ಕರ್ನಾಟಕ

karnataka

ETV Bharat / entertainment

'ಎಲ್ಲಾ ಗೇಲಿಗೂ ಹೊಡಿ ಗೋಲಿ, ನೀನು ನೀನಾಗಿರು': ಪೆಪ್ಸಿ ಜಾಹೀರಾತಿನಲ್ಲಿ ರಾಕಿಂಗ್​ ಸ್ಟಾರ್​ ಯಶ್ - pepsi advertisement

ಪೆಪ್ಸಿ ಜಾಹೀರಾತು ಮೂಲಕ ಗಮನ ಸೆಳೆಯುತ್ತಿದ್ದಾರೆ ಕನ್ನಡ ಚಿತ್ರರಂಗದ ರಾಕಿಂಗ್​​ ಸ್ಟಾರ್ ಯಶ್.

Yash pepsi advertisement
ಯಶ್ ಪೆಪ್ಸಿ ಜಾಹೀರಾತು

By

Published : Mar 24, 2023, 3:07 PM IST

Updated : Mar 24, 2023, 3:14 PM IST

ಕನ್ನಡ ಚಿತ್ರರಂಗದ ಸೂಪರ್​ ಹಿಟ್ ಸಿನಿಮಾ ಕೆಜಿಎಫ್ 1 ಮತ್ತು ಕೆಜಿಎಫ್ ಚಾಪ್ಟರ್ 2 ಬಳಿಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ತಮ್ಮ ಅಭಿನಯದಿಂದ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ. ಎಲ್ಲರಿಗೂ ರಾಕಿಂಗ್​ ಸ್ಟಾರ್​​ ಈಗ ಚಿರಪರಿಚಿತ. ಕೆಜಿಎಫ್ 2 ತೆರೆಕಂಡು ಒಂದು ವರ್ಷ ಸಮೀಪಿಸಿದರೂ ಯಶ್ 19ನೇ ಸಿನಿಮಾ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅವರ ಮುಂದಿನ ಚಿತ್ರದ ಸುಳಿವೂ ಇಲ್ಲ. ಆದರೂ ಯಶ್​ ಅವರ ಬೇಡಿಕೆ, ಆ ಕ್ರೇಜ್​ ಕಿಂಚಿತ್ತೂ ಕಡಿಮೆಯಾಗಿಲ್ಲ. ಸಿನಿಮಾ ಇಲ್ಲದೇ ಇದ್ರೂ ಪೆಪ್ಸಿ ಜಾಹೀರಾತು ಮೂಲಕ ಗಮನ ಸೆಳೆಯುತ್ತಿದ್ದಾರೆ ರಾಕಿಂಗ್​​ ಸ್ಟಾರ್ ಯಶ್.

ಜನ ಪ್ರತೀ ಹಂತದಲ್ಲೂ ಗೇಲಿ ಮಾಡ್ತಾರೆ, ಒಬ್ಬೊಬ್ರೂ ಒಂದೊಂದನ್ನು ಹೇಳಿ ಮಾತಿನ ದಾಳಿ ಮಾಡ್ತಾರೆ, ಇದನ್ನು ಮಾಡು, ಅದ್ ಬೇಡ, ಇದಕ್ಕೆ ಲೈಕ್​, ಅದಿಕ್​ ಸ್ವೈಪ್, ಕೇಳ್ತೀವಿ ಅಂತಾ ಗೊತ್ತಾದ್ರೆ ಮಾತ್​ ಮಾತಿಗೂ ಜನ ಜಡ್ಜ್​ ಮಾಡ್ತಾರೆ, ಕಂಟ್ರೋಲ್ ​ಮಾಡ್ತಾರೆ, ಮಾತ್​ಗಳಲ್ಲೇ ಮುಳುಗ್ಸ್​​​ ಬಿಡ್ತಾರೆ, ಎಲ್ಲಾ ಗೇಲಿಗೂ ಹೊಡಿ ಗೋಲಿ, ನೀನು ನೀನಾಗಿರು, ಜಸ್ಟ್ ರೈಸ್​ ಎಂದು ಯಶ್ ಹೇಳಿರುವ ಪೆಪ್ಸಿ ಜಾಹೀರಾತು ಅಭಿಮಾನಿಗಳಲ್ಲಿ ಸಖತ್​ ಕ್ರೇಜ್​ ಹುಟ್ಟಿಸಿದೆ.

