ಕರ್ನಾಟಕ

karnataka

ETV Bharat / entertainment

ಅಬ್ಬಬ್ಬಾ..! ರಾಕಿ ಬಾಯ್ ಕಟ್ಟಿದ ವಾಚ್ ಬೆಲೆ ಎಷ್ಟು ಗೊತ್ತಾ!? - rocking star watch price

ಕೆಜಿಎಫ್ ಸಿನಿಮಾ‌ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿರುವ ರಾಕಿಂಗ್​ ಸ್ಟಾರ್​ ಯಶ್ ತಮ್ಮ ದುಬಾರಿ ವಾಚಿನ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

rocking-star-yash-costlier-watch
ರಾಕಿ ಬಾಯ್ ಕಟ್ಟಿದ ವಾಚ್ ಬೆಲೆ ಎಷ್ಟು ಕೋಟಿ ಗೊತ್ತಾ!

By

Published : Mar 31, 2022, 7:08 PM IST

ಕನ್ನಡ ಚಿತ್ರರಂಗ ಅಲ್ಲದೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಯಶಸ್ಸಿನ ಉತ್ತುಂಗದಲ್ಲಿರುವ ನಟ ರಾಕಿಂಗ್ ಸ್ಟಾರ್ ಯಶ್, ಕೆಜಿಎಫ್ ಸಿನಿಮಾ‌ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಸ್ಯಾಂಡಲ್ ವುಡ್ ನಿಂದ ಹಿಡಿದು ಬಾಲಿವುಡ್ ತನಕ ಕ್ರೇಜ್ ಹೊಂದಿರುವ ನಟ ರಾಕಿಂಗ್ ಸ್ಟಾರ್, ಸದ್ಯ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಲವರ್ ಬಾಯ್ ಹಾಗು ಮಾಸ್ ಪಾತ್ರಗಳಿಂದ ಪ್ರೇಕ್ಷಕರನನ್ನು ರಂಜಿಸುತ್ತಾ ಬಂದಿದ್ದಾರೆ‌.

ಅಷ್ಟೇ ಅಲ್ಲಾ, ಯಶ್ ತೆರೆ ಮೇಲೆ ಎಷ್ಟು ಸ್ಟೈಲಿಶ್​ ಆಗಿ ಕಾಣಿಸಿಕೊಳ್ಳುತ್ತಾರೋ, ರಿಯಲ್ ಲೈಫ್ ನಲ್ಲೂ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಮಿಂಚುತ್ತಾರೆ. ಯಶ್ ಅವರ ಕಾಸ್ಟ್ಯೂಮ್ ಗೆ ಅವರ ಮ್ಯಾನರಿಸಮ್ ಸರಿಯಾಗಿ ಹೊಂದಿಕೊಳ್ಳುತ್ತವೆ. ಎಲ್ಲ ಕಾರ್ಯಕ್ರಮದಲ್ಲಿ ಯಶ್ ಹಾಕಿಕೊಳ್ಳುವ ಸ್ಟೈಲಿಷ್ ಕಾಸ್ಟ್ಯೂಮ್ ಎಲ್ಲರ ಗಮನ ಸೆಳೆಯುತ್ತಾರೆ. ಇದೀಗ ಇದೇ ವಿಚಾರಕ್ಕೆ ರಾಕಿಂಗ್​ ಸ್ಟಾರ್​ ಟಾಕ್ ಆಫ್ ದಿ ನ್ಯೂಸ್ ಆಗಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಸಿ‌ನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಮತ್ತು ಯಶ್ ದಂಪತಿ

ಕೆಲ ದಿನಗಳ ಹಿಂದೆ ಕೆಜಿಎಫ್ ಚಾಪ್ಟರ್ 2 ಸಿ‌ನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಪತ್ನಿ ರಾಧಿಕಾ ಪಂಡಿತ್ ಜೊತೆ ಸ್ಟೈಲಿಶ್​ ಆಗಿ ಭಾಗವಹಿಸಿದ್ದರು. ಅಷ್ಟೇ ಅಲ್ಲಾ, ಯಶ್ ತಮ್ಮ ದುಬಾರಿ ಕೈ ಗಡಿಯಾರದ ಮೂಲಕ ಸುದ್ದಿ ಆಗಿದ್ದಾರೆ. ಹೌದು, ನಟ ಯಶ್ ಧರಿಸಿದ್ದ ವಾಚ್, ಪಟೆಕ್ ಫಿಲಿಪ್ ಕಂಪನಿಯದ್ದು ಎಂದು ಹೇಳಲಾಗ್ತಿದೆ. ಈ ವಾಚ್​ನ ಬೆಲೆ ಸರಿ ಸುಮಾರು 3.50 ಕೋಟಿ ಎಂದು ಅಂದಾಜಿಸಲಾಗಿದೆ. ಯಶ್ ಧರಿಸಿದ್ದು ಜಗತ್ತಿನ ಅತ್ಯಂತ ದುಬಾರಿ ವಾಚ್ ಬ್ರಾಂಡ್‌ಗಳಲ್ಲಿ ಒಂದು.

ಈ ವಾಚನ್ನು ದುಬಾರಿ ರೋಸ್ ಗೋಲ್ಡ್‌ನಿಂದ ತಯಾರಿಸಲಾಗಿದೆ. ಜೊತೆಗೆ ಅತ್ಯಂತ ಉತ್ಕೃಷ್ಟವಾದ ಲೋಹಗಳನ್ನು ಈ ಕೈಗಡಿಯಾರಕ್ಕೆ ಬಳಸಲಾಗಿದೆ. ಎರಡು ಶತಮಾನದ ಇತಿಹಾಸ ಈ ವಾಚ್‌ಗಿದೆ ಎಂದು ಹೇಳಲಾಗ್ತಿದೆ. ಆದರೆ ಯಶ್ ಆಪ್ತರು ಹೇಳುವ ಪ್ರಕಾರ ಅಷ್ಟೊಂದು ಬೆಲೆಯ ವಾಚ್ ಅಲ್ಲಾ, ಒಂದು ಮಟ್ಟಿಗೆ ಇದೆ ಎಂದಿದ್ದಾರೆ. ಒಟ್ಟಾರೆ ಯಶ್ ಕಟ್ಟಿಕೊಂಡಿದ್ದ ದುಬಾರಿ ವಾಚ್ ಬೆಲೆ ಕೇಳಿ ಅಭಿಮಾನಿಗಳು ಖುಷ್ ಆಗಿದ್ದಾರೆ.

ಓದಿ :'ಗುಡ್‌ಬೈ' ಚಿತ್ರದ ಸೆಟ್‌ನಿಂದ ಹರಿದಾಡುತ್ತಿರುವ ಬಿಗ್​​ಬಿ-ರಶ್ಮಿಕಾ ಫೋಟೋ; 'ಸರ್, ಇವರು ಶ್ರೀವಲ್ಲಿ.. ಪುಷ್ಪ ಅಲ್ಲ' ಎಂದ ನೆಟಿಜನ್ಸ್​

ABOUT THE AUTHOR

...view details