮುಂದಾಗಿದ್ದು, ನಾಲ್ಕನೇ ದಿನದ ಅಂತ್ಯಕ್ಕೆ ಚಿತ್ರ 7.02 ಕೋಟಿ ಗಳಿಕೆ ಕಂಡಿದೆ. ಐದನೇ ದಿನಕ್ಕೆ ದೇಶಿಯ ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮ ಬುಕ್ಕಿಂಗ್​ ಕಾಣುತ್ತಿದೆ. ಐದನೇ ದಿನಕ್ಕೆ ಹಿಂದಿ ಮಾರುಕಟ್ಟೆಯಲ್ಲಿ ಶೇ 18.75ರಷ್ಟು ಥಿಯೇಟರ್​ಗಳಲ್ಲಿ ಸೀಟ್​ ಬುಕ್ಕಿಂಗ್​ ಆಗಿದೆ.

ಜುಲೈ 28ರಂದು ಬಿಡುಗಡೆಯಾದ ಈ ಚಿತ್ರ ಮೊದಲೆರಡು ದಿನ ಉತ್ತಮ ಗಳಿಕೆ ಕಂಡು 11.01 ಕೋಟಿ ಸಂಪಾದಿಸಿತು. ಮೊದಲ ವಾರದಲ್ಲಿ ಭಾರತದಲ್ಲಿ 45.81 ಕೋಟಿ ಗಳಿಸಿದೆ. ಚಿತ್ರವನ್ನು ಅದ್ಧೂರಿ ಬಜೆಟ್​ನಲ್ಲಿ ಮಾಡಲಾಗಿದ್ದು, 178 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಸಿನಿ ಮಂದಿ ಲೆಕ್ಕಾಚಾರ ನಡೆಸಿದ್ದಾರೆ. ಆದರೆ, ರಾಕಿ ಔರ್​ ರಾಣಿ ಕೀ ಪ್ರೇಮ್​ ಕಹಾನಿ ಚಿತ್ರ ಅಭಿಮಾನಿಗಳನ್ನು ಸೆಳೆದರೂ, ದಾಖಲೆ ಮಟ್ಟದಲ್ಲಿ ಲಾಭ ತರುವಲ್ಲಿ ಸಾಧ್ಯವಾಗಿಲ್ಲ.

ಬಹು ತಾರಾಗಣದ ಚಿತ್ರ: ನಿರ್ದೇಶಕ ಕರಣ್​ ಜೋಹರ್​ ಅವರ ಎಂದಿನಂತಹ ಸಿಗ್ನೇಚರ್​ ಸ್ಟೈಲ್​ನಲ್ಲಿ ಮೂಡಿಬಂದಿರುವಂತಹ ರೋಮ್ಯಾಂಟಿಕ್​ ಡ್ರಾಮಾ ಜೊತೆಗೆ ಕೌಟುಂಬಿಕ ಮನೋರಂಜನೆ ನೀಡುವ ಚಿತ್ರ ಇದಾಗಿದೆ. ನಟಿ ಆಲಿಯಾ ಭಟ್​​ ತಾಯ್ತನದ ಬಳಿಕ ಬಿಡುಗಡೆಯಾದ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ಅವರು ತಮ್ಮ ಸೂಪರ್ ಹಿಟ್​ ಪೇರ್​ ಎಂದೇ ಗುರುತಿಸಿಕೊಂಡಿರುವ ನಟ ರಣವೀರ್​ ಸಿಂಗ್​ ಜೊತೆ ರೋಮ್ಯಾನ್ಸ್​ ಮಾಡಿದ್ದಾರೆ. ಇವರಿಬ್ಬರ ಹೊರತಾಗಿ ಚಿತ್ರದಲ್ಲಿ ಅದ್ಧೂರಿ ತಾರಾಗಣ ಇದೆ. ನಟಿ ಜಯಾ ಬಚ್ಚನ್​, ಶಾಬಾನಾ ಅಜ್ಮಿ, ಧರ್ಮೇಂದ್ರ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

ಏಳು ವರ್ಷಗಳ ಕಾಲ ಸುದೀರ್ಘ ಅಂತರದ ಬಳಿಕ ನಿರ್ದೇಶಕ ಕರಣ್​ ಜೋಹರ್​ ಈ ಚಿತ್ರ ನಿರ್ದೇಶಿಸಿದ್ದಾರೆ. ಈ ಚಿತ್ರದ ಬಗ್ಗೆ ಅನೇಕ ನಿರೀಕ್ಷೆಗಳನ್ನು ಹೊಂದಿದ್ದ ಅಭಿಮಾನಿಗಳಿಗೆ ಕೊಂಚ ನಿರಾಸೆ ಕಾಡಿದೆ ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗಿದೆ. ಅದ್ದೂರಿ ಪ್ರಚಾರ, ಮೇಕಿಂಗ್​ ಮತ್ತು ಭಾರೀ ಬಜೆಟ್​ನ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಹೇಳಿಕೊಳ್ಳುವಂತೆ ಸದ್ದು ಮಾಡದೇ ಹೋದರು ಉತ್ತಮ ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ: RARKPK: ನಾಲ್ಕೇ ದಿನದಲ್ಲಿ ₹50 ಕೋಟಿ ಬಾಚಿದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'

ABOUT THE AUTHOR

...view details