ಕರ್ನಾಟಕ

karnataka

ETV Bharat / entertainment

ಸಖತ್​ ಕ್ಯೂಟ್​ ರಿತೇಶ್​ ಜೆನಿಲಿಯಾ ಲವ್​ ಸ್ಟೋರಿ - ವಿಡಿಯೋ ನೋಡಿ - ಜರಾ ಹಟ್ಕೆ ಜರಾ ಬಚ್ಕೆ

ನಟ ರಿತೇಶ್ ದೇಶ್‌ಮುಖ್ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

Riteish Genelia  love story
ರಿತೇಶ್​ ಜೆನಿಲಿಯಾ ಲವ್​ಸ್ಟೋರಿ

By

Published : Jun 4, 2023, 5:35 PM IST

ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ ಭಾರತೀಯ ಚಿತ್ರರಂಗದ ಆದರ್ಶ ದಂಪತಿಗಳ ಪೈಕಿ ಪ್ರಮುಖರು. ಸಿನಿಮಾ ಜೊತೆ ಜೊತೆಗೆ ತಮ್ಮ ಲವ್​ ಸ್ಟೋರಿ ಮೂಲಕ ಗಮನ ಸೆಳೆಯುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವುದರ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಅವರ ಹೊಸ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.

ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅಭಿನಯದ 'ಜರಾ ಹಟ್ಕೆ ಜರಾ ಬಚ್ಕೆ' (zara hatke zara bachke) ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಎರಡು ದಿನಗಳಲ್ಲಿ ಬಾಕ್ಸ್​ ಆಫೀಸ್​ನಲ್ಲಿ 12.69 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಚಿತ್ರದ ಫಿರ್ ಔರ್ ಕ್ಯಾ ಚಾಹಿಯೇ ಗೀತೆ ಬಳಸಿಕೊಂಡು ಮಾಡಿರುವ ವಿಡಿಯೋವೊಂದನ್ನು ರಿತೇಶ್​ ಹಂಚಿಕೊಂಡಿದ್ದಾರೆ. ನಟ ರಿತೇಶ್ ದೇಶ್‌ಮುಖ್ ಇನ್​​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಸಂಚರಿಸುತ್ತಾ ಮೈ ಕುಣಿಸಿದ್ದಾರೆ. ಹಾಡಿನ ಪ್ರತಿ ಬೀಟ್ ಅನ್ನು ಆನಂದಿಸುತ್ತ ಸಾಕಷ್ಟು ಮೋಜು ಮಾಡುತ್ತಿದ್ದಾರೆ. 'ಫಿರ್ ಔರ್ ಕ್ಯಾ ಚಾಹಿಯೇ' ಅನ್ನು ಆನಂದಿಸಿದ್ದಾರೆ.

ವಿಡಿಯೋವನ್ನು ಹಂಚಿಕೊಂಡ ಅವರು, "ತು ಹೈ ತೋ ಮುಜೆ ಫಿರ್ ಔರ್ ಕ್ಯಾ ಚಾಹಿಯೇ, ಮೆಚ್ಚಿನ ಹಾಡು, ಮೆಚ್ಚಿನ ಹುಡುಗಿ ಜೆನಿಲಿಯಾ" ಎಂದು ಬರೆದಿದ್ದಾರೆ. ಜೆನಿಲಿಯಾ ಕಪ್ಪು ಬಣ್ಣದ ಟೀ ಶರ್ಟ್‌, ಆರೆಂಜ್ ಪ್ಯಾಂಟ್​ ಧರಿಸಿದ್ದರು. ಮತ್ತೊಂದೆಡೆ, ರಿತೇಶ್ ನೀಲಿ ಬಿಳಿ ಬಣ್ಣದ ಟೀ ಶರ್ಟ್​​, ಗ್ರೇ ಕಲರ್​ ಪ್ಯಾಂಟ್​ನಲ್ಲಿ ಕಾಣಿಸಿಕೊಂಡರು. ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆ, ನೆಟಿಜನ್‌ಗಳು ಮತ್ತು ಸಿನಿ ಉದ್ಯಮದ ಸದಸ್ಯರು ಕಾಮೆಂಟ್ ವಿಭಾಗದಲ್ಲಿ ಬ್ಯುಸಿಯಾದರು.

ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಕಾಮೆಂಟ್​ ಮಾಡಿ, "ನೀವು ಅತ್ಯಂತ ಸುಂದರ ಹುಡುಗಿಯನ್ನು ನಿಮ್ಮ ಜೀವನ ಸಂಗಾತಿಯಾಗಿ ಪಡೆದಾಗ" ಎಂದು ಬರೆದಿದ್ದಾರೆ. ಉಳಿದಂತೆ ಫೈಯರ್​, ಹಾರ್ಟ್ ಎಮೋಜಿಯೊಂದಿಗೆ ನೆಟ್ಟಿಗರು ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.

'ತುಜೆ ಮೇರಿ ಕಸಮ್' ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು. ಶೂಟಿಂಗ್ ಸಮಯದಲ್ಲೇ ಪ್ರೀತಿ ಚಿಗುರೊಡೆದಿತ್ತು. 'ಮಸ್ತಿ' ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ಕೆಲಸ ಮಾಡಿದ ಈ ಜೋಡಿ, ಸುಮಾರು 9 ವರ್ಷಗಳವರೆಗೆ ತಮ್ಮ ಪ್ರೀತಿಯನ್ನು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. 2012ರಲ್ಲಿ ಮರಾಠಿ, ಕ್ರಿಶ್ಚಿಯನ್​ ಸಂಪ್ರದಾಯದ ಪ್ರಕಾರ ವೈವಾಹಿಕ ಜೀವನ ಆರಂಭಿಸಿದರು. 2014ರ ನವೆಂಬರ್​ನಲ್ಲಿ ಮೊದಲ ಮಗ ರಿಯಾನ್ ನ ಪೋಷಕರಾಗಿ ಭಡ್ತಿ ಪಡೆದರೆ, 2016ರಲ್ಲಿ ರಹಿಲ್ ಎಂಬ ಪುತ್ರನಿಗೆ ಜನ್ಮ ನೀಡಿದರು ಜೆನಿಲಿಯಾ.

ಕೆಲಸದ ವಿಚಾರ ಗಮನಿಸುವುದಾದರೆ, ಜೆನಿಲಿಯಾ ಮತ್ತು ರಿತೇಶ್​ ಇತ್ತೀಚೆಗೆ ತೆರೆಕಂಡ ವೇದ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಮೂಲಕ ಜೆನಿಲಿಯಾ ಮರಾಠಿ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಇದು ರಿತೇಶ್ ದೇಶ್​​ಮುಖ್ ನಿರ್ದೇಶನದ ಚೊಚ್ಚಲ ಚಿತ್ರ. ಜೆನಿಲಿಯಾ ತೆಲುಗು ಚಿತ್ರರಂಗಕ್ಕೆ ರೀ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:'ಸತ್ಯಪ್ರೇಮ್ ಕಿ ಕಥಾ'.. ನಾಳೆ ಬಿಡುಗಡೆಯಾಗಲಿದೆ 2023ರ ಬಹುನಿರೀಕ್ಷಿತ ಸಿನಿಮಾದ ಟ್ರೇಲರ್

ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಕರ್ನಾಟಕದ ಮಾಜಿ ಸಚಿವ ಮತ್ತು ಜನಪ್ರಿಯ ಕೈಗಾರಿಕೋದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರ ಮಗ ಕಿರೀಟಿ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದು ತೆಲುಗು ಕನ್ನಡ ದ್ವಿಭಾಷಾ ಚಿತ್ರವಾಗಿದ್ದು, ಈ ಚಿತ್ರವನ್ನು ನಿರ್ದೇಶಕ ರಾಧಾ ಕೃಷ್ಣ ನಿರ್ದೇಶಿಸಿದ್ದಾರೆ. ಮತ್ತೊಂದೆಡೆ, ರಿತೇಶ್ 100% ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾರರ್ ಕಾಮಿಡಿ ಚಿತ್ರ 'ಕಾಕುಡ'ದಲ್ಲಿ ಸೋನಾಕ್ಷಿ ಸಿನ್ಹಾ ಮತ್ತು ಸಾಕಿಬ್ ಸಲೀಮ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ABOUT THE AUTHOR

...view details