ಕರ್ನಾಟಕ

karnataka

ETV Bharat / entertainment

ಹೊಸ ಪ್ರತಿಭೆಗಳ ರಿಯಾ ಸಿನಿಮಾಗೆ ಸಾಥ್ ಕೊಟ್ಟ ಒಳ್ಳೆ ಹುಡುಗ ಪ್ರಥಮ್ - Riya movie trailer

ಶಿಕ್ಷಕಿ ವಿಜಯಾ ನರೇಶ್ ಎಂಬುವರು ರಿಯಾ ಸಿನಿಮಾದ ನಿರ್ದೇಶನ ಮಾಡಿದ್ದು, ಇದೇ ತಿಂಗಳು 16ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ. ಅವರ ಪತಿ ಕಣಿಗೊಂಡ ನರೇಶ್ ಚಿತ್ರದ ನಿರ್ಮಾಣ ಮಾಡಿದ್ದಾರೆ.

Riya movie trailer released
Riya movie trailer released

By

Published : Sep 7, 2022, 3:02 PM IST

Updated : Sep 7, 2022, 3:09 PM IST

ಒಳ್ಳೆ ಕಂಟೆಂಟ್, ಹೊಸ ಕಾನ್ಸೆಪ್ಟ್ ಇಟ್ಟುಕೊಂಡು ಹೊಸ ಪ್ರತಿಭೆಗಳು ಈ ಸಿನಿಮಾ ಎಂಬ ಮಾಯಾ ಲೋಕಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ 'ರಿಯಾ' ಅಂತಾ ಟೈಟಲ್​​ನೊಂದಿಗೆ ಹೊಸ ಚಿತ್ರತಂಡ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದೆ. ಯುವ ನಟ ಕಾರ್ತಿಕ್ ವರ್ಣೆಕರ್ ಹಾಗೂ ಸಾವಿತ್ರಿ ಮುಖ್ಯ ಭೂಮಿಕೆಯ ರಿಯಾ ಚಿತ್ರದ ಟ್ರೈಲರ್ ಅನ್ನು ಒಳ್ಳೆ ಹುಡುಗ ಪ್ರಥಮ್ ಹಾಗೂ ಸ್ತಬ್ಧ ಚಿತ್ರದ ನಾಯಕ ಪ್ರತಾಪ್ ಸಿಂಹ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು.

ರಿಯಾ ಚಿತ್ರದ ಟ್ರೈಲರ್ ಬಿಡುಗಡೆ

ಆಂಧ್ರಪ್ರದೇಶದ ವಿಜಯಾ ನರೇಶ್ ಎಂಬುವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಜಯಾ ನರೇಶ್ ಶಿಕ್ಷಕಿಯಾಗಿದ್ದು,ಅವರ ಪತಿ ಕಣಿಗೊಂಡ ನರೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಒಂದು ಹಾರರ್ ಸಿನಿಮಾ ಆಗಿದ್ದು, ಹದಿನಾಲ್ಕು ಪಾತ್ರಗಳ ಜೊತೆಗೆ ಒಂದೇ ಮನೆಯಲ್ಲಿ ಈ ಚಿತ್ರದ ಕಥೆ ನಡೆಯುತ್ತದೆ. ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇದೇ 16ರಂದು ಚಿತ್ರ ಬಿಡುಗಡೆಯಾಗಲಿದೆ. ನೋಡಿ ಹಾರೈಸಿ ಎಂದು ಪ್ರಮುಖ ಪಾತ್ರಧಾರಿ ಕಾರ್ತಿಕ್ ವರ್ಣೆಕರ್ ಮನವಿ ಮಾಡಿಕೊಂಡಿದ್ದಾರೆ.

ನಾಯಿಕಿ ಸಾವಿತ್ರಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಕಲಾವಿದರಾದ ವಿಕಾಸ್, ಶ್ವೇತಾ, ರಾಜ್ ಉದಯ್ ಮುಂತಾದವರು ತಮ್ಮ ಪಾತ್ರ ಪರಿಚಯ ಮಾಡಿಕೊಂಡರು. 'ರಿಯಾ' ಪಾತ್ರಧಾರಿ ಬೇಬಿ ಅನನ್ಯ ಸಹ ತಮ್ಮ ಅನುಭವ ಹಂಚಿಕೊಂಡರು. ವಿತರಕರಾದ ಪಿವಿಆರ್ ಸ್ವಾಮಿ, ಚೇತನ್ ಹಾಗೂ ಚಿತ್ರತಂಡದ ಅನೇಕ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ 'ರಿಯಾ' ಚಿತ್ರದ ನಿರ್ಮಾಪಕ ಕಣಿಗೊಂಡ ನರೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹಾರರ್ ಕಥೆ ಆಧರಿಸಿರೋ ಈ ಸಿನಿಮಾ ಇದೇ ತಿಂಗಳು 16ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ. ಶಿಕ್ಷಕಿಯೊಬ್ಬರು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು ವಿಶೇಷ.

ಇದನ್ನೂ ಓದಿ:ಬೆಂಗಳೂರು ಶಾಸಕರ ರಿಯಲ್ ಎಸ್ಟೇಟ್ ದಂಧೆ ಬಗ್ಗೆ ಧ್ವನಿ ಎತ್ತಿದ ಮೋಹಕ ತಾರೆ

Last Updated : Sep 7, 2022, 3:09 PM IST

ABOUT THE AUTHOR

...view details