ಐಷಾರಾಮಿ ರೇಂಜ್ ರೋವರ್ ಕಾರು ಖರೀದಿಸಿದ ರಾಕಿಂಗ್ ಸ್ಟಾರ್ ಯಶ್ ನಟ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 1 ಮತ್ತು ಕೆಜಿಎಫ್ 2 ಬಳಿಕ ಸ್ಯಾಂಡಲ್ವುಡ್ಗೆ ಮಾತ್ರ ಸೀಮಿತ ಆಗಿಲ್ಲ. ಇಡೀ ಭಾರತೀಯ ಚಿತ್ರರಂಗದಲ್ಲೇ ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದಾರೆ. ಇವರ ಅಭಿನಯದ ಈ ಸಿನಿಮಾಗಳು ವರ್ಷ ಪೂರೈಸಿದ್ರೂ 'ರಾಕಿ ಭಾಯ್' ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಸದ್ಯ ಅನೇಕ ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ರಾಯಭಾರಿಯಾಗಿರುವ ಯಶ್ ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೆ ತಕ್ಕಂತೆ ಅವರ ಲೈಫ್ಸ್ಟೈಲ್ ಕೂಡ ಬದಲಾಗಿದೆ.
ಇದೀಗ ಯಶ್ ಮನೆಗೆ ಕೋಟ್ಯಂತರ ರೂ ಬೆಲೆಬಾಳುವ ಐಷಾರಾಮಿ ಕಾರಿನ ಆಗಮನವಾಗಿದೆ. ಅತ್ಯಾಧುನಿಕ ಫೀಚರ್ ಹೊಂದಿರುವ ಬ್ಲ್ಯಾಕ್ ಬ್ಯೂಟಿ ರೇಂಜ್ ರೋವರ್ ಕಾರನ್ನು ರಾಕಿಂಗ್ ಸ್ಟಾರ್ ಖರೀದಿಸಿದ್ದಾರೆ. ಕಪ್ಪು ಬಣ್ಣದ ಕಾರ್‌ನಲ್ಲಿ ಯಶ್, ಪತ್ನಿ ರಾಧಿಕಾ ಪಂಡಿತ್ ಜೊತೆ ಗಾಲ್ಫ್ ರಸ್ತೆಯಲ್ಲಿರುವ ತಮ್ಮ ಅಪಾರ್ಟ್ಮೆಂಟ್ಗೆ ಓಡಿಸಿಕೊಂಡು ಬಂದಿದ್ದಾರೆ. ಯಶ್ ಮಕ್ಕಳಾದ ಯಥರ್ವ್ ಮತ್ತು ಐರಾ ಕೂಡ ಜೊತೆಗಿದ್ದರು. ನಾಲ್ವರು ಕೂಡ ತಮ್ಮ ಹೊಸ ಕಾರ್‌ನ ಮುಂಭಾಗದಲ್ಲಿ ನಿಂತು ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ಅಂದಹಾಗೆ, ರಾಕಿ ಭಾಯ್ ಮನೆಗೆ ಬಂದಿರುವ ಈ ಕಪ್ಪು ಸುಂದರಿಯ ಬೆಲೆ ಬರೋಬ್ಬರಿ 5 ಕೋಟಿ ರೂಪಾಯಿ ಅಂತ ಯಶ್ ಆಪ್ತರು ಮಾಹಿತಿ ನೀಡಿದ್ದಾರೆ. ಅನೇಕ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಈ ಕಾರು ಸೇಫ್ಟಿಗೂ ಅಷ್ಟೇ ಮಹತ್ವ ಹೊಂದಿದೆಯಂತೆ. ಹೊಸ ಕಾರು ಖರೀದಿಸಿರುವ ಯಶ್ಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ:Adipurush ಬಿಡುಗಡೆಗೆ ಕ್ಷಣಗಣನೆ: ಮುಂಗಡ ಬುಕ್ಕಿಂಗ್ನಲ್ಲಿ ಕೆಜಿಎಫ್, ಪಠಾಣ್ ದಾಖಲೆ ಮುರಿಯಲಿದೆಯಾ ಆದಿಪುರುಷ್?
ಯಶ್ ಸಿನಿಮಾ ವಿಚಾರ: ಇನ್ನು ಯಶ್ ತಮ್ಮ 19ನೇಯ ಸಿನಿಮಾವನ್ನು ಯಾವಾಗ ಅನೌನ್ಸ್ ಮಾಡ್ತಾರೆ ಅಂತ ಅಭಿಮಾನಿಗಳು ಕಾಯ್ತಾ ಇದ್ದಾರೆ. ಕೆಜಿಎಫ್ ಚಾಪ್ಟರ್ 2 ಬಳಿಕ ಅವರು ಬಿಗ್ ಬ್ರೇಕ್ ಪಡೆದುಕೊಂಡಿದ್ದಾರೆ. ಸೂಕ್ತ ತಯಾರಿಯೊಂದಿಗೆ ಹೊಸ ಸಿನಿಮಾಗೆ ಅವರು ಚಾಲನೆ ನೀಡಲಿದ್ದಾರೆ. ಹೀಗಾಗಿಯೇ ಹೊಸ ಚಿತ್ರದ ಅನೌನ್ಸ್ ಮಾಡಲು ಯಶ್ ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಗಾಂಧಿನಗರದ ಮಂದಿ ಹೇಳುತ್ತಿದ್ದಾರೆ.
ಈ ಮಧ್ಯೆ ನಟನಿಗೆ ಬಾಲಿವುಡ್ನಿಂದ ಆಫರ್‌ಗಳು ಬಂದಿದ್ದವು. ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಅವರ ಮುಂದಿನ ರಾಮಾಯಣ ಆಧಾರಿತ ಚಿತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ರಾಮ ಸೀತೆ ಪಾತ್ರದಲ್ಲಿ ಮತ್ತು ಯಶ್ ರಾವಣನ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈ ಆಫರ್ ಅನ್ನು ಯಶ್ ರಿಜೆಕ್ಟ್ ಮಾಡಿದ್ದಾರೆ. ಅಭಿಮಾನಿಗಳು ತಮ್ಮನ್ನು ನೆಗೆಟಿವ್ ಪಾತ್ರದಲ್ಲಿ ನೋಡಲು ಇಷ್ಟಪಡುವುದಿಲ್ಲ ಎಂಬ ಕಾರಣಕ್ಕಾಗಿ ನಟ ಈ ಅವಕಾಶವನ್ನು ಕೈ ಬಿಟ್ಟಿರುವುದಾಗಿ ಹೇಳಲಾಗುತ್ತಿದೆ.
ಇದನ್ನೂ ಓದಿ:Daredevil Mustafa: 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿದ ರಾಜ್ಯ ಸರ್ಕಾರ