ಮಫ್ತಿ ನಿರ್ದೇಶಕ ನರ್ತನ್ ಅವರು ಗುರುವಾರ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂತಸದ ನಡುವೆ ನರ್ತನ್ ಮತ್ತು ಯಶ್ ಕಾಂಬಿನೇಷನ್ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ ಎಂಬ ಸುದ್ದಿ ಕೂಡ ಹರಡಿದೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು, ಯಾವ ನಿರ್ದೇಶಕ, ನಿರ್ಮಾಪಕರ ಜೊತೆ ಅನ್ನೋದು ಗಾಂಧಿನಗರದಿಂದ ಹಿಡಿದು ಬಾಲಿವುಡ್ ಅಂಗಳದವರೆಗೂ ಚರ್ಚೆಯಾಗುತ್ತಿದೆ. ಆದ್ರೆ ಈವರೆಗೂ ಅಧಿಕೃತವಾಗಿ ಯಾವುದೇ ಸುದ್ದಿ ಬಂದಿಲ್ಲ.
ಈ ಹಿಂದೆ ಯಶ್ ಅವರ 19ನೇ ಸಿನಿಮಾವನ್ನು ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಾಗಿರುವ ಕೆವಿಎನ್ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡೋದು ಪಕ್ಕಾ ಆಗಿತ್ತು. ಇದೀಗ ಕೆವಿಎನ್ ಪ್ರೊಡಕ್ಷನ್ ನಿರ್ದೇಶಕ ನರ್ತನ್ ಜನ್ಮದಿನಕ್ಕೆ ಶುಭ ಕೋರಿದೆ. ಈ ಪೋಸ್ಟ್ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸದ್ದಾಗುತ್ತಿದೆ.
ಮಫ್ತಿ ಸಿನಿಮಾ ಮಾಡಿ ಭರವಸೆ ಮೂಡಿಸಿದ್ದ ನರ್ತನ್ ಈ ಹಿಂದೆ ಯಶ್ ಅವರ 19ನೇ ಸಿನಿಮಾ ನಿರ್ದೇಶನ ಮಾಡ್ತಾರೆ ಅಂತಾ ಹೇಳಲಾಗಿತ್ತು. ಅಷ್ಟೇ ಅಲ್ಲ, ಯಶ್ ಹಾಗು ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಕಥೆ ಹೇಳಿ ಮಾತುಕತೆ ಕೂಡ ಆಗಿದೆ ಅಂತಾ ಯಶ್ ಆಪ್ತರಿಂದ ಕೇಳಿಬಂದಿತ್ತು. ಈಗ ಕೆವಿನ್ ಸಂಸ್ಥೆ ನಿರ್ದೇಶಕ ನರ್ತನ್ ಹುಟ್ಟು ಹಬ್ಬಕ್ಕೆ ವಿಶ್ ಮಾಡಿರೋದು ನೋಡಿದ್ರೆ ಯಶ್ 19ನೇ ಸಿನಿಮಾವನ್ನು ನರ್ತನ್ ನಿರ್ದೇಶನ ಮಾಡ್ತಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಕನ್ನಡ ಚಿತ್ರರಂಗದ ಎವರ್‌ಗ್ರೀನ್ ನಾಗರಹಾವು ಸಿನಿಮಾಗೆ 50 ವರ್ಷಗಳ ಸಂಭ್ರಮ
ಇದರ ಜೊತೆಗೆ, ಯಶ್ ತಮ್ಮ ಹುಟ್ಟುಹಬ್ಬಕ್ಕೆ ಮಗಳು ಐರಾ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ಅನೌನ್ಸ್ ಮಾಡುವ ಮೂಲಕ ತಮ್ಮ 19ನೇ ಸಿನಿಮಾವನ್ನು ತಮ್ಮ ಬ್ಯಾನರ್ನಲ್ಲಿಯೇ ಮಾಡ್ತಾರೆ ಅಂತಾ ಕೂಡ ಹೇಳಲಾಗುತ್ತಿದೆ. ಸದ್ಯಕ್ಕೆ ಕೆವಿಎನ್ ಪ್ರೊಡಕ್ಷನ್ ನಿರ್ದೇಶಕ ನರ್ತನ್ ಜೊತೆ ಸಿನಿಮಾ ಮಾಡೋದು ಕನ್ಫರ್ಮ್ ಆಗಿದೆ. ಮುಂದಿನ ಬೆಳವಣಿಗೆಯನ್ನು ಕಾದು ನೋಡಬೇಕಿದೆ.