ಲಾಸ್ ಏಂಜಲೀಸ್: ರಿವರ್‌ಡೇಲ್ ಮತ್ತು ಡೈರಿ ಆಫ್ ಎ ವಿಂಪಿ ಕಿಡ್ನಲ್ಲಿ ಅಭಿನಯಿಸಿದ್ದ ನಟ ರಿಯಾನ್ ಗ್ರಂಥಮ್ ( Ryan Grantham) ಅವರು ತನ್ನ ತಾಯಿಯನ್ನೇ ಕೊಂದ ಆರೋಪ ಸಾಬೀತಾದ ಹಿನ್ನೆಲೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕೊಲೆ ಶಿಕ್ಷೆಯನ್ನು ಬ್ರಿಟಿಷ್ ಕೊಲಂಬಿಯಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕ್ಯಾಥ್ಲೀನ್ ಕೆರ್ ಸೆಪ್ಟೆಂಬರ್ 21 ರಂದು ನೀಡಿದರು.
ನಾಟಕ ರಿವರ್‌ಡೇಲ್‌ನಲ್ಲಿ ಜೆಫ್ರಿ ಅಗಸ್ಟೀನ್ ಪಾತ್ರವನ್ನು ನಿರ್ವಹಿಸಿದ್ದ 24 ವರ್ಷದ ರಿಯಾನ್ ಗ್ರಂಥಮ್ ಅವರಿಗೆ ಬುಧವಾರ ವ್ಯಾಂಕೋವರ್‌ನ ಬ್ರಿಟಿಷ್ ಕೊಲಂಬಿಯಾ ಸುಪ್ರೀಂ ಕೋರ್ಟ್‌ನಲ್ಲಿ ಶಿಕ್ಷೆ ವಿಧಿಸಲಾಯಿತು. ಎರಡನೇ ಹಂತದ ಕೊಲೆ ತನಿಖೆಯಲ್ಲಿ ಅವರು ತಪ್ಪೊಪ್ಪಿಕೊಂಡ ಹಿನ್ನೆಲೆ ಆರೋಪ ರುಜುವಾತಾಗಿದೆ. ತಾಯಿ ಅಲ್ಲದೇ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಸಹ ಕೊಲ್ಲಲು ಅವರು ಸಂಚು ರೂಪಿಸಿದ್ದರು ಎಂದು ವಕೀಲರು ತಿಳಿಸಿದ್ದಾರೆ.