ರಾಕಿಂಗ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಆಗಾಗ, ತಮ್ಮ ಮಕ್ಕಳ ಕ್ಯೂಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಾರೆ. ಇದೀಗ ಪುತ್ರ ಯಥರ್ವ್ ಮತ್ತು ಯಶ್ ಸಂಭಾಷಣೆಯ ಮುದ್ದಾದ ವಿಡಿಯೋ ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ನೀನು ಬ್ಯಾಡ್ ಬಾಯ್ ಎಂದು ಅಪ್ಪನಿಗೆ ಯಥರ್ವ್ ಕಾಲೆಳೆದಿದ್ದಾನೆ.
ಅಂದು ಅಪ್ಪನ 'ಐ ಆ್ಯಮ್ ಯುವರ್ ಡ್ಯಾಡ್' ಡೈಲಾಗ್ ವೈರಲ್.. ಈಗ ಮಗನ 'ಡ್ಯಾಡ್ ಇಸ್ ಬ್ಯಾಡ್ ಬಾಯ್' ಫೇಮಸ್ - ರಾಧಿಕಾ ಪಂಡಿತ್ ಕ್ಯೂಟ್ ವಿಡಿಯೋ
ಯು ಆರ್ ಬ್ಯಾಡ್ ಬಾಯ್ ಎಂದು ರಾಕಿಂಗ್ ಸ್ಟಾರ್ ಯಶ್ಗೆ ಪುತ್ರ ಯಥರ್ವ್ ಕಾಲೆಳೆದಿದ್ದಾನೆ.
'ಅಮ್ಮಾ ಗುಡ್ ಗರ್ಲ್, ನೀನು ಬ್ಯಾಡ್ ಬಾಯ್' ಎಂದು ಯಥರ್ವ್ ಹೇಳಿದ್ದಾನೆ. ಯಶ್ ಎಷ್ಟೇ ಸಲ, ಕೇಳಿದರೂ ಕೂಡ ಯಥರ್ವ್ ಮತ್ತೆ ಮತ್ತೆ ಬ್ಯಾಡ್ ಬಾಯ್ ಎಂದು ಪುನರುಚ್ಚರಿಸಿದ್ದಾನೆ. ಆಗ ನಗುತ್ತಲೇ ಯಶ್, ಹೋಗೋ ಲೇ ಇವನೊಬ್ಬ ಬಾಕಿ ಇದ್ದ ಎಂದಿದ್ದಾರೆ. ಯಾವುದೋ ಕಾರಣಕ್ಕೆ ಯಥರ್ವ್ ಹಠ ಮಾಡುತ್ತಿದ್ದಾಗ ಈ ಸಂಭಾಷಣೆ ನಡೆದಿದೆ. ಮಗನ ಮುದ್ದು ಮಾತಿಗೆ ರಾಧಿಕಾ ಕೂಡ ನಕ್ಕಿದ್ದಾರೆ.
ಈ ಮೊದಲು ಕೆಜಿಎಫ್ ಚಾಪ್ಟರ್-1ರಲ್ಲಿ 'ಇಫ್ ಯು ಆರ್ ಬ್ಯಾಡ್, ಐ ಆ್ಯಮ್ ಯುವರ್ ಡ್ಯಾಡ್' ಎಂದು ಯಶ್ ಹೇಳಿದ್ದ ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಯಥರ್ವ್ನ ಬ್ಯಾಡ್ ಬಾಯ್ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುಮಾರು 5 ಲಕ್ಷದಷ್ಟು ಜನರು ಲೈಕ್ ಮಾಡಿದ್ದರೆ, ಸಾವಿರಾರು ಕಾಮೆಂಟ್ಗಳು ವ್ಯಕ್ತವಾಗಿವೆ..