ಯಶ್ ನಟನೆಯ 19ನೇ ಸಿನಿಮಾ ಬಗ್ಗೆ ದೊಡ್ಡ ಮಟ್ಟದಲ್ಲೇ ನಿರೀಕ್ಷೆ ಇದೆ. ಕೇವಲ ಅಭಿಮಾನಿಗಳಲ್ಲಿ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗ ಯಶ್​ ಮುಂದಿನ ಸಿನಿಮಾ ಅನೌನ್ಸ್​​ಮೆಂಟ್​ಗಾಗಿ ಕಾಯುತ್ತಿದೆ. ಆದ್ರೆ ಯಶ್​ ಮಾತ್ರ ಯಾವ ಗುಟ್ಟೂ ಬಿಟ್ಟುಕೊಟ್ಟಿಲ್ಲ. ಸಂದರ್ಶನ, ಫ್ಯಾಮಿಲ್ ಟೈಮ್, ಕುಟುಂಬಸ್ಥರೊಂದಿಗಿನ ಫೋಟೋ ಮೂಲಕ ಸದ್ದಾಗುತ್ತಿದ್ದಾರೆ. ಜೊತೆಗೆ ಕೋಟಿ ಕೋಟಿ ಸಂಭಾವನೆ ಸಿಗುವ ಇಂಟರ್​ನ್ಯಾಷನಲ್ ಜಾಹೀರಾತಿ​ನಲ್ಲಿ ದರ್ಶನ ನೀಡಿದ್ದು, ಜಾಹೀರಾತು ಬಹಳ ಚೆನ್ನಾಗಿ ಮೂಡಿ ಬಂದಿದೆ ಅಂತಾರೆ ಅಭಿಮಾನಿಗಳು.

ಇದನ್ನೂ ಓದಿ:ಪೆಪ್ಸಿ ಜಾಹೀರಾತಿಗೆ ರಾಕಿಂಗ್​​ ಸ್ಟಾರ್ ಯಶ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಈ ಹಿಂದೆ ಅಡುಗೆ ಎಣ್ಣೆ ಜಾಹೀರಾತಿನಲ್ಲಿ ನಟ ಕಾಣಿಸಿಕೊಂಡಿದ್ದರು. ಪತ್ನಿ, ನಟಿ ರಾಧಿಕಾ ಪಂಡಿತ್ ಜೊತೆ ರೊಮ್ಯಾನ್ಸ್ ಮಾಡುವ ಮೂಲಕ ಈ ಎಣ್ಣೆ ಜಾಹೀರಾತಿನಲ್ಲಿ ಫ್ಯಾಮಿಲಿಮ್ಯಾನ್​ ಆಗಿ ಯಶ್ ಕಾಣಿಸಿಕೊಂಡಿದ್ದರು. ಸದ್ಯ ವಿಶ್ವದ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರೋ ಪೆಪ್ಸಿ ಕೂಲ್ ಡ್ರಿಂಕ್ಸ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಸದ್ದು ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಚಿಕ್ಕ ವಿಡಿಯೋ ಮೂಲಕ ಪೆಪ್ಸಿ ಕೂಲ್ ಡ್ರಿಂಕ್ಸ್ ಜಾಹೀರಾತು ಕೊಟ್ಟಿದ್ದರು. ಇದೀಗ ಮತ್ತೊಂದು ಸೊಗಸಾದ ವಿಡಿಯೋ ಮೂಲಕ ಸಖತ್​ ಸೌಂಡ್​ ಮಾಡ್ತಿದ್ದಾರೆ.

ಇದನ್ನೂ ಓದಿ:ರಾಕಿಂಗ್​ ಸ್ಟಾರ್​ ಯಶ್ 19ನೇ​ ಸಿನಿಮಾ ಬಗ್ಗೆ ಸಿಕ್ಕೇ ಬಿಡ್ತು ಇಂಟ್ರೆಸ್ಟಿಂಗ್​ ಡೀಟೆಲ್ಸ್​​

ಈವರೆಗೆ ಬಾಲಿವುಡ್‌, ಕ್ರಿಕೆಟ್ ತಾರೆಯರು ಮಾತ್ರ ಪೆಪ್ಸಿ ಪಾನೀಯಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗದ ನಟನೊಬ್ಬ ಇಂಟರ್​ನ್ಯಾಷನಲ್ ಲೆವೆಲ್​ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಹೆಮ್ಮೆಯ ವಿಚಾರ.

Last Updated : Mar 24, 2023, 3:14 PM IST

ABOUT THE AUTHOR

...view details